ಜಮ್ಮುವಿನಲ್ಲಿ ಟಿಟಿಡಿಯಿಂದ ಬಾಲಾಜಿ ದೇವಸ್ಥಾನ; ಜೂನ್​ 8 ರಿಂದ ಭಕ್ತರಿಗೆ ದರ್ಶನ

ಜಮ್ಮುವಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಾಲಾಜಿ ದೇವಸ್ಥಾನದ ಮಹಾ ಸಂಪ್ರೋಕ್ಷಣೆ ಜೂನ್​ 8ರಂದು ನೆರವೇರಿಸಲಾಗುವುದು ಎಂದು ಟಿಟಿಡಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದೆ.

ಜಮ್ಮುವಿನಲ್ಲಿ ಟಿಟಿಡಿಯಿಂದ ಬಾಲಾಜಿ ದೇವಸ್ಥಾನ; ಜೂನ್​ 8 ರಿಂದ ಭಕ್ತರಿಗೆ ದರ್ಶನ
ತಿರುಪತಿಯಲ್ಲಿ ನಿರ್ಮಾಣವಾಗಿರುವ ಬಾಲಾಜಿ ದೇವಸ್ಥಾನ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 01, 2023 | 8:29 PM

ತಿರುಪತಿ: ಜಮ್ಮುವಿನಲ್ಲಿ ಟಿಟಿಡಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಬಾಲಾಜಿ ದೇವಸ್ಥಾನ (Balaji Temple) ದ ಮಹಾ ಸಂಪ್ರೋಕ್ಷಣೆ ಜೂನ್​ 8ರಂದು ನೆರವೇರಿಸಲಾಗುವುದು ಎಂದು ದೇಗುಲದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರ ಪೂರ್ವಭಾವಿಯಾಗಿ ಜೂನ್​ 3ರಂದು ವೈದಿಕ್ ಆಚರಣೆಗಳು ನಡೆಯಲಿವೆ. ದೇಶಾದ್ಯಂತ ಸನಾತನ ಹಿಂದೂ ಧರ್ಮ ಅಭಿಯಾನವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುತ್ತಿರುವ ಟಿಟಿಡಿ ಜಮ್ಮುವಿನಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯವನ್ನು ನಿರ್ಮಿಸಿದೆ. ಜಮ್ಮುವಿನ ಮಜೀನ್​ನಲ್ಲಿರುವ ಶಿವಾಲಿಕ್ ಅರಣ್ಯದ ಮಧ್ಯಭಾಗದಲ್ಲಿ 62 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನ ನಿರ್ಮಾಣಕ್ಕೆ ಸುಮಾರು 30 ಕೋಟಿ ರೂ. ವೆಚ್ಚವಾಗಿ ಎಂದು ಅಂದಾಜಿಸಲಾಗಿದೆ. ಈ ದೇವಸ್ಥಾನವು ಜಮ್ಮು ಪ್ರದೇಶದಲ್ಲಿ ಅತಿ ದೊಡ್ಡ ದೇವಾಲಯಗಳಲ್ಲಿ ಒಂದು ಎನ್ನುವುದು ಖುಷಿಯ ಸಂಗತಿ.

ಜೂನ್ 3 ರಂದು ಸಂಜೆ 6 ರಿಂದ 8ರವರೆಗೆ ಆಚಾರ್ಯವರಣಂ, ಪುಣ್ಯಾಹವಚನ, ಮೃತ್ಸಂಗ್ರಹಣ ಮತ್ತು ಅಂಕುರಾರ್ಪಣ ನಡೆಯಲಿದೆ. ಜೂನ್ 4ರ ಬೆಳಿಗ್ಗೆ 8 ರಿಂದ 11 ಗಂಟೆಯವರೆಗೆ ಪಂಚಗವ್ಯಪ್ರಸನ, ವಾಸ್ತು ಹೋಮ, ಅಕಲಮಷ ಪ್ರಾಯಶ್ಚಿತ್ತ ಹೋಮ, ರಕ್ಷಾಬಂಧನ, ಅಗ್ನಿ ಪ್ರತಿಷ್ಠಾ, ಕುಂಭ ಸ್ಥಾನ, ಕುಂಭಾರಾಧನೆ ಹಾಗೂ ವಿಶೇಷ ಹೋಮಗಳು ನೆರವೇರಲಿವೆ.

ಇದನ್ನೂ ಓದಿ: Apsuja Infratech: ತೆಲಂಗಾಣದಲ್ಲಿ ವಿಶ್ವದ ಮೊದಲ 3D ಮುದ್ರಿತ ದೇವಾಲಯ ನಿರ್ಮಾಣಕ್ಕೆ ವೇದಿಕೆ ಸಜ್ಜು, ರಚನೆ ಹೀಗಿದೆ

ಜೂ. 5ರಂದು ಬೆಳಗ್ಗೆ ಯಾಗಶಾಲಾ ವೈದಿಕ ಕಾರ್ಯಕ್ರಮಗಳು, ಅಕ್ಷಿನ್ಮೋಚನ, ನವಕಲಶ ಸ್ನಪನ, ಪಂಚಗದೀಯವಾಸ ಹಾಗೂ ಸಂಜೆ ಯಾಗಶಾಲಾ ವೈದಿಕ ಕಾರ್ಯಕ್ರಮಗಳು ಜರುಗಲಿವೆ. ಜೂ.6ರಂದು ಬೆಳಗ್ಗೆ ಯಾಗಶಾಲಾ ವೈದಿಕ ಕಾರ್ಯಕ್ರಮಗಳು, ನವಕಲಶ ಸ್ನಾನ, ಕ್ಷೀರಧಿವಾಸ ಹಾಗೂ ಸಂಜೆ ಯಾಗ ಶಾಲೆ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.

ಜೂ. 7ರಂದು ಬೆಳಗ್ಗೆ ಯಾಗಶಾಲೆ ವೈದಿಕ ಕಾರ್ಯಕ್ರಮಗಳು, ಜಲಾಧಿವಾಸಂ, ರತ್ನನ್ಯಾಸಂ, ಧಾತುನ್ಯಾಸಂ, ವಿಮಾನ ಕಲಶ ಪ್ರತಿಷ್ಠಾಪನೆ (ವಿಗ್ರಹ) ನೆರವೇರಲಿದ್ದು, ಸಂಜೆ ಮಹಾಶಾಂತಿ ತಿರುಮಂಜನ, ರಾತ್ರಿ ಸಾಯನಾಧಿವಾಸ ನೆರವೇರಲಿದೆ.

ಇದನ್ನೂ ಓದಿ: ಉತ್ತರ ಪ್ರದೇಶ:100 ವರ್ಷ ಪುರಾತನ ದೇಗುಲ ಸೇರಿದಂತೆ 4 ದೇವಾಲಯಗಳ ಮೇಲೆ ದುಷ್ಕರ್ಮಿಗಳ ದಾಂಧಲೆ; 12 ಮೂರ್ತಿಗಳು ಧ್ವಂಸ

ಜೂನ್ 8 ರಂದು ಬೆಳಿಗ್ಗೆ 7.30 ರಿಂದ 8.15 ರವರೆಗೆ ಮಿಥುನ ಲಗ್ನದಲ್ಲಿ ಮಹಾ ಸಂಪ್ರೋಕ್ಷಣೆ ನಡೆಯಲಿದೆ. ಬೆಳಗ್ಗೆ 9.30ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಂಜೆ 5 ಗಂಟೆಗೆ ಶ್ರೀವಾರಿ ಕಲ್ಯಾಣೋತ್ಸವ ನಡೆಯಲಿದೆ. ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ, ಇಒ ಎ.ವಿ.ಧರ್ಮಾ ರೆಡ್ಡಿ ಸೇರಿದಂತೆ ಹಲವು ಸ್ಥಳೀಯ ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್