ಉತ್ತರ ಪ್ರದೇಶ:100 ವರ್ಷ ಪುರಾತನ ದೇಗುಲ ಸೇರಿದಂತೆ 4 ದೇವಾಲಯಗಳ ಮೇಲೆ ದುಷ್ಕರ್ಮಿಗಳ ದಾಂಧಲೆ; 12 ಮೂರ್ತಿಗಳು ಧ್ವಂಸ

ಪ್ರಾಥಮಿಕ ಮಾಹಿತಿಯಂತೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಉತ್ತರ ಪ್ರದೇಶ:100 ವರ್ಷ ಪುರಾತನ ದೇಗುಲ ಸೇರಿದಂತೆ 4 ದೇವಾಲಯಗಳ ಮೇಲೆ ದುಷ್ಕರ್ಮಿಗಳ ದಾಂಧಲೆ; 12 ಮೂರ್ತಿಗಳು ಧ್ವಂಸ
ಉತ್ತರ ಪ್ರದೇಶದಲ್ಲಿ ದೇವಾಲಯಕ್ಕೆ ಹಾನಿ, ಮೂರ್ತಿ ಧ್ವಂಸ

Updated on: Jun 01, 2023 | 5:33 PM

ಬುಲಂದ್‌ಶಹರ್: ಉತ್ತರ ಪ್ರದೇಶ(Uttar Pradesh) ಬುಲಂದ್‌ಶಹರ್ (Bulandshahr) ಜಿಲ್ಲೆಯಲ್ಲಿ ಗುರುವಾರ ನಾಲ್ಕು ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದು, ಇಲ್ಲಿ ಉದ್ವಿಗ್ನತೆ ಉಂಟಾಗಿದೆ. ಆಕ್ರೋಶಗೊಂಡ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ದುಷ್ಕರ್ಮಿಗಳು ಹಿಂದೂ ದೇವತೆಗಳ 12 ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಬುಧವಾರ ತಡರಾತ್ರಿ ಬರಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುರುವಾರ ನಾಲ್ಕು ದೇವಸ್ಥಾನಗಳನ್ನು ಧ್ವಂಸಗೊಳಿಸಿರುವುದು ಕಂಡು ಬಂದಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ದೇವಸ್ಥಾನದ ಆವರಣವನ್ನು ಸೀಲ್ ಮಾಡಿದರು.

ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದದ್ದು, ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಸ್ಥಳೀಯ ಹಿಂದೂ ಸಂಘಟನೆಗಳಿಗೆ ಭರವಸೆ ನೀಡಿದ್ದಾರೆ.


ಪ್ರಾಥಮಿಕ ಮಾಹಿತಿಯಂತೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ದೇವಸ್ಥಾನಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ಶಂಕಿಸಿದ್ದಾರೆ.

ಇದನ್ನೂ ಓದಿ: Video Viral: ಮಹಾರಾಷ್ಟ್ರದಲ್ಲಿ ಕಳಪೆ ರಸ್ತೆ ಕಾಮಗಾರಿ, ಟಾರನ್ನು ಬರಿಗೈಯಲ್ಲಿ ಕಿತ್ತು ಹಾಕಿದ ಜನ

ದುಷ್ಕರ್ಮಿಗಳಿಂದ ದಾಳಿಗೊಳಗಾದ ದೇವಾಲಯಗಳಲ್ಲಿ ಒಂದು 100 ವರ್ಷಗಳಷ್ಟು ಹಳೆಯದು ಎಂದು ಭಾವಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಶಿವ ಮತ್ತು ಹನುಮಾನ್ ವಿಗ್ರಹಗಳಿಗೆ ಹಾನಿಯಾಗಿರುವುದನ್ನು ತೋರಿಸಲಾಗಿದೆ. ಘಟನೆಯನ್ನು ಎಸ್ಪಿ ಸುರೇಂದ್ರ ನಾಥ್ ತಿವಾರಿ ಖಚಿತಪಡಿಸಿದ್ದು, ಎಲ್ಲಾ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Thu, 1 June 23