ಉತ್ತರ ಪ್ರದೇಶ: ಎರಡು ಕಾರುಗಳ ನಡುವೆ ಅಪಘಾತ, 4 ಮಂದಿ ಯೂಟ್ಯೂಬರ್​ಗಳು ಸಾವು

ಉತ್ತರ ಪ್ರದೇಶದ ಆಮ್ರೋಹಾದಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಯೂಟ್ಯೂಬರ್​ಗಳು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ: ಎರಡು ಕಾರುಗಳ ನಡುವೆ ಅಪಘಾತ, 4 ಮಂದಿ ಯೂಟ್ಯೂಬರ್​ಗಳು ಸಾವು
Image Credit source: India Today

Updated on: Jun 10, 2024 | 9:58 AM

ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನೆಲೆಯಲ್ಲಿ 4 ಯೂಟ್ಯೂಬರ್​(Youtubers))ಗಳು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಮೃತರನ್ನು ಲಕ್ಕಿ, ಸಲ್ಮಾನ್, ಶಾರುಖ್ ಮತ್ತು ಶಾನವಾಜ್ ಎಂದು ಗುರುತಿಸಲಾಗಿದೆ. ನಾಲ್ವರು ಯುವಕರು ಯೂಟ್ಯೂಬ್‌ನಲ್ಲಿ ರೌಂಡ್ 2 ವರ್ಲ್ಡ್ ಚಾನೆಲ್‌ಗಾಗಿ ಕಂಟೆಂಟ್ ಕ್ರಿಯೇಟ್​ ಮಾಡುತ್ತಿದ್ದರು.

ಯೂಟ್ಯೂಬರ್‌ಗಳು ಹುಟ್ಟುಹಬ್ಬದ ಕಾರ್ಯಕ್ರಮದಿಂದ ಮನೆಗೆ ಹೋಗುತ್ತಿದ್ದಾಗ ಅವರ ವಾಹನವು ಎದುರು ದಿಕ್ಕಿನಿಂದ ಬರುತ್ತಿದ್ದ ಬೊಲೆರೊ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸಿದ ಕೂಡಲೇ ಸ್ಥಳದಲ್ಲಿ ಜಮಾಯಿಸಿದ ಜನರು ಯುವಕರನ್ನು ಸಿಎಚ್‌ಸಿ ಗಜರೌಲಾ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಮತ್ತಷ್ಟು ಓದಿ: ಕಾಲೇಜಿಗೆ ಹೋಗುತ್ತಿದ್ದ ಅಕ್ಕ ಮತ್ತು ತಮ್ಮನ ಮೇಲೆ ಹರಿದ ವಾಟರ್​ ಟ್ಯಾಕರ್​​

ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಮ್ರೋಹಾ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮೃತರನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ಅಪಘಾತದ ಸ್ಥಳವನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Published On - 9:57 am, Mon, 10 June 24