ಕಾಳಿಂದಿ ರೈಲು ಹಳಿ ತಪ್ಪಿಸಲು ಯತ್ನ, ಹಳಿಯಲ್ಲಿ ಸಿಲಿಂಡರ್​, ಪೆಟ್ರೋಲ್​ ಬಾಟಲಿಗಳು ಪತ್ತೆ

|

Updated on: Sep 09, 2024 | 9:33 AM

ಕಾಳಿಂದಿ ಎಕ್ಸ್​ಪ್ರೆಸ್​ ರೈಲು ಸ್ವಲ್ಪದರಲ್ಲೇ ಭಾರಿ ಅಪಘಾತದಿಂದ ಪಾರಾಗಿದೆ. ಅಪಾಯಕಾರಿ ವಸ್ತುಗಳು ಹಳಿಗಳ ಮೇಲೆ ಪತ್ತೆಯಾದ ನಂತರ ದೊಡ್ಡ ರೈಲು ದುರಂತವನ್ನು ತಪ್ಪಿಸಲಾಗಿದೆ. ಸಿಲಿಂಡರ್, ಪೆಟ್ರೋಲ್ ಬಾಟಲ್ ಮತ್ತು ಪೌಡರ್‌ನಂತಹ ಅಪಾಯಕಾರಿ ವಸ್ತುಗಳು ಹಳಿಗಳ ಮೇಲೆ ಪತ್ತೆಯಾಗಿವೆ.

ಕಾಳಿಂದಿ ರೈಲು ಹಳಿ ತಪ್ಪಿಸಲು ಯತ್ನ, ಹಳಿಯಲ್ಲಿ ಸಿಲಿಂಡರ್​, ಪೆಟ್ರೋಲ್​ ಬಾಟಲಿಗಳು ಪತ್ತೆ
ಸಿಲಿಂಡರ್
Follow us on

ಕಾನ್ಪುರದಲ್ಲಿ ಕಾಳಿಂದಿ ಎಕ್ಸ್​ಪ್ರೆಸ್​ ರೈಲು ಹಳಿ ತಪ್ಪಿಸುವ ಯತ್ನ ನಡೆದಿದ್ದು, ಹಳಿಯಲ್ಲಿ ಗ್ಯಾಸ್​ ಸಿಲಿಂಡರ್​, ಪೆಟ್ರೋಲ್​ ಬಾಟಲಿಗಳು ಸಿಕ್ಕಿವೆ. ಭಾರಿ ಅನಾಹುತ ತಪ್ಪಿದೆ. ಅಪಾಯಕಾರಿ ವಸ್ತುಗಳು ಹಳಿಗಳ ಮೇಲೆ ಪತ್ತೆಯಾದ ನಂತರ ದೊಡ್ಡ ರೈಲು ದುರಂತವನ್ನು ತಪ್ಪಿಸಲಾಗಿದೆ.

ನಿನ್ನೆ ರಾತ್ರಿ 8.25 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾಳಿಂದಿ ಎಕ್ಸ್‌ಪ್ರೆಸ್ ಬರಜ್‌ಪುರ ನಿಲ್ದಾಣದಿಂದ ಹೊರಟು 2.3 ಕಿಲೋಮೀಟರ್ ದೂರದಲ್ಲಿದ್ದಾಗ ಹಳಿಗಳ ಮೇಲೆ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗೆ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ದೊಡ್ಡ ಶಬ್ದವನ್ನು ಕೇಳಿದ ಲೊಕೊ ಪೈಲಟ್ ತಕ್ಷಣ ತುರ್ತು ಬ್ರೇಕ್‌ ಹಾಕಿದ್ದಾರೆ.

ಬಳಿಕ ಇಳಿದು ನೋಡಿದಾಗ ಅಪಾಯಕಾರಿ ವಸ್ತುಗಳು ಹಳಿಯಲ್ಲಿರುವುದು ಕಂಡುಬಂದಿತ್ತು.
ತಕ್ಷಣ ರೈಲ್ವೆ ಪ್ರೊಟೆಕ್ಷನ್ ಫೋರ್ಸ್​ಗೆ ಮಾಹಿತಿ ನೀಡಲಾಗಿತ್ತು. ಪ್ರದೇಶದ ಸಂಪೂರ್ಣ ಶೋಧ ನಡೆಸಲಾಯಿತು. ರೈಲಿಗೆ ಡಿಕ್ಕಿಯಾದ ಕಾರಣ ಸಿಲಿಂಡರ್ ಹಳಿಯಿಂದ ತುಂಬಾ ದೂರ ಹೋಗಿ ಬಿದ್ದಿದೆ.

ಮತ್ತಷ್ಟು ಓದಿ: ಚಲಿಸುತ್ತಿರುವಾಗಲೇ ಬೇರ್ಪಟ್ಟ ಮಗಧ್ ರೈಲಿನ ಬೋಗಿಗಳು

ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದ್ದು, ಘಟನೆಯ ತೀವ್ರತೆಯನ್ನು ಗಮನಿಸಿದ ರೈಲ್ವೆ ಅಧಿಕಾರಿಗಳು ಉತ್ತರ ಪ್ರದೇಶ ಡಿಜಿಪಿ ಮತ್ತು ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸುವ ಮೊದಲು ಘಟನೆಯ ಸ್ಥಳದಲ್ಲಿ ಸುಮಾರು 20 ನಿಮಿಷಗಳ ಕಾಲ ನಿಂತಿತ್ತು.

ಘಟನೆಯಲ್ಲಿ ಲೊಕೊ ಪೈಲಟ್ ಗಾಯಗೊಂಡಿಲ್ಲ ಮತ್ತು ರೈಲಿಗೆ ಯಾವುದೇ ಹಾನಿಯಾಗಿಲ್ಲ ಎಂದು ಈಶಾನ್ಯ ರೈಲ್ವೆ (ಎನ್‌ಇಆರ್) ತಿಳಿಸಿದೆ. ಲೊಕೊ ಪೈಲಟ್ ಮತ್ತು ರೈಲು ವ್ಯವಸ್ಥಾಪಕರು ಆರ್‌ಪಿಎಫ್‌ಗೆ ಎಚ್ಚರಿಕೆ ನೀಡಿದ್ದು, ಅವರು ಅಧಿಕಾರಿಗಳಿಗೆ ತಿಳಿಸುವ ಮೊದಲು ಸಿಲಿಂಡರ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡರು.

ಟ್ರ್ಯಾಕ್​ ಮೇಲೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಗನ್​ಪೌಡರ್​ ಇರುವ ಚೀಲ ಸೇರಿದಂತೆ ಹಲವು ಅಪಾಯಕಾರಿ ವಸ್ತುಗಳು ಸಿಕ್ಕಿದ್ದು, ಫೋರೆನ್ಸಿಕ್ ತಂಡವನ್ನೂ ಸ್ಥಳಕ್ಕೆ ಕರೆಸಿದ್ದಾರೆ. ಘಟನೆಯ ತನಿಖೆಯನ್ನು ಇಂಟೆಲಿಜೆನ್ಸ್ ಬ್ಯೂರೋ ಹಸ್ತಾಂತರಿಸಲಾಗಿದೆ. ಘಟನೆ ನಡೆದ ಸ್ಥಳದ ಸಂಪೂರ್ಣ ಕಣ್ಗಾವಲು ನಂತರ ಎಫ್‌ಐಆರ್ ದಾಖಲಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ