AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ABVP Republic Day Celebration: ಕಾಶ್ಮೀರ ಕಣಿವೆಯಲ್ಲಿ ಎಬಿವಿಪಿಯಿಂದ ನಡೆದ ಮೊದಲ ಕಾರ್ಯಕ್ರಮ ಹೇಗಿತ್ತು ಗೊತ್ತಾ?

ಭದ್ರತಾ ವ್ಯವಸ್ಥೆಗಳ ನಡುವೆ ಕಾಶ್ಮೀರ ಕಣಿವೆಯಲ್ಲಿ ಗಣರಾಜ್ಯೋತ್ಸವವನ್ನು ಶಾಂತಿಯುತವಾಗಿ ಆಚರಿಸಲಾಯಿತು. ಈ ಬಾರಿ ಭದ್ರತೆಯನ್ನು ಸಡಿಲಿಸಿ ಕಡಿಮೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿತ್ತು.

ABVP Republic Day Celebration: ಕಾಶ್ಮೀರ ಕಣಿವೆಯಲ್ಲಿ ಎಬಿವಿಪಿಯಿಂದ ನಡೆದ ಮೊದಲ ಕಾರ್ಯಕ್ರಮ ಹೇಗಿತ್ತು ಗೊತ್ತಾ?
ಕಾಶ್ಮೀರ ಕಣಿವೆಯಲ್ಲಿ ಎಬಿವಿಪಿಯಿಂದ ನಡೆದ ಗಣರಾಜ್ಯೋತ್ಸವ
ನಯನಾ ರಾಜೀವ್
|

Updated on: Jan 27, 2023 | 8:53 AM

Share

ಭದ್ರತಾ ವ್ಯವಸ್ಥೆಗಳ ನಡುವೆ ಕಾಶ್ಮೀರ ಕಣಿವೆಯಲ್ಲಿ ಗಣರಾಜ್ಯೋತ್ಸವವನ್ನು ಶಾಂತಿಯುತವಾಗಿ ಆಚರಿಸಲಾಯಿತು. ಈ ಬಾರಿ ಭದ್ರತೆಯನ್ನು ಸಡಿಲಿಸಿ ಕಡಿಮೆ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿತ್ತು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗುರುವಾರ ಇಲ್ಲಿನ ಐತಿಹಾಸಿಕ ಲಾಲ್​ಚೌಕ್ ಸಿಟಿ ಸೆಂಟರ್ ಮೂಲಕ 100 ಅಡಿ ಉದ್ದದ ರಾಷ್ಟ್ರಧ್ವಜದೊಂದಿಗೆ ಮೆರವಣಿಗೆ ನಡೆಸಿತು. ವಂದೇ ಮಾತರಂ ಹಾಗೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುತ್ತಾ, ದೇಶದ ವಿವಿಧ ಭಾಗಗಳಿಂದ ಬಂದಿದ್ದ ಎಬಿವಿಪಿ ಕಾರ್ಯಕರ್ತರು ಶೇರ್​-ಎ-ಕಾಶ್ಮೀರ್​ ಪಾರ್ಕ್​ನಿಂದ ಲಾಲ್​ಚೌಕ್ ವರೆಗೆ ಮೆರವಣಿಗೆ ನಡೆಸಿದರು.

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬಿಗಿ ಭದ್ರತೆಯ ನಡುವೆ ಕಾಶ್ಮೀರದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಈ ವೇಳೆ ಸೇನಾ ಸಿಬ್ಬಂದಿ ಶ್ರೀನಗರ-ಗುಲ್ಮಾರ್ಗ್ ರಸ್ತೆಯಲ್ಲಿ ತ್ರಿವರ್ಣ ರ್ಯಾಲಿಯಲ್ಲಿ ಪಾಲ್ಗೊಂಡರು.

ಇದೇ ವೇಳೆ ಗಣರಾಜ್ಯೋತ್ಸವದ ಅಂಗವಾಗಿ ಶೇರ್-ಎ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿಯರು ಪ್ರಾತ್ಯಕ್ಷಿಕೆ ನೀಡಿದರು. ಇದಲ್ಲದೇ ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ಪ್ರಸ್ತುತ ಪಡಿಸಿದರು.

ಮತ್ತಷ್ಟು ಓದಿ: Republic Day 2023: ನಾಗ್ಪುರದ RSS ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಗಣರಾಜ್ಯೋತ್ಸವ ಆಚರಣೆ

ಶ್ರೀನಗರದ ಲಾಲ್ ಚೌಕ್‌ನಲ್ಲಿ 74 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಎಬಿವಿಪಿ ವಿದ್ಯಾರ್ಥಿಗಳು 100 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆ ನಡೆಸಿದರು. ಇದರೊಂದಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ಧ್ವಜಾರೋಹಣ ಮಾಡಿದರು.

ಗಣರಾಜ್ಯೋತ್ಸವದಂದು ಹಳೆಯ ವ್ಯವಸ್ಥೆಗೆ ಹೋಲಿಸಿದರೆ, ಈ ಬಾರಿ ಭದ್ರತೆಯನ್ನು ಸಡಿಲಗೊಳಿಸಲಾಗಿದ್ದು, ತುಲನಾತ್ಮಕವಾಗಿ ಕಡಿಮೆ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಈ ಬಾರಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿಲ್ಲ ಕಣಿವೆಯಲ್ಲಿ ಗಣರಾಜ್ಯೋತ್ಸವದ ಮುಖ್ಯ ಸ್ಥಳವಾದ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂಗೆ ಹೋಗುವ ರಸ್ತೆಗಳಲ್ಲಿ ಸಾಕಷ್ಟು ಭದ್ರತಾ ಪಡೆಗಳನ್ನು ನಿಯೋಜಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಣರಾಜ್ಯೋತ್ಸವದ ಕೊರೆಯುವ ಚಳಿಯ ನಡುವೆಯೂ ಪೊಲೀಸ್, ಸಿಆರ್‌ಪಿಎಫ್, ಎನ್‌ಸಿಸಿ ಮತ್ತು ಶಾಲಾ ಮಕ್ಕಳ ತುಕಡಿಗಳು ಮಾರ್ಚ್ ಪಾಸ್ಟ್‌ನಲ್ಲಿ ಭಾಗವಹಿಸಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ