Flight Hijack: ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ ಪ್ರಯಾಣಿಕನ ಬಂಧನ, ಹೀಗೆ ಮಾಡಲು ಕಾರಣವೇನು?

|

Updated on: Jan 27, 2023 | 7:44 AM

ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಅಪಹರಣವಾಗಿರುವ ಬಗ್ಗೆ ಸುಳ್ಳು ಟ್ವೀಟ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

Flight Hijack: ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ ಪ್ರಯಾಣಿಕನ ಬಂಧನ, ಹೀಗೆ ಮಾಡಲು ಕಾರಣವೇನು?
ವಿಮಾನ
Follow us on

ದುಬೈನಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಅಪಹರಣವಾಗಿರುವ ಬಗ್ಗೆ ಸುಳ್ಳು ಟ್ವೀಟ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಸುದ್ದಿ ತಿಳಿದ ತಕ್ಷಣ ಅಧಿಕಾರಿಗಳು ಮತ್ತು ಪೊಲೀಸರು ಕಾರ್ಯಾಚರಣೆಗೆ ಇಳಿದರು. ಆದರೆ ಅಪಹರಣದ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ.

ಇದಾದ ಬಳಿಕ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ಪ್ರಯಾಣಿಕನನ್ನು ಬಂಧಿಸಿದ್ದಾರೆ. ಪೊಲೀಸ್ ಉಪ ಕಮಿಷನರ್ (ವಿಮಾನ ನಿಲ್ದಾಣ) ರವಿಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ರಾಜಸ್ಥಾನದ ನಾಗೌರ್ ನಿವಾಸಿ ಮೋತಿ ಸಿಂಗ್ ರಾಥೋಡ್ ಅವರು ದುಬೈ-ಜೈಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು, ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ವಿಮಾನವು ಇಂದಿರಾಗಾಂಧಿ ಏರ್​ಪೋರ್ಟ್​ಗೆ ತಲುಪಿತ್ತು.

ಮತ್ತಷ್ಟು ಓದಿ: ವಿಮಾನ ಅಪಹರಣ: ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಬೆದರಿಕೆ ಹಾಕಿದ್ದ ಯುವ ಪೈಲಟ್​ ಅಂತೂ ವಿಮಾನವನ್ನು ಕೆಳಗಿಳಿಸಿದ!

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು 9:45 ಕ್ಕೆ ಇಳಿಯಿತು ಮತ್ತು ಮಧ್ಯಾಹ್ನ 1:40 ಕ್ಕೆ ಟೇಕ್ ಆಫ್ ಮಾಡಲು ಅನುಮತಿ ನೀಡಲಾಯಿತು. ಪೊಲೀಸರ ಪ್ರಕಾರ, ರಾಥೋಡ್ ಏತನ್ಮಧ್ಯೆ, ವಿಮಾನ ಹೈಜಾಕ್ ಎಂದು ಟ್ವೀಟ್ ಮಾಡಿದ್ದಾರೆ. ರಾಥೋಡ್ ಅವರ ಲಗೇಜ್‌ಗಳೊಂದಿಗೆ ವಿಮಾನದಿಂದ ಆಫ್‌ಲೋಡ್ ಆಗಿದ್ದಾರೆ ಮತ್ತು ಅಗತ್ಯ ತಪಾಸಣೆಯ ನಂತರ ವಿಮಾನವು ಹಾರಾಟ ನಡೆಸಿತು, ನಂತರ ಮುಂದಿನ ಕ್ರಮಕ್ಕಾಗಿ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಪೊಲೀಸರ ಪ್ರಕಾರ, ವಿಮಾನ ವಿಳಂಬದಿಂದ ಬೇಸರಗೊಂಡು ಟ್ವೀಟ್ ಮಾಡಿದ್ದೇನೆ ಎಂದು ಆರೋಪಿ ಹೇಳಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ