Hair Oil: ಸುಂದರವಾದ, ಉದ್ದ ಕೂದಲು ಬೇಕೆಂದರೆ ಯಾವ ಎಣ್ಣೆ ಬಳಸಬೇಕು?
ದಪ್ಪವಾದ ಕೂದಲೆಂದರೆ ಯಾರಿಗೆ ತಾನೇ ಇಷ್ಟವಿಲ್ಲ. ಕೂದಲ ಬೆಳವಣಿಗೆಗೆ ಸಹಾಯ ಮಾಡುವ ಅನೇಕ ಶಾಂಪೂ, ಹೇರ್ ಆಯಿಲ್ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ, ಅವುಗಳಲ್ಲಿ ರಾಸಾಯನಿಕಗಳು ಕೂಡ ಇರುವುದರಿಂದ ಮನೆಯಲ್ಲೇ ತಯಾರಿಸುವ ಎಣ್ಣೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ದಪ್ಪವಾದ, ಉದ್ದವಾದ ಕೂದಲು ಬೇಕೆಂದರೆ ಯಾವ ರೀತಿ ಮನೆಯಲ್ಲೇ ಎಣ್ಣೆ ತಯಾರಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.
ಸಂಶೋಧನೆಯ ಪ್ರಕಾರ, ನಮ್ಮ ಕೂದಲು ನೈಸರ್ಗಿಕವಾಗಿ ದಿನಕ್ಕೆ 0.35 ಮಿಲಿಮೀಟರ್ ಬೆಳೆಯುತ್ತದೆ. ಇದು ವರ್ಷಕ್ಕೆ ಒಟ್ಟು 6 ಇಂಚುಗಳಷ್ಟು ಬೆಳೆಯುತ್ತದೆ. ಬಹುತೇಕ ಜನರು ಆಗಾಗ ಕೂದಲು ಕಟ್ ಮಾಡಿಸುತ್ತಾರೆ ಅಥವಾ ಟ್ರಿಮ್ ಮಾಡಿಸುತ್ತಾರೆ. ಆದರೂ ಸಹ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತದೆ. ಕೂದಲು ತೆಳುವಾಗಿದೆ ಎಂದೋ, ಕವಲೊಡೆದಿದೆ ಎಂದೋ ಕೂದಲು ಕಟ್ ಮಾಡಿಸಿದರೂ ಕೂಡ ಉದ್ದನೆಯ ಕೂದಲು ಎಲ್ಲರಿಗೂ ಇಷ್ಟ. ಆ ರೀತಿಯ ಉದ್ದನೆಯ ಕೂದಲು ಬೇಕೆಂದರೆ ಅದಕ್ಕೆ ಸರಿಯಾಗಿ ಆರೈಕೆಯನ್ನೂ ಮಾಡಬೇಕು.
ಕೆಲವು ಮೂಲಭೂತ ಆರೈಕೆ ಮತ್ತು ಉತ್ತಮವಾದ ಕೂದಲಿನ ಎಣ್ಣೆಯು ನಿಮಗೆ ಉದ್ದನೆಯ ಕೂದಲನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗಾದರೆ, ಮನೆಯಲ್ಲೇ ನಿಮ್ಮ ಕೂದಲ ಬೆಳವಣಿಗೆಗೆ ಉಪಯುಕ್ತವಾದ ನೈಸರ್ಗಿಕ ಎಣ್ಣೆಯನ್ನು ತಯಾರಿಸುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: Hair Care: ಕೂದಲು ದಟ್ಟವಾಗಿ ಬೆಳೆಯಬೇಕಾ?; ಶುಂಠಿ ರಸವನ್ನು ಈ ರೀತಿ ಬಳಸಿ
ಕೂದಲಿನ ಎಣ್ಣೆಗೆ ಬೇಕಾಗುವ ಪದಾರ್ಥಗಳು:
ಕೂದಲಿಗೆ ಹಚ್ಚುವ ಎಣ್ಣೆಯನ್ನು ತಯಾರಿಸಲು ಬೇಕಾಗುವ ಕೆಲವು ಪದಾರ್ಥಗಳು ಇಲ್ಲಿವೆ. ಮೊದಲನೆಯದಾಗಿ, 200 ಮಿ.ಲೀ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಬಳಿಕ, 100 ಮಿ.ಲೀ ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಿ. ಅದರ ಜೊತೆಗೆ 50 ಮಿ.ಲೀ ಬಾದಾಮಿ ಎಣ್ಣೆ ಹಾಗೂ 30 ಮಿ.ಲೀ ಹರಳೆಣ್ಣೆ ತೆಗೆದುಕೊಳ್ಳಿ. ಇವುಗಳನ್ನೆಲ್ಲ ಒಂದು ಬಟ್ಟಲಿಗೆ ಹಾಕಿಟ್ಟುಕೊಳ್ಳಿ.
ನಂತರ, 5 ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ. ಅದರ ಜೊತೆಗೆ ತಾಜಾ ನೆಲ್ಲಿಕಾಯಿಯನ್ನು ಹೆಚ್ಚಿ, ಅದನ್ನು ರುಬ್ಬಿ ರಸ ತೆಗೆದಿಟ್ಟುಕೊಳ್ಳಿ. ಅದರಲ್ಲಿ 30 ಮಿ.ಲೀ ನೆಲ್ಲಿಕಾಯಿ ರಸವನ್ನು ಬಟ್ಟಲಿಗೆ ಹಾಕಿಟ್ಟುಕೊಳ್ಳಿ. ಬಳಿಕ 20 ಬೇವಿನ ಎಲೆಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಮುಖದಲ್ಲಿರುವ ಅನಗತ್ಯ ಕೂದಲು ತೆಗೆಯಲು ಇಲ್ಲಿವೆ ಮನೆಮದ್ದು
ಎಣ್ಣೆಯನ್ನು ಮಾಡುವ ವಿಧಾನ:
ನೀವು ಬಟ್ಟಲಿಗೆ ಹಾಕಿಟ್ಟುಕೊಂಡ ಎಲ್ಲಾ ಎಣ್ಣೆಯನ್ನು ಮಿಶ್ರಣ ಮಾಡಿ. 10 ನಿಮಿಷಗಳ ಕಾಲ ಬಾಣಲೆಯಲ್ಲಿ ಅದನ್ನು ಬಿಸಿ ಮಾಡಿ. ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ. ಇದನ್ನು ದಿನವೂ ನಿಮ್ಮ ನೆತ್ತಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಉದ್ದ ಕೂದಲು ಪಡೆಯಲು ಸಹಾಯವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ