ರಾತ್ರಿಯಿಂದ ಬೆಳಗಾಗುವಷ್ಟರಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ, ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಆಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಐವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ, ಮನೆಯೊಳಗೆ ಕಲ್ಲಿದ್ದಿಲನ್ನು ಸುಟ್ಟಿದ್ದರು, ಅದರ ಹೊಗೆ ದಟ್ಟವಾಗಿ ತುಂಬಿತ್ತು, ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದೆಯೇ ಎನ್ನುವ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಸೋಮವಾರ ರಾತ್ರಿ ಕುಟುಂಬದ ಏಳು ಮಂದಿ ಮಲಗಲು ಹೋಗಿದ್ದು, ಮಂಗಳವಾರ ಸಂಜೆಯಾದರೂ ಬಾಗಿಲು ತೆರೆಯದೇ ಇದ್ದಾಗ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿತ್ತು. ಬಾಗಿಲು ಮುರಿದು ಮನೆಗೆ ನುಗ್ಗಿದ್ದಾರೆ.
ರಹೀಜುದ್ದೀನ್ ಎಂಬುವರಿಗೆ ಸೇರಿದ ಮನೆಯಾಗಿದ್ದು, ಅವರ ಮೂವರು ಮಕ್ಕಳು ಮತ್ತು ಅವರ ಸಂಬಂಧಿಕರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಸಹೋದರನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಮತ್ತಷ್ಟು ಓದಿ: ಉತ್ತರಪ್ರದೇಶ: ಸುತ್ತಿಗೆಯಿಂದ ತಲೆಗೆ ಹೊಡೆದು ಪತಿಯನ್ನು ಹತ್ಯೆ ಮಾಡಿದ ಪತ್ನಿ
ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಸೇರಿದಂತೆ ಭಾರೀ ಪೊಲೀಸ್ ಪಡೆ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಷಯದ ಬಗ್ಗೆ ತನಿಖೆ ಆರಂಭಿಸಿದರು.
ಇಂಗಾಲದ ಡೈಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಹಾನಿಕಾರಕ ಅನಿಲಗಳು ಕೊಠಡಿಯಲ್ಲಿರುವಾಗ ಕೋಣೆಯ ಬಾಗಿಲು ಹಾಕಿದರೆ ಅದು ಉಸಿರುಗಟ್ಟುವಕೆಗೆ ಕಾರಣವಾಗಬಹುದು, ದೀರ್ಘಕಾಲ ಅದನ್ನು ಉಸಿರಾಡುವುದರಿಂದ ಸಾವು ಸಂಭವಿಸಬಹುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ