Hairfall Control: ಕೂದಲು ಉದುರುವಿಕೆ ತಡೆಯಲು 8 ಮಾರ್ಗಗಳು ಇಲ್ಲಿವೆ
Hair Care: ಕೂದಲು ನಮ್ಮ ದೇಹದ ಪ್ರಮುಖವಾದ ಅಂಗ. ಕೂದಲು ಸುಂದರವಾಗಿದ್ದರೆ ನಮ್ಮ ಮುಖದ ಸೌಂದರ್ಯವೂ ಹೆಚ್ಚಾಗುತ್ತದೆ. ಆದರೆ, ಕೂದಲಿನ ಆರೋಗ್ಯದ ಮೇಲೆ ಪರಿಸರ ಮಾಲಿನ್ಯ, ನೀರು, ಬಳಸುವ ಉತ್ಪನ್ನಗಳು ಪರಿಣಾಮ ಬೀರುತ್ತವೆ. ಕೂದಲು ವಿಪರೀತವಾಗಿ ಉದುರುತ್ತಿದ್ದರೆ ಅದನ್ನು ತಡೆಯಲು ಯಾವ ಮಾರ್ಗಗಳನ್ನು ತಡೆಯಬೇಕೆಂಬುದರ ಮಾಹಿತಿ ಇಲ್ಲಿದೆ.
ನಮ್ಮ ಕೂದಲು ಉದುರುವುದಕ್ಕೆ (Hair Loss) ತಲೆಸ್ನಾನಕ್ಕೆ ಬಳಸುವ ನೀರು, ಮಾಲಿನ್ಯ (Pollution), ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಹೀಗೆ ನಾನಾ ಕಾರಣಗಳಿರುತ್ತವೆ. ಉತ್ತಮ ಶಾಂಪೂ ಬಳಸುವ ಮೂಲಕ, ಎಣ್ಣೆ ಮಸಾಜ್ನ ಮೂಲಕ ಕೂಡ ಕೂದಲು ಉದುರದಂತೆ (Hair Fall) ತಡೆಯಬಹುದು. ಕೂದಲು ಉದುರುವಿಕೆ ತಡೆಯಲು ಸಹಾಯ ಮಾಡುವ ನೈಸರ್ಗಿಕ ಮಾರ್ಗಗಳು ಇಲ್ಲಿವೆ.
ಬಿಸಿನೀರನ್ನು ಬಳಸಬೇಡಿ:
ನಿಮ್ಮ ಕೂದಲನ್ನು ಬಿಸಿ ನೀರಿನಿಂದ ತೊಳೆದಾಗ ಅದು ನಿಮ್ಮ ನೆತ್ತಿಯನ್ನು ಹಾನಿಗೊಳಿಸುತ್ತದೆ. ಕೂದಲ ಶುಷ್ಕತೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ:
ನಿಮ್ಮ ನೆತ್ತಿಯನ್ನು ಆಗಾಗ ಮಸಾಜ್ ಮಾಡಿ. ಏಕೆಂದರೆ ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಹೆಚ್ಚಿದ ರಕ್ತ ಪರಿಚಲನೆ ಅಗತ್ಯವಿರುತ್ತದೆ.
ಇದನ್ನೂ ಓದಿ: Hair Care: ಕೂದಲು ದಟ್ಟವಾಗಿ ಬೆಳೆಯಬೇಕಾ?; ಶುಂಠಿ ರಸವನ್ನು ಈ ರೀತಿ ಬಳಸಿ
ಅತಿಯಾಗಿ ತಲೆ ತೊಳೆಯಬೇಡಿ:
ನೀವು ಅತಿಯಾಗಿ ತಲೆಯನ್ನು ತೊಳೆಯುತ್ತಿದ್ದರೆ ನಿಮ್ಮ ಕೂದಲಿಗೆ ಪೋಷಣೆ ನೀಡುವ ನೈಸರ್ಗಿಕ ತೈಲಗಳು ಕಳೆದುಹೋಗುತ್ತದೆ. ತಲೆಗೂದಲು ತೊಳೆಯುವ ನಡುವಿನ ಸಮಯವನ್ನು ನೀವು ಎಷ್ಟು ಸಾಧ್ಯವೋ ಅಷ್ಟು ವಿಸ್ತರಿಸಲು ಪ್ರಯತ್ನಿಸಿ. ವಾರಕ್ಕೆ 2 ಬಾರಿ ತಲೆ ತೊಳೆದರೂ ಸಾಕು.
ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿ:
ಚಳಿಗಾಲದಲ್ಲಿ ನಿಮ್ಮ ಕೂದಲಿಗೆ ಎಣ್ಣೆ ಮಸಾಜ್‌ಗಿಂತ ಉತ್ತಮವಾದದ್ದು ಯಾವುದೂ ಇಲ್ಲ. ಎಣ್ಣೆ ಮಸಾಜ್‌ಗಳು ತುಂಬಾ ಹಿತವಾದದ್ದಲ್ಲದೇ ಚಳಿಗಾಲದಲ್ಲಿ ಕೂದಲು ಉದುರುವುದನ್ನು ನಿಲ್ಲಿಸಲು ಉತ್ತಮ ಮಾರ್ಗವಾಗಿದೆ.
ಹೈಡ್ರೇಟೆಡ್ ಆಗಿರಿ:
ನೀರಿನ ಸೇವನೆಯು ಕೂದಲಿನ ಎಳೆಗಳ ಶುಷ್ಕತೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಒಡೆಯುವಿಕೆಯನ್ನು ತಡೆಯುವ ಮೂಲಕ ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಆರೋಗ್ಯಕರ ಆಹಾರ:
ಸಮತೋಲಿತ ಆಹಾರವನ್ನು ಸೇವಿಸುವುದರ ಮೂಲಕ ಮತ್ತು ಕೆಲವು ಆಹಾರಗಳನ್ನು ನೀವು ಸಾಕಷ್ಟು ಸೇವಿಸುವ ಮೂಲಕ ಆರೋಗ್ಯಕರ ಕೂದಲನ್ನು ಪಡೆಯಬಹುದು.
ಇದನ್ನೂ ಓದಿ: Hair Oil: ಸುಂದರವಾದ, ಉದ್ದ ಕೂದಲು ಬೇಕೆಂದರೆ ಯಾವ ಎಣ್ಣೆ ಬಳಸಬೇಕು?
ಹೀಟ್ ಸ್ಟೈಲಿಂಗ್ ಅನ್ನು ತಪ್ಪಿಸಿ:
ನಿಮ್ಮ ಕೂದಲನ್ನು ಗಾಳಿಯಲ್ಲಿ ಒಣಗಿಸಲು ಆದ್ಯತೆ ನೀಡಿ. ಇದು ಕೂದಲ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಬ್ಲೋ ಡ್ರೈಯಿಂಗ್ ನಿಮ್ಮ ಕೂದಲನ್ನು ನಿರ್ಜಲೀಕರಣಗೊಳಿಸುತ್ತದೆ.
ನಿಮ್ಮ ಕೂದಲನ್ನು ರಕ್ಷಿಸಿ:
ನೀವು ಹೊರಗೆ ಹೋಗುವಾಗ, ಗಾಳಿ ಮತ್ತು ಹವಾಮಾನದಿಂದ ನಿಮ್ಮ ಕೂದಲನ್ನು ರಕ್ಷಿಸಲು ಸ್ಕಾರ್ಫ್ ಅಥವಾ ಕ್ಯಾಪ್ ಅನ್ನು ಧರಿಸಲು ಪ್ರಯತ್ನಿಸಿ. ಶೀತ, ಗಾಳಿಯ ದಿನಗಳು ನಿಮ್ಮ ಕೂದಲಿಗೆ ಹಾನಿಯನ್ನು ಉಂಟುಮಾಡಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ