AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲು ಉದುರಿಸಿ ತಲೆ ಬೋಳು ಮಾಡುವ ಹೊಸ ವೈರಸ್​? ಮಹಾರಾಷ್ಟ್ರ ಜನರು ಹೈರಾಣ

ಒಂದೆಡೆ ಎಚ್​ಎಂಪಿವಿ ವೈರಸ್ ಹರಡುತ್ತಿದ್ದರೆ ಇನ್ನೊಂದೆಡೆ ತಲೆ ಕೂದಲು ಉದುರಿಸುವ ವೈರಸ್​ನಿಂದ ಜನರು ಭಯ ಪಡುವಂತಾಗಿದೆ. ಮಹಾರಾಷ್ಟ್ರದ ಹಲವು ಹಳ್ಳಿಗಳಲ್ಲಿ ಜನರು ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ, ಕೇವಲ 72 ಗಂಟೆಗಳಲ್ಲಿ ಕೂದಲು ಸಂಪೂರ್ಣವಾಗಿ ಉದುರಿ ತಲೆ ಬೋಳಾಗುತ್ತಿದೆ. ಕೇವಲ ಪುರುಷರಿಗೆ ಮಾತ್ರವಲ್ಲ ಮಹಿಳೆಯರೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಕೂದಲು ಉದುರಿಸಿ ತಲೆ ಬೋಳು ಮಾಡುವ ಹೊಸ ವೈರಸ್​? ಮಹಾರಾಷ್ಟ್ರ ಜನರು ಹೈರಾಣ
ಕೂದಲು ಉದುರುವಿಕೆ
ನಯನಾ ರಾಜೀವ್
|

Updated on: Jan 08, 2025 | 1:06 PM

Share

ಎಚ್​ಎಂಪಿವಿ ವೈರಸ್ ಪ್ರಸ್ತುತ ಚೀನಾದಲ್ಲಿ ವ್ಯಾಪಕವಾಗಿ ಹರಡಿದೆ. ಮತ್ತು ಅದರ ಕೆಲವು ಪ್ರಕರಣಗಳು ಭಾರತದಲ್ಲಿಯೂ ಕಂಡುಬಂದಿವೆ. ಆದ್ದರಿಂದ ಭಾರತ ಸರ್ಕಾರ ಹಾಗೂ ಮಹಾರಾಷ್ಟ್ರದ ಆಡಳಿತವು ಹೈ ಅಲರ್ಟ್​ ಘೋಷಿಸಿದೆ. ಇದೇ ಸಮಯದಲ್ಲಿ ಮಹಾರಾಷ್ಟ್ರದ ಹಲವು ಹಳ್ಳಿಗಳಿಗೆ ವೈರಸ್​ವೊಂದು ಹರಡಿದ್ದು, ಜನರ ಕೂದಲು ಉದುರಿಸಿ ಬೋಳು ಮಾಡುತ್ತಿದೆ. ಆದರೆ ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿದೆ.

ಈ ಅಪರಿಚಿತ ವೈರಸ್​ನಿಂದ ಮೂರೇ ಮೂರು ದಿನದಲ್ಲಿ ಕೂದಲು ಸಂಪೂರ್ಣವಾಗಿ ಉದುರಿ ತಲೆ ಬೋಳಾಗುತ್ತಿದೆ. ಬೋಂಡಗಾಂವ, ಕಳವಾಡ, ಹಿಂಗಾಣ ಗ್ರಾಮಗಳಲ್ಲಿ ಅಪರಿಚಿತ ವೈರಸ್ ಹರಡಿದ್ದು, ಕುಟುಂಬಗಳು ಈ ವೈರಸ್ ಗೆ ಬಲಿಯಾಗುತ್ತಿದ್ದು, ಇದರಿಂದ ನಾಗರಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಕೂದಲು ಉದುರುವಿಕೆ ಮತ್ತು ಬೋಳು ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕ ನಾಗರಿಕರು ಖಾಸಗಿ ಆಸ್ಪತ್ರೆಗಳಿಗೆ ಧಾವಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಗ್ರಾಮದ ನಿವಾಸಿಗಳು ಬೋಳು ಸಮಸ್ಯೆ ಎದುರಿಸುತ್ತಿದ್ದು, ಮಹಿಳೆಯರೂ ಇದರಿಂದ ಪಾರಾಗಿಲ್ಲ. ಆದರೆ ಇದು ಏಕೆ ನಡೆಯುತ್ತಿದೆ ಎಂಬುದಕ್ಕೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ.

ಮತ್ತಷ್ಟು ಓದಿ: Hairfall Control: ಕೂದಲು ಉದುರುವಿಕೆ ತಡೆಯಲು 8 ಮಾರ್ಗಗಳು ಇಲ್ಲಿವೆ

ಶಾಂಪೂ ಬಳಕೆಯಿಂದ ಈ ರೀತಿಯ ಕೂದಲು ಉದುರುವಿಕೆ ಮತ್ತು ಬೋಳು ಬರಬಹುದು ಎಂಬುದು ವೈದ್ಯರ ಅಭಿಪ್ರಾಯ. ಆದರೆ ಜೀವನದಲ್ಲಿ ಶಾಂಪೂ ಬಳಸದ, ಅದನ್ನು ಮುಟ್ಟದ ಜನರು ತಮ್ಮ ಕೂದಲನ್ನು ಕಳೆದುಕೊಳ್ಳುತ್ತಿದ್ದಾರೆ. ಸಂಭವನೀಯ ಮಾಲಿನ್ಯವನ್ನು ಪರೀಕ್ಷಿಸಲು ಈ ಗ್ರಾಮಗಳ ನೀರಿನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಪರಿಷತ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಟಿವಿ9 ಮರಾಠಿ ವರದಿ ಮಾಡಿದೆ.

ರೋಗಲಕ್ಷಣಗಳಿಗೆ ಅನುಗುಣವಾಗಿ ಇಲಾಖೆಯು ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ಪ್ರಾರಂಭಿಸಿದೆ ಮತ್ತು ಚರ್ಮದ ಆರೈಕೆ ತಜ್ಞರ ಸಲಹೆಯನ್ನು ಸಹ ತೆಗೆದುಕೊಳ್ಳಲಾಗುತ್ತಿದೆ ಎಂದು ಬಹೇಕರ್ ಮಂಗಳವಾರ ಹೇಳಿದರು. ಆರಂಭದಲ್ಲಿ ನೆತ್ತಿಯಲ್ಲಿ ತುರಿಕೆ ಉಂಟಾಗುತ್ತದೆ. ನಂತರ ಕೂದಲ ಬಣ್ಣ ಸ್ವಲ್ಪ ಬದಲಾಗುತ್ತದೆ, ಅದಾಗಿ ಕೇವಲ 72 ಗಂಟೆಗಳಲ್ಲಿ ಕೂದಲು ಉದುರಲು ಶುರುವಾಗುತ್ತದೆ ಎಂದು ಜನರು ಹೇಳಿದ್ದಾರೆ.

ಈ ವಿಚಿತ್ರ ರೀತಿಯ ಕೂದಲು ಉದುರುವಿಕೆ ಪುರುಷರಲ್ಲಿ ಮಾತ್ರವಲ್ಲದೆ ಮಹಿಳೆಯರಲ್ಲಿಯೂ ಕಂಡುಬರುತ್ತದೆ. ನೂರಾರು ಮಹಿಳೆಯರು, ಪುರುಷರು ತಮ್ಮ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಕಲುಷಿತ ಅಥವಾ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಲವಣಗಳು ಕೂದಲು ಉದುರುವಿಕೆಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ಪರೀಕ್ಷಾ ವರದಿಯ ನಂತರವೇ ಇತರ ವಿಷಯಗಳ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗಲಿದೆ. ಪೀಡಿತ ಗ್ರಾಮಗಳಲ್ಲಿ ವೈದ್ಯಕೀಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ