Mann Ki Baat: Bharat Ki Baat: ಮನ್ ಕಿ ಬಾತ್ ಕುರಿತಾದ ಸಾಕ್ಷ್ಯಚಿತ್ರ ಇಂದು ಪ್ರದರ್ಶನ; ಸಮಯ ಮತ್ತು ಲೈವ್ ಸ್ಟ್ರೀಮ್ ವಿವರ ಇಲ್ಲಿದೆ

ಮನ್ ಕಿ ಬಾತ್ 2023ರ ಏಪ್ರಿಲ್​ 30 ರಂದು 100ನೇ ಸಂಚಿಕೆ ಪೂರೈಸಿತು. ಈ ಹಿನ್ನೆಲೆ ಮನ್​​ ಕಿ ಬಾತ್​​ನ 100 ಮೈಲಿಗಲ್ಲು, ಮನ್​ ಕಿ ಬಾತ್​​​ ಹೇಗೆ ಆರಂಭವಾಯಿತು ಹಾಗೂ ಅದರ ಪ್ರಭಾವ ಕುರಿತು "ಮನ್ ಕಿ ಬಾತ್: ಭಾರತ್ ಕಿ ಬಾತ್", ಎಂಬ ವಿಶೇಷ ಸಾಕ್ಷ್ಯಚಿತ್ರ ತಯಾರಾಗಿದೆ.

Mann Ki Baat: Bharat Ki Baat: ಮನ್ ಕಿ ಬಾತ್ ಕುರಿತಾದ ಸಾಕ್ಷ್ಯಚಿತ್ರ ಇಂದು ಪ್ರದರ್ಶನ; ಸಮಯ ಮತ್ತು ಲೈವ್ ಸ್ಟ್ರೀಮ್ ವಿವರ ಇಲ್ಲಿದೆ
ಮನ್ ಕಿ ಬಾತ್: ಭಾರತ್ ಕಿ ಬಾತ್
Follow us
ವಿವೇಕ ಬಿರಾದಾರ
|

Updated on: Jun 02, 2023 | 7:18 AM

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಪ್ರತಿ ತಿಂಗಳ ಕೊನೆ ಭಾನುವಾರ ಮನ್​ ಕೀ ಬಾತ್​​ (Mann Ki Baat) ರೇಡಿಯೋ ಕಾರ್ಯಕ್ರಮವನ್ನು (Mann Ki Baat Radio Program) ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮದಲ್ಲಿ ದೇಶದ ಅನೇಕ ವಿಷಯಗಳ ಕುರಿತು ಮಾತನಾಡುತ್ತಾರೆ ಮತ್ತು ಚರ್ಚಿಸುತ್ತಾರೆ. ಈ ಕಾರ್ಯಕ್ರಮ ಯಶಸ್ವಿಯಾಗಿದ್ದು, 2023ರ ಏಪ್ರಿಲ್​ 30 ರಂದು 100ನೇ ಸಂಚಿಕೆ ಪೂರೈಸಿತು. ಈ ಹಿನ್ನೆಲೆ ಮನ್​​ ಕಿ ಬಾತ್​​ನ 100 ಮೈಲಿಗಲ್ಲು, ಮನ್​ ಕಿ ಬಾತ್​​​ ಹೇಗೆ ಆರಂಭವಾಯಿತು ಹಾಗೂ ಅದರ ಪ್ರಭಾವ ಕುರಿತು “ಮನ್ ಕಿ ಬಾತ್: ಭಾರತ್ ಕಿ ಬಾತ್”, (Mann Ki Baat: Bharat Ki Baat) ಎಂಬ ವಿಶೇಷ ಸಾಕ್ಷ್ಯಚಿತ್ರ (Documentary) ತಯಾರಾಗಿದ್ದು ಶುಕ್ರವಾರ (ಜೂನ್ 2) ರಾತ್ರಿ 8 ಗಂಟೆಗೆ HistoryTV18 ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕಿ ಬಾತ್’ ಅನ್ನು ಅಕ್ಟೋಬರ್ 3, 2014 ರಂದು ಪ್ರಾರಂಭಿಸಿದರು. ಈ ಮೂಲಕ ಅವರು ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ವಿಷಯಗಳ ಕುರಿತು ಭಾರತದ ನಾಗರಿಕರೊಂದಿಗೆ ಸಂವಾದ ನಡೆಸಿದರು.

ಇನ್ನು ಸಾಕ್ಷ್ಯಚಿತ್ರದಲ್ಲಿ 2014 ರಲ್ಲಿ ಪ್ರಧಾನಿ ಮೋದಿಯವರ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮವು ಹೇಗೆ ಹುಟ್ಟಿಕೊಂಡಿತು ಮತ್ತು ಈ ನಿಜವಾದ ಮತ್ತು ಸರಳವಾದ ಕಲ್ಪನೆಯು ಸಂವಾದದ ಮೂಲಕ ದೇಶದ ಮೂಲೆ ಮೂಲೆಗಳನ್ನು ಏಕೆ ಸಂಪರ್ಕಿಸಲು ಸಾಧ್ಯವಾಯಿತು ಎಂಬ ಕಥೆಯನ್ನು ಚಿತ್ರವು ತೆರೆದಿಡಲಿದೆ.

ಇದನ್ನೂ ಓದಿ: ವಿದೇಶಿ ಮಣ್ಣಲ್ಲಿ ನಿಂತು ದೇಶಕ್ಕೆ ಕಪ್ಪು ಮಸಿ ಬಳಿಯುವ ರಾಹುಲ್ ಒಬ್ಬ ಫೇಕ್ ಗಾಂಧಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ರಾಜಕೀಯವಲ್ಲದ ಈ ಮಾಸಿಕ ರೇಡಿಯೋ ಕಾರ್ಯಕ್ರಮವೂ ದೇಶದ ಪ್ರಮುಖ ಸಂಸ್ಥೆಗಳು, ಪಡೆಗಳು, ಜನರು, ಗ್ರಾಮದ ಹಿರಿಯರು, ಸಮಾಜದ ಗಣ್ಯರು ಸೇರಿದಂತೆ ಪ್ರತಿಯೊಬ್ಬ ಸಾಮಾನ್ಯ ನಾಗರಿಕ ಹಾಗೂ ಪ್ರಧಾನಿ ಮಧ್ವೆ ದ್ವಿಮುಖ ಸಂವಾದಕ್ಕೆ ವೇದಿಕೆ ಒದಗಿಸಿತ್ತು, ಜೊತೆಗೆ ಜನತಾ ಜನಾರ್ಧನ ಎನಿಸಿದ ಸಾಮಾನ್ಯ ನಾಗರಿಕರ ಕಾಳಜಿಗೆ ಧ್ವನಿ ನೀಡಿತ್ತು. ತಮ್ಮ ಹಳ್ಳಿಗಳು ನಗರಗಳು, ಜಿಲ್ಲೆಗಳು ಮತ್ತು ನೆರೆಹೊರೆಗಳನ್ನು ಉತ್ತಮ, ಸ್ವಚ್ಛ ಮತ್ತು ಸುರಕ್ಷಿತಗೊಳಿಸಲು ಶ್ರಮಿಸುವ ಔಟ್-ಆಫ್-ದಿ-ಬಾಕ್ಸ್- ಚಿಂತಕರ ಪ್ರಯತ್ನಗಳನ್ನು ಸಹ ಈ ಕಾರ್ಯಕ್ರಮದ ಮೂಲಕ ಪ್ರಧಾನಿ ಗಮನ ಸೆಳೆದಿದ್ದರು.

View this post on Instagram

A post shared by HISTORY TV18 (@historytv18)

‘ಮನ್ ಕಿ ಬಾತ್’ ಮಹಿಳಾ ಸಬಲೀಕರಣ ಮತ್ತು ಎಲ್ಲರಿಗೂ ಶಿಕ್ಷಣದಿಂದ ಹಿಡಿದು ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಪರಿಸರ ಸಂರಕ್ಷಣೆಯವರೆಗಿನ ಹಲವಾರು ಸಮಸ್ಯೆಗಳನ್ನು ಪರಿಹರಿಸಿದೆ. ಮನ್ ಕಿ ಬಾತ್ ದೇಶೀಯ ಪ್ರವಾಸೋದ್ಯಮದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಯೋಗದ ಜನಪ್ರಿಯತೆ ಮತ್ತು ಆರೋಗ್ಯಕರ ಜೀವನಕ್ಕೆ ಇದು ಗಣನೀಯ ಕೊಡುಗೆ ನೀಡಿದೆ.

ಕೊರೊನಾ ಸಾಂಕ್ರಾಮಿಕ ಅತ್ಯಂತ ತೀವ್ರವಾಗಿದ್ದ ಸಮಯದಲ್ಲಿ ಭಯವನ್ನು ಕಡಿಮೆ ಮಾಡಲು ಮತ್ತು ಅಧಿಕೃತ ನಿಜವಾದ ಮಾಹಿತಿಯನ್ನು ಪ್ರಸಾರ ಮಾಡಲು ಮನ್ ಕಿ ಬಾತ್’ ಸಹಕರಿಸಿತ್ತು. ಈ ರೀತಿಯಾಗಿ ಸಮಗ್ರ ಮಾಹಿತಿ ಒಳಗೊಂಡ ‘ಮನ್ ಕಿ ಬಾತ್’ ಪುಭಾವದ ಕುರಿತಾಗಿ ಸಾಕ್ಷ್ಯಚಿತ್ರದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್