ಉತ್ತರಪ್ರದೇಶ: ಕೋತಿ ದಾಳಿಯಿಂದ ಇಬ್ಬರು ಮಕ್ಕಳ ಜೀವ ಉಳಿಸಿದ ಅಲೆಕ್ಸಾ

|

Updated on: Apr 06, 2024 | 10:24 AM

13 ವರ್ಷದ ನಿಕಿತಾ ಎಂಬ ಬಾಲಕಿ ತನ್ನ ಒಂದು ವರ್ಷದ ಸಹೋದರಿಯ ಜತೆಗೆ ಅಡುಗೆ ಮನೆಯಲ್ಲಿ ಆಟವಾಡುತ್ತಿರುವಾಗ ಏಕಾಏಕಿಯಾಗಿ ಕೋತಿಯೊಂದು ಅಡುಗೆ ಮನೆಯೊಳಗೆ ನುಗ್ಗಿದೆ. ಆ ಮನೆಯ ಹಿರಿಯರು ಇನ್ನೊಂದು ಕೊಣೆಯಲ್ಲಿದ್ದ ಕಾರಣ ಮಂಗ ಬಂದಿರುವುದು ಅವರಿಗೂ ಗೊತ್ತಾಗಿಲ್ಲ. ಕೋತಿ ಅಡುಗೆ ಮನೆಯಲ್ಲಿ ಪಾತ್ರೆವೆಲ್ಲವನ್ನು ಎಸೆಯಲು ಆರಂಭಿಸಿದೆ. ನಂತರ ಮಗು ಮತ್ತು ಬಾಲಕಿಯ ಮೇಲೆ ದಾಳಿ ಮಾಡಲು ಮುಂದಾಗಿದೆ. ತಕ್ಷಣ ನಿಕಿತಾ ತಾಯಿಯನ್ನು ಕೂಗಲು ಮುಂದಾಗಿದ್ದಾಳೆ. ಇವಳ ಕೂಗನ್ನು ಕೇಳಿದ ಅಲೆಕ್ಸಾ ವಿಚಿತ್ರವಾಗಿ ಕೂಗಲು ಪ್ರಾರಂಭಿಸಿದೆ. ಇದರಿಂದ ಭಯಗೊಂಡ ಕೋತಿ ಅಲ್ಲಿಂದ ಓಡಿ ಹೋಗಿದೆ.

ಬಸ್ತಿ, ಏ.06: ತಂತ್ರಜ್ಞಾನ ಎಂಬುದು ಎಷ್ಟು ಅಪಾಯಕಾರಿ ಅಷ್ಟೇ ಉಪಕಾರಿಯೂ ಹೌದು, ಅಲೆಕ್ಸಾ ಎಂಬ ತಂತ್ರಜ್ಞಾನದಿಂದ ಬಾಲಕಿಯೊಬ್ಬಳು ಒಂದು ವರ್ಷದ ಮಗುವಿನ ಪ್ರಾಣ ಉಳಿಸಿದ್ದಾಳೆ, ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ 13 ವರ್ಷದ ಬಾಲಕಿಯ ಸಮಯಪ್ರಜ್ಞೆಯಿಂದ ಪುಟ್ಟ ಮಗುವನ್ನು ಮಂಗನ ದಾಳಿಯಿಂದ ರಕ್ಷಿಸಿದ್ದಾಳೆ. ಅಲೆಕ್ಸಾ ಕೇವಲ ನಮ್ಮ ಹಾಡು ಅಥವಾ ಆದೇಶಗಳನ್ನು ಪಾಲಿಸುವ ತಂತ್ರಜ್ಞಾನ ಮಾತ್ರವಲ್ಲ ನಮ್ಮ ರಕ್ಷಣೆಗೂ ಬರುತ್ತದೆ ಎಂಬುದನ್ನು ಈ ಬಾಲಕಿ ಸಾಬೀತು ಪಡಿಸಿದ್ದಾಳೆ. ತನ್ನ ಮನೆಯ ಪುಟ್ಟ ಮಗುವನ್ನು ಮಂಗನಿಂದ ರಕ್ಷಣೆ ಮಾಡಲು ಅಮೆಜಾನ್‌ನ ವರ್ಚುವಲ್ ಧ್ವನಿ ಅಲೆಕ್ಸಾದ (Amazon Alexa) ಮುಂದೆ ತಾಯಿಯನ್ನು ಕೂಗಿದ್ದಾಳೆ. ತಕ್ಷಣ ಈ ಕೂಗನ್ನು ಕೇಳಿಸಿಕೊಂಡ ಅಲೆಕ್ಸಾ ಕೋತಿಯನ್ನು ಭಯಗೊಳಿಸಲು ವಿಚಿತ್ರ ರೀತಿಯಲ್ಲಿ ಕೂಗಿದೆ. ಮಂಗ ಅಲೆಕ್ಸಾದ ಧ್ವನಿಗೆ ಭಯಗೊಂಡು ಅಲ್ಲಿಂದ ಓಡಿ ಹೋಗಿದೆ.

13 ವರ್ಷದ ನಿಕಿತಾ ಎಂಬ ಬಾಲಕಿ ತನ್ನ ಒಂದು ವರ್ಷದ ಸಹೋದರಿಯ ಜತೆಗೆ ಅಡುಗೆ ಮನೆಯಲ್ಲಿ ಆಟವಾಡುತ್ತಿರುವಾಗ ಏಕಾಏಕಿಯಾಗಿ ಕೋತಿಯೊಂದು ಅಡುಗೆ ಮನೆಯೊಳಗೆ ನುಗ್ಗಿದೆ. ಆ ಮನೆಯ ಹಿರಿಯರು ಇನ್ನೊಂದು ಕೊಣೆಯಲ್ಲಿದ್ದ ಕಾರಣ ಮಂಗ ಬಂದಿರುವುದು ಅವರಿಗೂ ಗೊತ್ತಾಗಿಲ್ಲ. ಕೋತಿ ಅಡುಗೆ ಮನೆಯಲ್ಲಿ ಪಾತ್ರೆವೆಲ್ಲವನ್ನು ಎಸೆಯಲು ಆರಂಭಿಸಿದೆ. ನಂತರ ಮಗು ಮತ್ತು ಬಾಲಕಿಯ ಮೇಲೆ ದಾಳಿ ಮಾಡಲು ಮುಂದಾಗಿದೆ. ತಕ್ಷಣ ನಿಕಿತಾ ತಾಯಿಯನ್ನು ಕೂಗಲು ಮುಂದಾಗಿದ್ದಾಳೆ. ಇವಳ ಕೂಗನ್ನು ಕೇಳಿದ ಅಲೆಕ್ಸಾ ವಿಚಿತ್ರವಾಗಿ ಕೂಗಲು ಪ್ರಾರಂಭಿಸಿದೆ. ಇದರಿಂದ ಭಯಗೊಂಡ ಕೋತಿ ಅಲ್ಲಿಂದ ಓಡಿ ಹೋಗಿದೆ.

ಬಾಲಕಿಯ ಈ ಸಮಯಪ್ರಜ್ಞೆಗೆ ಎಲ್ಲ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಕುಟುಂಬ ಕೂಡ ಬಾಲಕಿಯ ಕಾರ್ಯಕ್ಕೆ ಸಂತೋಷ ವ್ಯಕ್ತಪಡಿಸಿದೆ. ಅಲೆಕ್ಸಾವನ್ನು ಈ ರೀತಿ ಬಳಸಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಪಂಕಜ್ ಓಜಾ ಹೇಳಿದ್ದಾರೆ.

ಇದನ್ನೂ ಓದಿ: ಸೀಟ್ ಬೆಲ್ಟ್ ಧರಿಸಿಲ್ಲವೆಂದು ಟ್ರ್ಯಾಕ್ಟರ್ ಚಾಲಕನಿಗೆ ದಂಡ ಹಾಕಿದ ಪೊಲೀಸರು

ಈ ಅಲೆಕ್ಸಾ ಎಂಬುದು ಅಮೆಜಾನ್‌ನ ಕ್ಲೌಡ್-ಆಧಾರಿತ ಧ್ವನಿ ಸಹಾಯಕವಾಗಿದ್ದು, ಟೈಮರ್‌ಗಳನ್ನು ಹೊಂದಿಸುವುದು, ಪ್ರಶ್ನೆಗಳನ್ನು ಕೇಳುವುದು, ಸಂಗೀತವನ್ನು ಕೇಳಿಸುವುದು, ಹೀಗೆ ಅನೇಕ ಚಟುವಟಿಕೆಗಳನ್ನು ಮಾಡುತ್ತದೆ. ಇದೆ ರೀತಿಯ ಘಟನೆಯೊಂದು ಡಿಸೆಂಬರ್ 2021ರಲ್ಲಿ ನಡೆದಿತ್ತು. 10 ವರ್ಷದ ಬಾಲಕಿಯ ಜೀವವನ್ನು ಅಲೆಕ್ಸಾ ಕಾಪಾಡಿತ್ತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ