AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಪ್ರಕರಣ ಇತ್ಯರ್ಥಕ್ಕೆ ‘ಆಲೂಗಡ್ಡೆ’ ಲಂಚ ಕೇಳಿದ ಸಬ್ ಇನ್ಸ್‌ಪೆಕ್ಟರ್ ಅಮಾನತು

ಲಂಚ ಕೇಳಿದ ಸಬ್ ಇನ್‌ಸ್ಪೆಕ್ಟರ್‌ನನ್ನು ತಕ್ಷಣ ಅಮಾನತುಗೊಳಿಸುವಂತೆ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆದೇಶಿಸಿದ್ದಾರೆ. ಆರೋಪಿಯನ್ನು ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾವಲ್ಪುರ್ ಚಾಪುನ್ನಾ ಚೌಕಿಯಲ್ಲಿ ನಿಯೋಜಿಸಲಾಗಿದೆ. ಆರೋಪಿಗಳ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ. ಆಡಿಯೋ ಕ್ಲಿಪ್‌ನಲ್ಲಿ ಪೋಲೀಸರು ರೈತರೊಬ್ಬರಿಗೆ "5 ಕೆಜಿ ಆಲೂಗಡ್ಡೆ" ಕೇಳುತ್ತಿರುವುದನ್ನು ಕೇಳಬಹುದು. ಇದಕ್ಕೆ ರೈತ ತಾನು ಕೇವಲ 2 ಕೆಜಿ ಆಲೂಗಡ್ಡೆ ನೀಡಬಲ್ಲೆ ಎಂದು ಉತ್ತರಿಸುತ್ತಾನೆ.

ಉತ್ತರ ಪ್ರದೇಶ: ಪ್ರಕರಣ ಇತ್ಯರ್ಥಕ್ಕೆ ‘ಆಲೂಗಡ್ಡೆ’ ಲಂಚ ಕೇಳಿದ ಸಬ್ ಇನ್ಸ್‌ಪೆಕ್ಟರ್ ಅಮಾನತು
ರಾಮ್ ಕೃಪಾಲ್ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on: Aug 10, 2024 | 9:03 PM

Share

ಕನೌಜ್ ಆಗಸ್ಟ್ 10: ಉತ್ತರ ಪ್ರದೇಶದ (Uttar Pradesh) ಕನೌಜ್‌ನಲ್ಲಿ (Kannauj) ಆಲೂಗೆಡ್ಡೆ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಆಲೂಗಡ್ಡೆ ಲಂಚವನ್ನು ಸೂಚಿಸಲು ಬಳಸುವ ಪದವಾಗಿದೆ ಎಂದು ವರದಿಗಳು ತಿಳಿಸಿವೆ. ಅದೊಂದು ರೀತಿಯ ಕೋಡ್ ವರ್ಡ್ ಆಗಿತ್ತು. ಲಂಚ ಕೇಳಿದ ಪೊಲೀಸರನ್ನು ರಾಮ್ ಕೃಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ವ್ಯಕ್ತಿಯೊಬ್ಬ ಲಂಚಕ್ಕೆ ಬೇಡಿಕೆ ಇಟ್ಟಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕನೌಜ್ ಎಸ್ಪಿ ಆರೋಪಿ ಎಸ್‌ಐ ಅನ್ನು ಅಮಾನತುಗೊಳಿಸಿದ್ದಾರೆ.

ಎನ್‌ಡಿಟಿವಿ ವರದಿಯ ಪ್ರಕಾರ, ಲಂಚ ಕೇಳಿದ ಸಬ್ ಇನ್‌ಸ್ಪೆಕ್ಟರ್‌ನನ್ನು ತಕ್ಷಣ ಅಮಾನತುಗೊಳಿಸುವಂತೆ ಕನೌಜ್ ಎಸ್‌ಪಿ ಅಮಿತ್ ಕುಮಾರ್ ಆದೇಶಿಸಿದ್ದಾರೆ. ಆರೋಪಿಯನ್ನು ಸೌರಿಖ್ ಪೊಲೀಸ್ ಠಾಣೆ ವ್ಯಾಪ್ತಿಯ ಭಾವಲ್ಪುರ್ ಚಾಪುನ್ನಾ ಚೌಕಿಯಲ್ಲಿ ನಿಯೋಜಿಸಲಾಗಿದೆ. ಆರೋಪಿಗಳ ವಿರುದ್ಧ ತನಿಖೆಗೂ ಆದೇಶಿಸಲಾಗಿದೆ.

ಆಡಿಯೋ ಕ್ಲಿಪ್‌ನಲ್ಲಿ ಪೋಲೀಸರು ರೈತರೊಬ್ಬರಿಗೆ “5 ಕೆಜಿ ಆಲೂಗಡ್ಡೆ” ಕೇಳುತ್ತಿರುವುದನ್ನು ಕೇಳಬಹುದು. ಇದಕ್ಕೆ ರೈತ ತಾನು ಕೇವಲ 2 ಕೆಜಿ ಆಲೂಗಡ್ಡೆ ನೀಡಬಲ್ಲೆ ಎಂದು ಉತ್ತರಿಸುತ್ತಾನೆ. ಇದರಿಂದ ಕೋಪಗೊಂಡ ಇನ್ಸ್ ಪೆಕ್ಟರ್ 5 ಕೆಜಿ ಆಲೂಗಡ್ಡೆ ಬೇಕು ಎಂದು ಮತ್ತೊಮ್ಮೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ಅಂತಿಮವಾಗಿ 3 ಕೆ.ಜಿ.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಕನೌಜ್‌ನಲ್ಲಿ ಒಬ್ಬ ಪೋಲೀಸ್ ಲಂಚವಾಗಿ ‘5 ಕೆಜಿ ಆಲೂ’ ಕೇಳಿದನು. ಈಗ ಇನ್ನೊಬ್ಬ ವ್ಯಕ್ತಿ 5 ಕೆಜಿ ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಕೊನೆಗೆ 3 ಕೆಜಿಗೆ ಒಪ್ಪಂದವಾಯಿತು. ಪೊಲೀಸರನ್ನು ಅಮಾನತುಗೊಳಿಸಲಾಗಿದೆ, ಆಲೂ ಅನ್ನು ಕೋಡ್ ಪದವಾಗಿ ಬಳಸಲಾಗುತ್ತಿದೆ ಎಂದು ಕನೌಜ್ ಎಸಿಪಿ ಹೇಳಿದ್ದಾರೆ.

ಇದನ್ನೂ ಓದಿ: ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸದಿದ್ದರೆ ಪಂಜಾಬ್‌ನಲ್ಲಿ ಯೋಜನೆ ರದ್ದುಗೊಳಿಸುವುದಾಗಿ ಪತ್ರ ಬರೆದ ಗಡ್ಕರಿ

ಪ್ರಕರಣ ಮತ್ತು ತೆಗೆದುಕೊಂಡ ಕ್ರಮವನ್ನು ವಿವರಿಸುತ್ತಾ, ಕನೌಜ್ ಪೋಲೀಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಎಕ್ಸ್’ ನಲ್ಲಿ, “ಮೇಲಿನ ಪ್ರಕರಣದಲ್ಲಿ, ಎಸ್‌ಐ ರಾಮಕೃಪಾಲ್ ಅವರನ್ನು ತಪ್ಪಿತಸ್ಥರೆಂದು ಕಂಡುಹಿಡಿದ ನಂತರ 07.08.2024 ರಂದು ಕನೌಜ್ ಪೊಲೀಸ್ ಅಧೀಕ್ಷಕರು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಪ್ರಾಥಮಿಕವಾಗಿ ಅವರನ್ನು ಅಮಾನತುಗೊಳಿಸಲಾಗಿದೆ, ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ರಾಮ್ ಕೃಪಾಲ್ ಸಿಂಗ್ ವಿರುದ್ಧದ ತನಿಖೆಯನ್ನು ಕನೌಜ್ ನಗರದ ಸರ್ಕಲ್ ಆಫೀಸರ್ ಕಮಲೇಶ್ ಕುಮಾರ್ ವಹಿಸಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ