ಉತ್ತರ ಪ್ರದೇಶ: ಭೀಕರ ರಸ್ತೆ ಅಪಘಾತ, ಎರಡು ವಾಹನಗಳ ನಡುವೆ ಡಿಕ್ಕಿ, 6 ಮಂದಿ ಸಾವು

|

Updated on: May 14, 2024 | 8:35 AM

ಉತ್ತರ ಪ್ರದೇಶದ ಹಾಪುರ್​ ಜಿಲ್ಲೆಯಲ್ಲಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದಾರೆ. ಹಾಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 09 ರ ಅಲ್ಲಾಭಕ್ಷಪುರ ಟೋಲ್ ಪ್ಲಾಜಾ ಬಳಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಇನ್ನೊಂದು ಬದಿಗೆ ತಲುಪಿದೆ. ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ಉತ್ತರ ಪ್ರದೇಶ: ಭೀಕರ ರಸ್ತೆ ಅಪಘಾತ, ಎರಡು ವಾಹನಗಳ ನಡುವೆ ಡಿಕ್ಕಿ, 6 ಮಂದಿ ಸಾವು
ಅಪಘಾತ
Follow us on

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಭೀಕರ ಅಪಘಾತ(Accident) ಸಂಭವಿಸಿದೆ. ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಹರಸಾಹಸ ಪಟ್ಟು ಕಾರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಹಾಪುರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 09 ರ ಅಲ್ಲಾಭಕ್ಷಪುರ ಟೋಲ್ ಪ್ಲಾಜಾ ಬಳಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಇನ್ನೊಂದು ಬದಿಗೆ ತಲುಪಿದೆ. ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.

ಆರು ಮಂದಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಅಪಘಾತದ ನಂತರ ಹೆದ್ದಾರಿಯಲ್ಲಿ ಜಾಮ್ ಆಗಿತ್ತು. ಇದರಿಂದ ಚಾಲಕರು ತೊಂದರೆ ಅನುಭವಿಸಬೇಕಾಯಿತು. ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಹಾಪುರದಿಂದ ಮೊರಾದಾಬಾದ್ ಕಡೆಗೆ ಕಾರು ವೇಗವಾಗಿ ಹೋಗುತ್ತಿತ್ತು.

ಕೊತ್ವಾಲಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-9 ರಲ್ಲಿರುವ ಅಲ್ಲಾಬಕ್ಷ್‌ಪುರ ಗ್ರಾಮವನ್ನು ತಲುಪಿದಾಗ, ಚಾಲಕನ ನಿಯಂತ್ರಣ ತಪ್ಪಿ ಕಾರು ಹೆದ್ದಾರಿಯಲ್ಲಿನ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅತಿವೇಗದ ಕಾರಣ ಮೊರಾದಾಬಾದ್‌ನಿಂದ ದೆಹಲಿಗೆ ತೆರಳುವ ಮಾರ್ಗದಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಮತ್ತಷ್ಟು ಓದಿ: ಹರ್ಯಾಣ: ಅಂತ್ಯಕ್ರಿಯೆಗೆ ತೆರಳುತ್ತಿದ್ದವರು ನಿಜವಾಗಿಯೂ ಸ್ಮಶಾನ ಸೇರಿದ್ರು, ಕಾರು ಮರಕ್ಕೆ ಡಿಕ್ಕಿ, 6 ಮಂದಿ ಸಾವು

ಈ ವೇಳೆ ಇನ್ನೊಂದು ಕಡೆಯಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ತೀವ್ರವಾಗಿತ್ತು ಎಂದರೆ ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ವಾಹನಗಳು ಡಿಕ್ಕಿ ಹೊಡೆದ ಸದ್ದು ಕೇಳಿದ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಗ್ರಾಮಸ್ಥರು ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲು ಯತ್ನಿಸಿದರಾದರೂ ಕಾರಿನಲ್ಲಿ ಸಿಲುಕಿದ್ದವರು ಬಹಳ ಹೊತ್ತಾದರೂ ಹೊರತೆಗೆಯಲು ಸಾಧ್ಯವಾಗಲಿಲ್ಲ.

ಗ್ರಾಮಸ್ಥರ ನೆರವಿನಿಂದ ಪೊಲೀಸರು ಕಾರನ್ನು ಕಟ್ ಮಾಡಿ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ತಕ್ಷಣ ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಆರು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:34 am, Tue, 14 May 24