Maharashtra Politics: ಇಂದು ದೆಹಲಿಯಲ್ಲಿ ಎನ್​ಸಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ, ಪಕ್ಷದ ನಾಯಕರನ್ನು ಒಗ್ಗೂಡಿಸಲು ಶರದ್ ಪವಾರ್ ಯತ್ನ

ರಾಜಕೀಯ ಬಿಕ್ಕಟ್ಟಿನ ನಡುವೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ ಅಧ್ಯಕ್ಷ ಶರದ್ ಪವಾರ್(Sharad Pawar) ಇಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಆಯೋಜಿಸಿದ್ದಾರೆ.

Maharashtra Politics: ಇಂದು ದೆಹಲಿಯಲ್ಲಿ ಎನ್​ಸಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ, ಪಕ್ಷದ ನಾಯಕರನ್ನು ಒಗ್ಗೂಡಿಸಲು ಶರದ್ ಪವಾರ್ ಯತ್ನ
ಶರದ್ ಪವಾರ್Image Credit source: Economic Times
Follow us
ನಯನಾ ರಾಜೀವ್
|

Updated on: Jul 06, 2023 | 10:45 AM

ರಾಜಕೀಯ ಬಿಕ್ಕಟ್ಟಿನ ನಡುವೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ ಅಧ್ಯಕ್ಷ ಶರದ್ ಪವಾರ್(Sharad Pawar) ಇಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಆಯೋಜಿಸಿದ್ದಾರೆ. ದೇಶದ ವಿವಿಧ ಭಾಗಗಳಿಂದ ಎನ್​ಸಿಪಿ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮಹಾರಾಷ್ಟ್ರ(Maharashtra)ದಲ್ಲಿ ಎನ್​ಸಿಪಿ(NCP) ಪಕ್ಷ ಒಡೆದ ಬಳಿಕ ಶರದ್ ಪವಾರ್ ಈ ಸಭೆಯ ಮೂಲಕ ಎನ್ ಸಿಪಿ ನಾಯಕರನ್ನು ಒಗ್ಗೂಡಿಸಲು ಪ್ರಯತ್ನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಜುಲೈ 2 ರಂದು ಎನ್‌ಸಿಪಿ ವಿಭಜನೆಯಾದ ಬಳಿಕ ಎರಡೂ ಬಣಗಳು ತಮ್ಮ ಶಕ್ತಿ ಪ್ರದರ್ಶಿಸಲು ಬುಧವಾರ ಪ್ರತ್ಯೇಕ ಸಭೆಗಳನ್ನು ನಡೆಸಿದ್ದವು. ಅಜಿತ್ ಬಣದ ಸಭೆಯಲ್ಲಿ ಒಟ್ಟು 53 ಎನ್‌ಸಿಪಿ ಶಾಸಕರ ಪೈಕಿ 32 ಮಂದಿ ಪಾಲ್ಗೊಂಡಿದ್ದರು.

ಮತ್ತಷ್ಟು ಓದಿ: Maharashtra Politics: ‘ಮಹಾ’ ರಾಜಕೀಯ; ಬಲ ಪ್ರದರ್ಶನದ ಬಳಿಕ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಅಜಿತ್ ಪವಾರ್

ಅದೇ ಸಮಯದಲ್ಲಿ ಶರದ್ ಪವಾರ್ ಬಣದ ಸಭೆಯಲ್ಲಿ 16 ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು ಮತ್ತು ನಾಲ್ವರು ಸಂಸದರು ಭಾಗವಹಿಸಿದ್ದರು. ಪಕ್ಷ ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕು ಕುರಿತು ಎರಡೂ ಬಣಗಳು ಚುನಾವಣಾ ಆಯೋಗವನ್ನು ತಲುಪಿವೆ. ಅಜಿತ್ ಬಣ ತನ್ನ ಬೆಂಬಲಕ್ಕೆ 40 ಕ್ಕೂ ಹೆಚ್ಚು ಶಾಸಕರು ಮತ್ತು ಸಂಸದರ ಅಫಿಡವಿಟ್‌ಗಳನ್ನು ನೀಡಿದೆ.

ಪಕ್ಷ ಹಾಗೂ ಚಿಹ್ನೆಯನ್ನು ಕಸಿದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಶರದ್ ಪವಾರ್ ತನ್ನ ಬೆಂಬಲಿಗರಿಗೆ ಭರವಸೆ ನೀಡಿದ್ದಾರೆ. ಶರದ್​ ಪವಾರ್ ನೇತೃತ್ವದ ಸಭೆಯು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ, ಇಂದು ಬೆಳಗ್ಗೆ ಪವಾರ್ ದೆಹಲಿಯನ್ನು ತಲುಪಿದ್ದಾರೆ.

ಇನ್ನೊಂದೆಡೆ 2004ರಲ್ಲಿ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಅಜಿತ್ ಪವಾರ್ ಶರದ್ ಪವಾರ್ ಅವರನ್ನು ದೂಷಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ