ಹೆದ್ದಾರಿಯಲ್ಲಿ ಮದ್ಯದ ನಶೆಯಲ್ಲಿ ಮಲಗಿದ್ದವನನ್ನು ರಕ್ಷಿಸಲು ಹೋಗಿ ಪೊಲೀಸ್​ ಪೇದೆ ಸಾವು, ಮೂವರಿಗೆ ಗಾಯ

|

Updated on: Jul 06, 2023 | 9:44 AM

ಹೆದ್ದಾರಿಯಲ್ಲಿ ಮದ್ಯದ ನಶೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ

ಹೆದ್ದಾರಿಯಲ್ಲಿ ಮದ್ಯದ ನಶೆಯಲ್ಲಿ ಮಲಗಿದ್ದವನನ್ನು ರಕ್ಷಿಸಲು ಹೋಗಿ ಪೊಲೀಸ್​ ಪೇದೆ ಸಾವು, ಮೂವರಿಗೆ ಗಾಯ
ಅಪಘಾತ(ಸಾಂದರ್ಭಿಕ ಚಿತ್ರ)
Image Credit source: NDTV
Follow us on

ಹೆದ್ದಾರಿಯಲ್ಲಿ ಮದ್ಯದ ನಶೆಯಲ್ಲಿ ಮಲಗಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ. ಕಾನ್ಪುರದ ದೇಹತ್ ಜಿಲ್ಲೆಯ ಅಕ್ಬರ್​ಪುರ ಪ್ರದೇಶದ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟೆಂಪೋವೊಂದು ಪೊಲೀಸ್​ ಪೇದೆ ಸೇರಿದಂತೆ ಇತರೆ ಮೂರು ಪೊಲೀಸರಿಗೆ ಡಿಕ್ಕಿ ಹೊಡೆದ ಪರಿಣಾಮ ಮದ್ಯ ವ್ಯಸನಿ ಹಾಗೂ ಪೊಲೀಸ್ ಪೇದೆ ಮೃತಪಟ್ಟಿದ್ದು, ಮೂವರು ಪೊಲೀಸರಿಗೆ ಗಾಯಗಳಾಗಿವೆ. ಕುಡಿದು ಮಲಗಿದ್ದ ವ್ಯಕ್ತಿ ಯಾರೆಂಬುದು ಪತ್ತೆಯಾಗಿಲ್ಲ.

ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಸಬ್ ಇನ್ಸ್‌ಪೆಕ್ಟರ್ ಮಥುರಾ ಪ್ರಸಾದ್, ಹೆಡ್ ಕಾನ್ಸ್‌ಟೇಬಲ್ ಅರವಿಂದ್ ಕುಮಾರ್ ಮತ್ತು ಕಾನ್‌ಸ್ಟೆಬಲ್‌ಗಳಾದ ಸೌರಭ್ ಕುಮಾರ್ ಮತ್ತು ವಿವೇಕ್ ಕುಮಾರ್ ಅವರೊಂದಿಗೆ ಗಸ್ತು ತಿರುಗುತ್ತಿದ್ದಾಗ ಮಾದಾಪುರ ಸೇತುವೆಯ ಹೆದ್ದಾರಿಯಲ್ಲಿ ಒಬ್ಬ ಕುಡುಕನನ್ನು ಕಂಡಿದ್ದಾನೆ ಅವರನ್ನು ರಕ್ಷಿಸಲು ಹೋಗಿ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿ ರಾಜೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಮತ್ತಷ್ಟು ಓದಿ: Bengaluru Accident: ಬೆಂಗಳೂರಿನ ಜಾಲಹಳ್ಳಿ ಕ್ರಾಸ್​​ನಲ್ಲಿ ಬಸ್, ಸ್ಕೂಟರ್ ಅಪಘಾತ; ಪಿಯು ವಿದ್ಯಾರ್ಥಿನಿ ಸಾವು

ಟೆಂಪೋ ಬರುತ್ತಿರುವಾಗ ಪೊಲೀಸರು ತಮ್ಮ ವಾಹನದಿಂದ ಜಿಗಿದಿದ್ದಾರೆ, ಕಾನ್​ಸ್ಟೆಬಲ್ ವಿವೇಕ್ ಕುಡುಕನನ್ನು ಎಳೆಯಲು ಪ್ರಯತ್ನಿಸಿದಾಗ ವೇಗವಾಗಿ ಬಂದ ಲೋಡರ್ ಟೆಂಪೋ ಅವರಿಗೆ ಡಿಕ್ಕಿ ಹೊಡೆದು ಸೇತುವೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಇತರೆ ಪೊಲೀಸರಿಗೆ ಕೈ, ಕಾಲು ಮತ್ತು ಸೊಂಟಕ್ಕೆ ಗಂಭೀರ ಗಾಯಗಳಾಗಿದ್ದು, ಕಾನ್‌ಸ್ಟೆಬಲ್ ಸೌರಭ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿಂದ ರೀಜೆನ್ಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಸಹರಾನ್‌ಪುರ ಮೂಲದ ಮೃತ ಪೋಲೀಸ್ ವಿವೇಕ್ ಕುಮಾರ್ 2019 ರಲ್ಲಿ ನೇಮಕಗೊಂಡಿದ್ದರು. ಅವರನ್ನು ಅಕ್ಬರ್‌ಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು ಎಂದು ಎಎಸ್‌ಪಿ ಸೇರಿಸಲಾಗಿದೆ.

ದೆಹಲಿಯ ನಿವಾಸಿ ಸುರೇಂದ್ರ ಕುಮಾರ್ ಗುಪ್ತಾ (40) ಎಂದು ಗುರುತಿಸಲಾದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ವಾಹನವನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ