ದೆಹಲಿ: ದೇಶದಲ್ಲಿ ಕೊರೊನಾ ಪಿಡುಗು ತಗ್ಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲು ಸಂಚಾರವನ್ನು ಹಂತಹಂತವಾಗಿ ಆರಂಭಿಸಿದೆ. ಉತ್ತರ ರೈಲ್ವೆಯು ರಿಸರ್ವೇಶನ್ ಇಲ್ಲದ ಮೈಲ್ ಮತ್ತು ಎಕ್ಸ್ಪ್ರೆಸ್ ರೈಲುಗಳನ್ನು ಆರಂಭಿಸುವುದಾಗಿ ಘೋಷಿಸಿದೆ. ಶಾಮ್ಲಿ, ದೆಹಲಿ, ಶದಾರಾ, ಪ್ರಯಾಗ್ರಾಜ್ ಸಂಗಮ್, ಫೈಜಾಬಾದ್ ಮತ್ತು ಜೌನ್ಪುರ್ ಮಾರ್ಗಗಳಲ್ಲಿ ಹೊಸ ರೈಲುಗಳು ಅಕ್ಟೋಬರ್ 1ರಿಂದ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ‘ಭಾನುವಾರ ಹೊರತುಪಡಿಸಿ ಅಕ್ಟೋಬರ್ 1ರಿಂದ ಪ್ರತಿದಿನ ಅನ್ರಿಸರ್ವ್ಡ್ ಮೈಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು ಸಂಚರಿಸಲಿವೆ’ ಎಂದು ರೈಲ್ವೆ ಇಲಾಖೆ ವಕ್ತಾರ ದೀಪಕ್ ಕುಮಾರ್ ಹೇಳಿದ್ದಾರೆ.
ರೈಲುಗಳ ವಿವರ
ಶಾಮ್ಲಿ-ದೆಹಲಿ ಶಾಹ್ದಾರಾ ಸ್ಪೆಷಲ್ ಟ್ರೇನ್, ಪ್ರಯಾಗ್ರಾಜ್ ಸಂಗಮ್-ಫೈಜಾಬಾದ್-ಪ್ರಯಾಗ್ರಾಜ್ ಸಂಗಮ್ ಅನ್ರಿಸರ್ವಡ್ ಎಕ್ಸ್ಪ್ರೆಸ್, ಪ್ರಯಾಗ್ರಾಜ್ ಸಂಗಮ್-ಜೌನ್ಪುರ್ ಅನ್ರಿಸರ್ವಡ್ ಮೈಲ್ ರೈಲುಗಳ ಸಂಚಾರ ಅಕ್ಟೋಬರ್ 1ರಿಂದ ಆರಂಭವಾಗಲಿದೆ.
ಚಾರ್ಧಾಮ್ಗೆ ಶೀಘ್ರ ಸುಲಭ ಸಂಪರ್ಕ
ಹೃಷಿಕೇಶ್-ಕರ್ಣಪ್ರಯಾಗ್ ರೈಲು ಹಳಿ ಯೋಜನೆ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವ ದರ್ಶನಾ ಜಾರ್ದೋಶ್ ಹೇಳಿದ್ದಾರೆ. ಉತ್ತರಾಖಂಡದ ಹೃಷಿಕೇಶ್-ಕರ್ಣಪ್ರಯಾಗ್ ರೈಲ್ವೆ ಮಾರ್ಗದ ಪ್ರಗತಿ ಪರಿಶೀಲನೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಮಾರ್ಗದಲ್ಲಿ 15.1 ಕಿಮೀ ಅಂತರದ ಸುರಂಗ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಹೃಷಿಕೇಶ್-ಕರ್ಣಪ್ರಯಾಗ್ ರೈಲು ಮಾರ್ಗವು 125 ಕಿಮೀ ದೂರದಲ್ಲಿ ಸಾಗಿ ಹೋಗುತ್ತದೆ. ಈ ಮಾರ್ಗದಲ್ಲಿ ಶ್ರೀನಗರ, ರುದ್ರಪ್ರಯಾಗ, ದೇವಪ್ರಯಾಗ, ಕರ್ಣಪ್ರಯಾಗ, ಗೌಚಾರ್, ಡೆಹ್ರಾಡೂನ್, ಪೌರಿ ಗರ್ವಾಲ್, ತೆಹ್ರಿ ಗರ್ವಾಲ್, ಚಮೋಲಿ ನಿಲ್ದಾಣಗಳು ಬರುತ್ತವೆ.
(Unreserved Trains to Start from October 1 says Indian Railways Spokesperson)
ಇದನ್ನೂ ಓದಿ: ಅದ್ದೂರಿಯಾಗಿ ಆರಂಭವಾದ 6 ತಿಂಗಳಿಗೆ ನಿಂತ ಕೆಂಪೇಗೌಡ ಏರ್ಪೋರ್ಟ್ ರೈಲು; ಲಾಕ್ಡೌನ್ ಮುಗಿದರೂ ಸಂಚಾರ ಸ್ಥಗಿತ
ಇದನ್ನೂ ಓದಿ: Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆ