ಭಾರತ-ಅಮೆರಿಕ ಭಾಯಿ-ಭಾಯಿ, ಚೀನಾ ಪರಾಯಿ ಎಂದ ಪಾಂಪಿಯೊ

ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಅತಿಕ್ರಮಣ ಮತ್ತು ಭಾರತೀಯ ಸೈನಿಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಭಾರತಕ್ಕೆ ಸರ್ವವಿಧದ ನೆರವು ಒದಗಿಸುವ ಭರವಸೆ ನೀಡಿದರು. ನವದೆಹಲಿಯಲ್ಲಿ ಮಂಗಳವಾರದಂದು ಭಾರತ ಮತ್ತು ಅಮೆರಿಕ 2+2 ಸಚಿವರ ನಡುವೆ ನಡೆದ ಮಾತುಕತೆಯ ನಂತರ ಎರಡು ರಾಷ್ರಗಳ ನಾಯಕರು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಚೀನಾದ ಉದ್ಧಟತನವನ್ನು ಉಲ್ಲೇಖಿಸಿದ ಪಾಂಪಿಯೊ, ಯಾವುದೇ ಸಂಧಿಗ್ಧ ಸಂದರ್ಭದಲ್ಲೂ ಅಮೇರಿಕ, ಭಾರತದ ಜೊತೆ ನಿಲ್ಲುತ್ತದೆ ಎಂದು […]

ಭಾರತ-ಅಮೆರಿಕ ಭಾಯಿ-ಭಾಯಿ, ಚೀನಾ ಪರಾಯಿ ಎಂದ ಪಾಂಪಿಯೊ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 27, 2020 | 6:42 PM

ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಅತಿಕ್ರಮಣ ಮತ್ತು ಭಾರತೀಯ ಸೈನಿಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಭಾರತಕ್ಕೆ ಸರ್ವವಿಧದ ನೆರವು ಒದಗಿಸುವ ಭರವಸೆ ನೀಡಿದರು.

ನವದೆಹಲಿಯಲ್ಲಿ ಮಂಗಳವಾರದಂದು ಭಾರತ ಮತ್ತು ಅಮೆರಿಕ 2+2 ಸಚಿವರ ನಡುವೆ ನಡೆದ ಮಾತುಕತೆಯ ನಂತರ ಎರಡು ರಾಷ್ರಗಳ ನಾಯಕರು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಚೀನಾದ ಉದ್ಧಟತನವನ್ನು ಉಲ್ಲೇಖಿಸಿದ ಪಾಂಪಿಯೊ, ಯಾವುದೇ ಸಂಧಿಗ್ಧ ಸಂದರ್ಭದಲ್ಲೂ ಅಮೇರಿಕ, ಭಾರತದ ಜೊತೆ ನಿಲ್ಲುತ್ತದೆ ಎಂದು ಹೇಳಿದರು.

‘‘ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಭಾಗಿರುವ ಭಾರತದ ಗಲ್ವಾನ್ ಕಣಿವೆಯಲ್ಲಿ ಪಿಲ್​ಎಯಿಂದ ಹತ್ಯೆಗೊಳಗಾದ 20 ಹುತಾತ್ಮರು ಸೇರಿದಂತೆ ತಮ್ಮ ಜೀವಗಳನ್ನು ಬಲಿದಾನ ಮಾಡಿದ ವೀರಯೋಧರು ಮತ್ತು ಮಹಿಳೆಯರಿಗೆ ಗೌರವ ಸಲ್ಲಿಸಲು ನಾವು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದೆವು. ಭಾರತದ ಸ್ವಾತಂತ್ರ್ಯ ಮತ್ತು ಸಾರ್ವಭೌಮತೆಗೆ ಅಪಾಯ ಎದುರಾದಾಗ, ಅಮೆರಿಕ ಅದರ ಜೊತೆ ನಿಲ್ಲುತ್ತದೆ ಮತ್ತು ಸಂಪೂರ್ಣ ನೆರವನ್ನು ಒದಗಿಸುತ್ತದೆ,’’ ಎಂದು ಪಾಂಪಿಯೊ ಹೇಳಿದರು.

‘‘ಚೀನಾದ ಕಮ್ಯುನಿಸ್ಟ್ ಪಾರ್ಟಿಯಿಂದ ಎದುರಾಗುವ ಎಲ್ಲ ತೆರನಾದ ಅಪಾಯಗಳನ್ನು ಎದುರಿಸಲು ಅಮೆರಿಕ ಮತ್ತು ಇಂಡಿಯ ಪರಸ್ಪರ ಸಹಕಾರವನ್ನು ಬಲಪಡಿಸುತ್ತಿವೆ. ಕಳೆದ ವರ್ಷ ಸೈಬರ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವಿನ ಸಹಕಾರ ವಿಸ್ತೃತಗೊಂಡಿದೆ ಮತ್ತು ನೌಕಾಪಡೆಗಳು ಹಿಂದೂ ಮಹಾಸಾಗರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿವೆ,’’ ಎಂದ ಪಾಂಪಿಯೊ, ‘‘ಚೀನಾದ ಆಡಳತಾರೂಢ ಪಕ್ಷ ನಾಡಿನ ಕಾನೂನನ್ನು ಪಾಲಿಸುತ್ತಿಲ್ಲ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತಿಲ್ಲ,’’ ಎಂದು ಆರೋಪಿದರು.

‘‘ ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಪ್ರಜಾಪ್ರಭುತ್ವ, ನಾಡಿನ ಕಾನೂನು ಮತ್ತು ಪಾರದರ್ಶಕತೆ ಮೊದಲಾದವುಗಳು ತನಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸುತ್ತಿರುವುದನ್ನು ನಮ್ಮ ದೇಶದ ನಾಯಕರು ಮತ್ತು ನಾಗರಿಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಭಾರತ ಮತ್ತು ಅಮೆರಿಕ, ಸಿಸಿಪಿಯಿಂದ ಮಾತ್ರವಲ್ಲದೆ ಬೇರೆಲ್ಲ ರೀತಿಯ ಅಪಾಯ ಮತ್ತು ಸವಾಲುಗಳನ್ನು ಎದುರಿಸಲು ತಮ್ಮ ನಡುವಿನ ಸ್ನೇಹ ಮತ್ತು ಸಹಕಾರನ್ನು ವೃದ್ಧಿಸಿ ಬಲಪಡಿಸುತ್ತವೆಯೆಂದು ಹೇಳಲು ನನಗೆ ಹೆಮ್ಯೆಯೆನಿಸುತ್ತಿದೆ,’’ ಎಂದರು.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ‘‘ ನಮ್ಮ ಮತ್ತು ಅಮೆರಿಕ ಸೇನೆಗಳ ನಡುವಿನ ಪರಸ್ಪರ ಸಹಕಾರ ಅದ್ಭುತವಾಗಿ ಬಲಗೊಳ್ಳುತ್ತಿದೆ. ನಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ನಮ್ಮ ನೆರೆಹೊರೆಯ ಹಾಗೂ ಅದರಾಚೆಯ ದೇಶಗಳು ಸೇರಿದಂತೆ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಜಂಟಿ ಕಾರ್ಯಾಚರಣೆಗಳನ್ನು ನಡೆಸುವ ಕುರಿತು ಸಹ ನಾವು ಸಮಾಲೋಚನೆ ನಡೆಸಿದ್ದೇವೆ,’’ ಎಂದು ಹೇಳಿದರು.

ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್, ‘‘ಜಾಗತಿಕವಾಗಿ ಪ್ಯಾಂಡೆಮಿಕ್ ಮತ್ತು ಭದ್ರತೆಗೆ ಸಂಬಂಧಿಸಿದ ಸವಾಲುಗಳು ಹೆಚ್ಚುತ್ತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಮತ್ತು ಪ್ರಾದೇಶಿಕ ಭದ್ರತೆ, ಸ್ಥಿರತೆ ಮತ್ತು ಪ್ರಗತಿಯನ್ನು ಕಾಯ್ದುಕೊಳ್ಳಲು ಭಾರತ ಮತ್ತು ಅಮೆರಿಕದ ಪಾಲುದಾರಿಕೆ ಮತ್ತು ಸಹಕಾರ ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ,’’ ಎಂದರು.

‘‘ನಮ್ಮ ಮಾತುಕತೆ ಭಾರತಪೆಸಿಫಿಕ್ ಪ್ರಾಂತ್ಯದ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತು. ಈ ಪ್ರಾಂತ್ಯದ ಎಲ್ಲ ರಾಷ್ಟ್ರಗಳ ಭದ್ರತೆ, ಶಾಂತಿ ಮತ್ತು ಅವುಗಳ ಬೆಳವಣಿಗೆ ಬಹಳ ಮಹತ್ವದ್ದು ಎಂಬುದನ್ನು ನಾವು ಒತ್ತಿ ಹೇಳಿದೆವು. ನೆರೆಹೊರೆಯ ರಾಷ್ಟ್ರಗಳ ಅಭಿವೃದ್ಧಿಯ ಬಗ್ಗೆಯೂ ಮಾತುಕತೆಯಲ್ಲಿ ಚರ್ಚೆಯಾಯಿತು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಹಿಸುವುದು ಸಾಧ್ಯವೇ ಇಲ್ಲ ಅಂತ ನಾವು ಪುನರುಚ್ಛರಿಸಿದೆವು,’’ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದರು. 

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ