Uttar Pradesh: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲಾ 17 ಮೇಯರ್​ ಸ್ಥಾನಗಳು ಬಿಜೆಪಿ ತೆಕ್ಕೆಗೆ

|

Updated on: May 14, 2023 | 10:44 AM

ಉತ್ತರಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ 17 ಸ್ಥಾನಗಳಲ್ಲಿ ಪ್ರಚಂಡ ಜಯ ಗಳಿಸಿದೆ. 600ಕ್ಕೂ ಹೆಚ್ಚು ವಾರ್ಡ್​​ಗಳಲ್ಲಿ ಜಯಭೇರಿ ಬಾರಿಸಿದೆ.

Uttar Pradesh: ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ: ಎಲ್ಲಾ 17 ಮೇಯರ್​ ಸ್ಥಾನಗಳು ಬಿಜೆಪಿ ತೆಕ್ಕೆಗೆ
ಬಿಜೆಪಿ
Follow us on

ಉತ್ತರಪ್ರದೇಶದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ 17 ಸ್ಥಾನಗಳಲ್ಲಿ ಪ್ರಚಂಡ ಜಯ ಗಳಿಸಿದೆ. 600ಕ್ಕೂ ಹೆಚ್ಚು ವಾರ್ಡ್​​ಗಳಲ್ಲಿ ಜಯಭೇರಿ ಬಾರಿಸಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಪತಾಕೆ ಹಾರಿಸಿದ್ದ ಬಿಜೆಪಿಯು ಉತ್ತರ ಪ್ರದೇಶ ಪಾಲಿಕೆ ಚುನಾವಣೆಯಲ್ಲೂ ಗೆಲುವು ತನ್ನದಾಗಿಸಿಕೊಂಡಿದೆ. ಮೊದಲಿಗೆ ಝಾನ್ಸಿ ಮುನ್ಸಿಪಲ್ ಕಾರ್ಪೊರೇಷನ್ ಫಲಿತಾಂಶ ಪ್ರಕಟವಾಯಿತು, ನಂತರ ಫಲಿತಾಂಶಗಳು ಒಂದರ ನಂತರ ಒಂದರಂತೆ ಬರಲಾರಂಭಿಸಿದವು.

ಕಳೆದ ಬಾರಿ ಬಿಎಸ್​ಪಿ ವಶದಲ್ಲಿದ್ದ ಮೀರತ್​ ಕ್ಷೇತ್ರವನ್ನೂ ಬಿಜೆಪಿ ಗೆದ್ದುಕೊಂಡಿದೆ. ಲಕ್ನೋ, ಗೋರಖ್​ಪುರ್, ಮಥುರಾ-ವೃಂದಾವನ, ಸಹರಾನ್​ಪುರ, ಮೊರಾದಾಬಾದ್, ಬರೇಲಿ, ವಾರಾಣಸಿ, ಪ್ರಯಾಗ್​ರಾಜ್, ಅಯೋಧ್ಯೆ, ಷಹಜಹಾನ್​ಪುರ, ಅಲಿಗಢ, ಆಗ್ರಾ, ಕಾನ್ಪುರ ಹಾಗೂ ಫಿರೋಜಾಬಾದ್​ನಲ್ಲಿಯೂ ಬಿಜೆಪಿ ಕಮಲ ಅರಳಿಸಿದೆ.

ಇದಲ್ಲದೇ ನಗರಸಭೆಯ 199 ಸ್ಥಾನಗಳ ಪೈಕಿ 31 ಮತ್ತು ನಗರ ಪಂಚಾಯತ್​ನ 544ರಲ್ಲಿ 107 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.
ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಪಕ್ಷವು ಪ್ರಮುಖವಾಗಿ 17 ನಗರಸಭೆಗಳ ಮೇಯರ್​ ಸ್ಥಾನವನ್ನು ಗೆದ್ದಿರುವುದು ಮತ್ತಷ್ಟು ವಿಶೇಷವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ 2017ರಲ್ಲಿ ನಮ್ಮ ಪಕ್ಷವು 60 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಈ ಭಾರಿ ನಿರೀಕ್ಷೆಗೂ ಮೀರಿ ಫಲಿತಾಂಶ ಬಂದಿರುವುದು ಸಂತಸ ತಂದಿದೆ.

ಮತ್ತಷ್ಟು ಓದಿ: ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಯಾರಾಗ್ತಾರೆ ಶಾಸಕಾಂಗ ಪಕ್ಷದ ನಾಯಕ?

ಉತ್ತರ ಪ್ರದೇಶ ಸರ್ಕಾರವು ಅಭಿವೃದ್ದಿ ಹಾಗೂ ಜನರ ಸುರಕ್ಷತೆಯ ಹಿತದೃಷ್ಟಿಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸುತ್ತೇವೆ ಎಂದು ಮಾತನಾಡುವ ವೇಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವನೆ ಘೋಷಣೆಯಾದ ಬಳಿಕ ಯುಪಿ ಸಿಎಂ ಯೋಗಿ ಆದುತ್ಯನಾಥ್​ 50ಕ್ಕೂ ಹೆಚ್ಚು ರ್‍ಯಾಲಿಗಳನ್ನು ನಡೆಸಿದ್ದರು ಮತ್ತು ಸುಭದ್ರ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕರೆ ನೀಡಿದ್ದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯ ಗಳಿಸುವ ಮೂಲಕ ಲಕ್ನೋ, ಪ್ರಯಾಗ್‌ರಾಜ್, ವಾರಣಾಸಿ, ಮೀರತ್, ಸಹರಾನ್‌ಪುರ, ಅಯೋಧ್ಯೆ, ಕಾನ್ಪುರ್, ಬರೇಲಿ, ಮೊರಾದಾಬಾದ್, ಆಗ್ರಾ, ಅಲಿಗಢ, ಫಿರೋಜಾಬಾದ್, ಗೋರಖ್‌ಪುರ, ಗಾಜಿಯಾಬಾದ್, ಝಾನ್ಸಿ, ಮಥುರಾ ಮತ್ತು ಶಹಜಹಾನ್‌ಪುರ ನಗರಸಬೆ ಮೇಯರ್​ ಸ್ಥಾನಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ