ವಿಮಾನ ಅಪಹರಣ: ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಬೆದರಿಕೆ ಹಾಕಿದ್ದ ಯುವ ಪೈಲಟ್​ ಅಂತೂ ವಿಮಾನವನ್ನು ಕೆಳಗಿಳಿಸಿದ!

Mississippi Airplane hijack: ವಿಮಾನವನ್ನು ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ಪೈಲಟ್‌ನಿಂದ ಬೆದರಿಕೆಯ ಕರೆ ಬಂದಿದೆ. ಇದರಿಂದ ಆತಂಕಗೊಂಡಿರುವ ಪೊಲೀಸರು ಮುನ್ನೆಚ್ಚರಿಕೆಯಿಂದ ವಾಲ್‌ಮಾರ್ಟ್‌ ಕಟ್ಟಡದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ತೆರವುಗೊಳಿಸಿದ್ದಾರೆ.

ವಿಮಾನ ಅಪಹರಣ: ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಬೆದರಿಕೆ ಹಾಕಿದ್ದ ಯುವ ಪೈಲಟ್​ ಅಂತೂ ವಿಮಾನವನ್ನು ಕೆಳಗಿಳಿಸಿದ!
ವಿಮಾನ ಅಪಹರಣ! ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಬೆದರಿಕೆ, ಲಾಡೆನ್ ಮಾದರಿ ಮತ್ತೊಂದು ದಾಳಿ?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 03, 2022 | 9:36 PM

ಅಮೆರಿಕ: ಮಿಸಿಸಿಪ್ಪಿ ಏರ್‌ಪೋರ್ಟ್‌ನಿಂದ ಸ್ಥಳೀಯ ಕಾಲಮಾನ ಶನಿವಾರ ಬೆಳಗಿನ ಜಾವ 5 ಗಂಟೆಯಲ್ಲಿ E911 ವಿಮಾನ ಅಪಹರಣವಾಗಿದ್ದು, ಭಾರೀ ಆತಂಕ ಸೃಷ್ಟಿಯಾಗಿದೆ. ಅಮೆರಿಕದ ಮಿಸಿಸಿಪ್ಪಿಯಿಂದ ಟೇಕಾಫ್‌ ಆಗಿದ್ದ ವಿಮಾನವನ್ನು ಅಪಹರಿಸಲಾಗಿದೆ. ವಿಮಾನವನ್ನು ಸ್ಥಳೀಯ ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ಪೈಲಟ್‌ನಿಂದ ಬೆದರಿಕೆಯ ಕರೆ ಬಂದಿದೆ.

ತಾಜಾ ಮಾಹಿತಿ ಪ್ರಕಾರ ಅಪಹೃತ ವಿಮಾನವನ್ನು ಪೈಲಟ್ ಸುರಕ್ಷಿತವಾಗಿ ಕೆಳಗಿಳಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದರಿಂದ ಆತಂಕಗೊಂಡಿರುವ ಪೊಲೀಸರು ಮುನ್ನೆಚ್ಚರಿಕೆಯಿಂದ ವಾಲ್‌ಮಾರ್ಟ್‌ ಕಟ್ಟಡದಲ್ಲಿದ್ದ (Walmart in Tupelo, Mississippi) ಎಲ್ಲಾ ಸಿಬ್ಬಂದಿಯನ್ನು ತೆರವುಗೊಳಿಸಿದ್ದಾರೆ (Mississippi Airplane hijack). ವಿಮಾನವನ್ನು ಕದ್ದ ಪೈಲಟ್, 29 ವರ್ಷದ ಕೋರಿ ಪ್ಯಾಟರ್​​ಸನ್ (Cory Patterson) ಎಂದು ಗುರುತಿಸಲಾಗಿದ್ದು, ಈತ ಟುಪೆಲೋ ಪ್ರಾದೇಶಿಕ ವಿಮಾನ ನಿಲ್ದಾಣದ (Tupelo Regional Airport) ಉದ್ಯೋಗಿ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಬೆಳವಣಿಗೆಗಳ ಪ್ರಕಾರ ಬೆಳಗ್ಗೆ 10 ಗಂಟೆಯಾಗಿದ್ದರೂ ಅಪಹರಣಕಾರ ಪೈಲಟ್, ಆಶ್ಲ್ಯಾಂಡ್ ಫಾಕ್ನರ್ (Ashland Faulkner) ಮತ್ತು ರಿಪ್ಲೆ, ಮಿಸ್ಸಿಸ್ಸಿಪ್ಪಿ (Ripley, Mississippi) ನಡುವೆ ವಿಮಾನವನ್ನು ಗಿರಕಿ ಹೊಡೆಸುತ್ತಿದ್ದಾನೆ. ವಿಮಾನ ಅಪಘಾತಕ್ಕೀಡಾಗುವ ಅಪಾಯವಿದ್ದು, ಈ ಪ್ರದೇಶಗಳಲ್ಲಿ ಎಚ್ಚರದಿಂದ ಇರುವಂತೆ ಪೊಲೀಸರು ಕೋರಿದ್ದಾರೆ.

Airplane hijacked from mississippi

ಮಿಸಿಸಿಪ್ಪಿ ಏರ್‌ಪೋರ್ಟ್‌ನಿಂದ ವಿಮಾನ ಅಪಹರಣ

Published On - 8:11 pm, Sat, 3 September 22

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!