ಹಣ ಕೊಡುವಂತೆ ಬರೆದ ಮೆಸೇಜ್ನಲ್ಲಿ ಸ್ಪೆಲಿಂಗ್ ಮಿಸ್ಟೇಕ್ನಿಂದಾಗಿ ಅಪಹರಣಕಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಹರ್ದೋಯ್ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಹೋದರನಿಗೆ 5 ಸಾವಿರ ರೂ. ವಂಚನೆ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿರುವ ಘಟನೆ ಇದಾಗಿದೆ.
ಜನವರಿ 5 ರಂದು, ಪಿಹಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂದರ್ಹಾ ಗ್ರಾಮದ ನಿವಾಸಿ ಗುತ್ತಿಗೆದಾರ ಸಂಜಯ್ ಕುಮಾರ್, ತನ್ನ 27 ವರ್ಷದ ಸಹೋದರ ಸಂದೀಪ್‌ನನ್ನು ಅಪಹರಿಸಲಾಗಿದೆ ಎಂದು ಅಪರಿಚಿತ ಸಂಖ್ಯೆಯಿಂದ ಮಾಹಿತಿ ಬಂದಿದ್ದು, ಬೇಡಿಕೆಯಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆತನನ್ನು ಬಿಡುಗಡೆ ಮಾಡಲು 5 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಷ್ಟೇ ಅಲ್ಲದೆ ಒಂದೊಮ್ಮೆ ಹಣ ಕೊಡದಿದ್ದರೆ ಸಾವು ಖಚಿತ ಎಂದು ಬರೆಯಲು Death ಬದಲು Deth ಎಂದು ತಪ್ಪಾಗಿ ಬರೆದಿದ್ದ. 13 ಸೆಕೆಂಡುಗಳ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದು ಅದರಲ್ಲಿ ಸಂದೀಪ್‌ನನ್ನು ಯಾರೋ ಕಟ್ಟಿಹಾಕಿರುವುದನ್ನು ಕಾಣಬಹುದು.
ಆದರೆ ಸಂದೀಪ್ಗೆ ಯಾರೊಂದಿಗೂ ದ್ವೇಷ ಇರಲಿಲ್ಲ. ಸುಲಿಗೆ ಮೊತ್ತ ಕೂಡ ದೊಡ್ಡದಲ್ಲ ಹೀಗಾಗಿ ಅನುಮಾನ ಮೂಡಿತ್ತು. ಹಾಗೆಯೇ ಸ್ಪೆಲ್ಲಿಂಗ್ ಮಿಸ್ಟೇಕ್ನ್ನು ಕೂಡ ಪೊಲೀಸರು ಕಂಡು ಹಿಡಿದಿದ್ದರು, ಜತೆಗೆ ಅಪಹರಣಕಾರ ವಿದ್ಯಾವಂತನಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.
ಮತ್ತಷ್ಟು ಓದಿ: ಅಂಗಡಿಯಿಂದ ಸಿಗರೇಟ್ ತರಲು ನಿರಾಕರಿಸಿದ್ದಕ್ಕೆ ಬಾಲಕನ ಹಣೆಗೆ ಗುಂಡು ಹಾರಿಸಿದ ವ್ಯಕ್ತಿ
ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ನಡೆಸಿದ ಹುಡುಕಾಟದಲ್ಲಿ ರೂಪಾಪುರದಲ್ಲಿ ಸಂದೀಪ್ ಪತ್ತೆಯಾಗಿದ್ದಾನೆ, ಅವನ ಬಳಿ ಡೆತ್ ಎಂದು ಬರೆಸಲಾಯಿತು ಆಗಲೂ ಆತ ತಪ್ಪಾಗಿಯೇ ಬರೆದಿದ್ದ.
ನಂತರ ತನ್ನ ಅಪಹರಣದ ಸುಳ್ಳು ಕಥೆಯನ್ನು ಹೆಣೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಟಿವಿಯಲ್ಲಿ ಸಿಐಡಿ ಧಾರಾವಾಹಿಯನ್ನು ನೋಡಿದ ನಂತರ ತನ್ನ ಸಹೋದರನಿಂದ ಹಣ ವಸೂಲಿ ಮಾಡುವ ಆಲೋಚನೆ ನನಗೆ ಬಂದಿತು ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಸಂದೀಪ್ ಅವರು ಪಾಲಿ ಪ್ರದೇಶದ ಮಿರ್ಜಾಪುರ ಕಬ್ಬು ಖರೀದಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಅವರ ಬೈಕ್ ಡಿ.30 ರಂದು ಸಹಾಬಾದ್‌ನಲ್ಲಿ ವಯೋವೃದ್ಧರಿಗೆ ಡಿಕ್ಕಿ ಹೊಡೆದು ಅವರ ಕಾಲಿಗೆ ಮೂಳೆ ಮುರಿತವಾಗಿತ್ತು. ಬೇರೆ ಕಡೆಯವರು ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಅವರಿಗೆ ಹಣದ ಅವಶ್ಯಕತೆ ಇತ್ತು, ಆರೋಪಿಯನ್ನು ಬಂಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ