ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 26, 2022 | 12:28 PM

ಹೆಲಿಕಾಪ್ಟರ್​ಗೆ ಹಕ್ಕಿಯೊಂದು ಬಡಿದ ಕಾರಣ ತಾಂತ್ರಿಕ ಸಮಸ್ಯೆ ಉಂಟಾಯಿತು ಎಂದು ಹೇಳಲಾಗಿದೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Follow us on

ಲಖನೌ: ತಾಂತ್ರಿಕ ಸಮಸ್ಯೆಯಿಂದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ವಾರಾಣಸಿ ಬಳಿ ಭಾನುವಾರ (ಜೂನ್ 26) ನಡೆದಿದೆ. ಹೆಲಿಕಾಪ್ಟರ್​ಗೆ ಹಕ್ಕಿಯೊಂದು ಬಡಿದ ಕಾರಣ ತಾಂತ್ರಿಕ ಸಮಸ್ಯೆ ಉಂಟಾಯಿತು ಎಂದು ಹೇಳಲಾಗಿದೆ. ಯಾವುದೇ ಅಪಾಯಗಳಿಲ್ಲದೆ ಯೋಗಿ ಆದಿತ್ಯನಾಥ್ ಪಾರಾಗಿದ್ದಾರೆ.

‘ಯೋಗಿ ಆದಿತ್ಯನಾಥ್ ಅವರು ವಾರಾಣಸಿಯಿಂದ ಲಖನೌಗೆ ಹಿಂದಿರುಗುತ್ತಿದ್ದಾಗ ಹಕ್ಕಿಯೊಂದು ಬಡಿಯಿತು. ಹೀಗಾಗಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಬೇಕಾಯಿತು’ ಎಂದು ಜಿಲ್ಲಾಧಿಕಾರಿ ಕೌಶಲ್​ರಾಜ್ ಶರ್ಮಾ ಹೇಳಿದ್ದಾರೆ. ಯೋಗಿ ಆದಿತ್ಯನಾಥ್ ಅವರು ನಿನ್ನೆ (ಜೂನ್ 25) ಕಾಶಿ ವಿಶ್ವನಾಥ ದೇಗುಲಕ್ಕೆ ಆಗಮಿಸಿದ್ದರು.

ಪ್ರಸ್ತುತ ವಾರಾಣಸಿಯ ಸರ್ಕೀಟ್​ ಹೌಸ್​ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆದಿತ್ಯನಾಥ್, ನಂತರ ಸರ್ಕಾರಿ ವಿಮಾನದಲ್ಲಿ ಲಖನೌಗೆ ತೆರಳಲಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ಶನಿವಾರ ಮುಂಜಾನೆ ಲಖನೌ ನಗರದಲ್ಲಿ 11 ಲಕ್ಷ ಕುಟುಂಬಗಳಿಗೆ ಆನ್​ಲೈನ್ ಮೂಲಕ ವಾಸ ದೃಢೀಕರಣ ಪತ್ರಗಳನ್ನು ವಿತರಿಸಿದ್ದರು. ರಾಜ್ಯವನ್ನು ಸ್ವಾವಲಂಬಿಯಾಗಿಸುವ ತಮ್ಮ ಆಶಯವನ್ನು ಅವರು ಪುನರುಚ್ಚರಿಸಿದ್ದರು. ಉತ್ತರ ಪ್ರದೇಶಗಳಲ್ಲಿ ವಿವಿಧ ಗ್ರಾಮಗಳಲ್ಲಿರುವ ಸುಮಾರು 2.5 ಕೋಟಿ ಮಂದಿಗೆ ಈ ದಾಖಲೆಗಳು ಶೀಘ್ರ ಲಭ್ಯವಾಗಲಿವೆ ಎಂದು ಹೇಳಿದ್ದರು.

Published On - 12:06 pm, Sun, 26 June 22