ಯುಎಸ್ ಭಾರತ ದೋಸ್ತಿ: ಕರಿಗಡುಬು ತಿಂದು ಭಾರತೀಯರಿಗೆ ಹೋಳಿ ಶುಭಾಶಯ ತಿಳಿಸಿದ ಯುಎಸ್ ರಾಯಭಾರಿ

ಯುಎಸ್ ರಾಯಭಾರಿ ಗಾರ್ಸೆಟ್ಟಿ ಹೋಳಿ ಹಬ್ಬವನ್ನು ಆಚರಿಸುವ ಎಲ್ಲರಿಗೂ ಆತ್ಮೀಯ ಶುಭಾಶಯ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ. ನಾನು ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಲು ಬಯಸುತ್ತೇನೆ. ನಾನು ಈ ಬಾರಿಯ ಹೋಳಿಯನ್ನು ಅದ್ಭುತವಾದ ಕರಿಗಡುಬು ಸವಿಯುವ ಮೂಲಕ ಆಚರಿಸಿಕೊಳ್ಳುತ್ತಿದ್ದೇನೆ. ಆದರೆ ಈ ಕರಿಗಡುಬು ಸ್ವಲ್ಪ ಅಮೇರಿಕನ್ ಟ್ವಿಸ್ಟ್ ಹೊಂದಿದೆ.

ಯುಎಸ್ ಭಾರತ ದೋಸ್ತಿ: ಕರಿಗಡುಬು ತಿಂದು ಭಾರತೀಯರಿಗೆ ಹೋಳಿ ಶುಭಾಶಯ ತಿಳಿಸಿದ ಯುಎಸ್ ರಾಯಭಾರಿ
ಎರಿಕ್ ಗಾರ್ಸೆಟ್ಟಿ
Follow us
ಅಕ್ಷಯ್​ ಪಲ್ಲಮಜಲು​​
|

Updated on: Mar 25, 2024 | 10:37 AM

ದೆಹಲಿ, ಮಾ.25: ಭಾರತದಲ್ಲಿರುವ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ  (Eric Garcetti) ಸೋಮವಾರ ಭಾರತೀಯರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅವರ ಶುಭಾಶಯವು ತುಂಬಾ ವಿಶೇಷವಾಗಿತ್ತು. ಈ ಬಗ್ಗೆ ಎಕ್ಸ್​​ನಲ್ಲಿ ಅವರು ಹಂಚಿಕೊಂಡಿದ್ದಾರೆ. ಯುಎಸ್ ರಾಯಭಾರಿ ಗಾರ್ಸೆಟ್ಟಿ ಹೋಳಿ ಹಬ್ಬವನ್ನು ಆಚರಿಸುವ ಎಲ್ಲರಿಗೂ ಆತ್ಮೀಯ ಶುಭಾಶಯ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ. ನಾನು ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಲು ಬಯಸುತ್ತೇನೆ. ನಾನು ಈ ಬಾರಿಯ ಹೋಳಿಯನ್ನು ಅದ್ಭುತವಾದ ಕರಿಗಡುಬು (Gujiya) ಸವಿಯುವ ಮೂಲಕ ಆಚರಿಸಿಕೊಳ್ಳುತ್ತಿದ್ದೇನೆ. ಆದರೆ ಈ ಕರಿಗಡುಬು ಸ್ವಲ್ಪ ಅಮೇರಿಕನ್ ಟ್ವಿಸ್ಟ್ ಹೊಂದಿದೆ. ಇದರಲ್ಲಿ ಕೆಲವು ಪಿಸ್ತಾಗಳು, ರೋಸ್ ವಾಟರ್ ಇದೆ. ಇಂಡೋ-ಪೆಸಿಫಿಕ್‌ ಒಟ್ಟಾಗಿ ಹೋಳಿ ಹಬ್ಬವನ್ನು ಆಚರಿಸಿದಂತಿದೆ ಎಂದು ಹೇಳಿದ್ದಾರೆ.

ಗಾರ್ಸೆಟ್ಟಿ ಅವರು ಕರಿಗಡುಬು ಸವಿಯುವ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ಹೋಳಿ ಯುಎಸ್​​​ ಹಾಗೂ ಭಾರತದ ಸಂಬಂಧವನ್ನು ಒತ್ತಿ ಹೇಳುತ್ತಿದೆ. ಹ್ಯಾಪಿಹೋಳಿ, ಸ್ನೇಹಿತರೇ! ಭಾರತದಲ್ಲಿ ನನ್ನ ಮೊದಲ ಹೋಳಿಯನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾನೆ. ಅಮೇರಿಕ ಮತ್ತು ಭಾರತದ ರುಚಿಯನ್ನು ಈ ಕರಿಗಡುಬು ನೀಡಿದೆ. ಇದು ಸಂಪ್ರದಾಯಗಳ ಸಮ್ಮಿಲನ ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಭಾರತದಲ್ಲಿನ US ರಾಯಭಾರ ಕಚೇರಿಯಲ್ಲಿ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಕೂಡ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ರಾಯಭಾರ ಕಚೇರಿಯಲ್ಲಿ ಹೋಳಿ ಆಚರಣೆಯು ಸ್ವಲ್ಪ ವಿನೋದಮಯವಾಗಿತ್ತು ಹಾಗೂ ಈ ಹೋಳಿಯ ಸಂಭ್ರಮವನ್ನು ಈ ಕ್ಷಣಕ್ಕೆ ಮಾತ್ರ ಸೀಮಿತವಾಗಿಸಿಬೇಡಿ, ಈ ವರ್ಷಪೂರ್ತಿ ಹೋಳಿ ಆಚರಣೆ ಮಾಡುವ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿದೇಶಗಳಲ್ಲಿ ಹೆಚ್ಚಿದ ಮೋದಿ ಪರಿವಾರ; ಬ್ರಿಟನ್ ಬಳಿಕ ಆಸ್ಟ್ರೇಲಿಯಾದಲ್ಲಿ ಬಿಜೆಪಿಗೆ ಬೆಂಬಲವಾಗಿ ಅಭಿಯಾನ

ಇದಕ್ಕೂ ಮುನ್ನ ಮಾರ್ಚ್ 8 ರಂದು ರಾಯಭಾರಿ ಗಾರ್ಸೆಟ್ಟಿ ಅವರು ಭಾರತ್ ಮಂಟಪದಲ್ಲಿ ವಿದೇಶಿ ಕೃಷಿ ಸೇವೆ (ಎಫ್‌ಎಎಸ್) ಟೇಸ್ಟ್ ಆಫ್ ಅಮೇರಿಕಾ ಬೂತ್​​ನ್ನು ಉದ್ಘಾಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಎರಿಕ್ ಗಾರ್ಸೆಟ್ಟಿ ಅವರು ಭಾರತ ಮತ್ತು ಯುಎಸ್ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ತಿಳಿಸಿದ್ದಾರೆ. ಭಾರತ ಮತ್ತು ಯುಎಸ್​​​ ಉತ್ತಮ, ಬಲಶಾಲಿ ಮತ್ತು ಇನ್ನಷ್ಟು ಒಟ್ಟಾಗಿ ಅನೇಕ ಕೆಲಸಗಳನ್ನು ಮಾಡಬೇಕಿದೆ. ಹಾಗಾಗಿ ನಮ್ಮ ಭಾರತೀಯ ಸ್ನೇಹಿತರನ್ನು ನಮ್ಮ ಜತೆಗೆ ಒಟ್ಟಾಗಿ ಕರೆದುಕೊಂಡು ಹೋಗುವುದು ಅಗತ್ಯ, ಅದಕ್ಕಾಗಿ ಈ ಎಫ್‌ಎಎಸ್ ಸಹಕಾರಿಯಾಗಲಿದೆ ಎಂದರು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ