UPSC Recruitment 2021: ಯುಪಿಎಸ್​ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ

|

Updated on: Mar 28, 2021 | 11:46 AM

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ.ನ್ನು SBI ಬ್ಯಾಂಕ್​​ನ ಯಾವುದೇ ಶಾಖೆಯ ಮೂಲಕ ನಗದು ರೂಪದಲ್ಲಿ ಅಥವಾ ಎಸ್​ಬಿಐ ನೆಟ್​ ಬ್ಯಾಂಕಿಂಗ್​​ ಮೂಲಕ ಅಥವಾ ವಿಸಾ/ ಮಾಸ್ಟರ್​ ಕ್ರೆಡಿಟ್​/ ಡೆಬಿಟ್​ ಕಾರ್ಡ್​ಗಳ ಮೂಲಕ ತುಂಬಬಹುದು.

UPSC Recruitment 2021: ಯುಪಿಎಸ್​ಸಿಯಿಂದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾನ
ಪ್ರಾತಿನಿಧಿಕ ಚಿತ್ರ
Follow us on

ಕೇಂದ್ರ ಲೋಕಸೇವಾ ಆಯೋಗ (UPSC) ಅಸಿಸ್ಟಂಟ್ ಪ್ರೊಫೆಸರ್​ (ಸಹಾಯಕ ಪ್ರಾಧ್ಯಾಪಕ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಇರುವ, ಅರ್ಹ ಅಭ್ಯರ್ಥಿಗಳು ಯುಪಿಎಸ್​ಸಿಯ upsc.gov.in. ವೆಬ್​​ಸೈಟ್​ಗೆ ಮೂಲಕ ಅರ್ಜಿ ಸಲ್ಲಿಸಬಹುದು. ಅಸಿಸ್ಟಂಟ್​ ಪ್ರೊಫೆಸರ್​ ಹುದ್ದೆಯಲ್ಲಿ ಒಟ್ಟು 28 ವೆಕೆನ್ಸಿ ಇದ್ದು, ಏಪ್ರಿಲ್​​ 15 ಅರ್ಜಿ ಸಲ್ಲಿಸಲು ಕೊನೇ ದಿನ. ಹಾಗೇ, ವೆಬ್​ಸೈಟ್​​ನಲ್ಲಿ ಸಂಪೂರ್ಣವಾಗಿ ತುಂಬಿದ ಅರ್ಜಿಯನ್ನು, ಮುದ್ರಣ ತೆಗೆದು ಕಳಿಸಲು ಏಪ್ರಿಲ್​ 16 ಕೊನೆಯ ದಿನವಾಗಿದೆ.

ಇಲ್ಲಿದೆ ನೋಡಿ ಖಾಲಿ ಹುದ್ದೆಗಳ ವಿವರ

  • ಸಹಾಯಕ ಪ್ರಾಧ್ಯಾಪಕ (ಪೀಡಿಯಾಟ್ರಿಕ್​-ಮಕ್ಕಳ ವೈದ್ಯಶಾಸ್ತ್ರ)-14
  • ಸಹಾಯಕ ಪ್ರಾಧ್ಯಾಪಕ (ಸಿಸಿಯಾಲಜಿ-ಶರೀರ ವಿಜ್ಞಾನ)-2
  • ಸಹಾಯಕ ಪ್ರಾಧ್ಯಾಪಕ-(ಸೈಕಿಯಾಟ್ರಿ-ಮನೋವೈದ್ಯಶಾಸ್ತ್ರ)-11
  • ಸಹಾಯಕ ಪ್ರಾಧ್ಯಾಪಕ-(ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ)-1 ಹುದ್ದೆ

ಅರ್ಹತೆ ಏನಿರಬೇಕು?
ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರಲ್ಲಿ ಸೇರಿಸಲಾದ ಮೊದಲ ಹಾಗೂ ಎರಡನೇ ಅನುಬಂಧ ಅಥವಾ ಮೂರನೇ ಅನುಬಂಧದ ಎರಡನೇ ಭಾಗದಲ್ಲಿ ಇರುವ ಮಾನ್ಯತೆ ಇರುವ ಎಂಬಿಬಿಎಸ್​ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಶುಲ್ಕದ ವಿವರ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 25 ರೂ.ನ್ನು SBI ಬ್ಯಾಂಕ್​​ನ ಯಾವುದೇ ಶಾಖೆಯ ಮೂಲಕ ನಗದು ರೂಪದಲ್ಲಿ ಅಥವಾ ಎಸ್​ಬಿಐ ನೆಟ್​ ಬ್ಯಾಂಕಿಂಗ್​​ ಮೂಲಕ ಅಥವಾ ವಿಸಾ/ ಮಾಸ್ಟರ್​ ಕ್ರೆಡಿಟ್​/ ಡೆಬಿಟ್​ ಕಾರ್ಡ್​ಗಳ ಮೂಲಕ ತುಂಬಬಹುದು. ಆದರೆ ಎಸ್​ಸಿ/ಎಸ್​ಟಿ/ ಪಿಡಬ್ಲ್ಯೂಬಿಡಿ ಸಮುದಾಯಗಳ ಹಾಗೂ ಯಾವುದೇ ಸಮುದಾಯದ ಮಹಿಳೆಯರು ಹಣ ತುಂಬುವ ಅಗತ್ಯ ಇಲ್ಲ.

ಇದನ್ನೂ ಓದಿ:ಕಪ್ಪು ಬಣ್ಣಕ್ಕೆ ತಿರುಗಿದ ಮೆಕ್ಕೆ ಜೋಳ; ಅಕಾಲಿಕ ಮಳೆಯಿಂದ ಹಾವೇರಿ ರೈತರು ಕಂಗಾಲು

ಹೆಲ್ಮೆಟ್ ಧರಿಸದೆ ಡಬಲ್ ರೈಡಿಂಗ್ ಮಾಡುತ್ತಿದ್ದವರ ಮೇಲೆ ಶೂ ಎಸೆದ ಹೆಡ್ ಕಾನ್ಸ್ಟೇಬಲ್.. ಹಳೇ ವಿಡಿಯೋ ಈಗ ವೈರಲ್