Skin Care: ದೀರ್ಘಕಾಲದವರೆಗೆ ಯೌವನದಿಂದ ಕಾಣುವುದು ಹೇಗೆ?

ನಮ್ಮ ಜೀವನಶೈಲಿ, ಕೆಲಸದ ಒತ್ತಡ, ಆಹಾರ ಪದ್ಧತಿ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಿವೆ. ಇದರಿಂದಾಗಿ 30 ವರ್ಷವಾಗುವಷ್ಟರಲ್ಲಿಯೇ ಚರ್ಮದ ಮೇಲೆ ಸುಕ್ಕುಗಳು ಮೂಡಲಾರಂಭಿಸುತ್ತದೆ. ಹಾಗಾದರೆ, ಚರ್ಮದ ಆರೋಗ್ಯ ಹೆಚ್ಚಿಸಿಕೊಂಡು, ದೀರ್ಘಕಾಲದವರೆಗೂ ಯೌವನದಿಂದಿರುವುದು ಹೇಗೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Skin Care: ದೀರ್ಘಕಾಲದವರೆಗೆ ಯೌವನದಿಂದ ಕಾಣುವುದು ಹೇಗೆ?
ಚರ್ಮದ ಕಾಳಜಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 17, 2024 | 4:30 PM

ನಮ್ಮ ಕೆಲಸದ ಒತ್ತಡ, ಆಹಾರ ಪದ್ಧತಿ ಬದಲಾದಂತೆ ಅದು ನಮ್ಮ ಚರ್ಮದ ಮೇಲೆ ಪ್ರತಿಬಿಂತವಾಗುತ್ತದೆ. ಮಧ್ಯ ವಯಸ್ಸಿಗೆ ಬರುತ್ತಿದ್ದಂತೆ ಚರ್ಮದ (Skin Care) ಮೇಲೆ ಸುಕ್ಕುಗಳು ಮೂಡಲಾರಂಭಿಸುತ್ತವೆ. ನಾವು ರೂಢಿಸಿಕೊಳ್ಳುವ ಕೆಲವು ದೈನಂದಿನ ಅಭ್ಯಾಸಗಳಿಂದ, ಒತ್ತಡಮುಕ್ತ ಜೀವನಶೈಲಿಯಿಂದ ದೀರ್ಘಕಾಲದವರೆಗೂ ಯೌವನದಿಂದ ಇರಲು ಸಾಧ್ಯವಿದೆ. ನಮ್ಮ ದೈನಂದಿನ ಅಭ್ಯಾಸಗಳು ನಾವು ಕಾಣುವ ರೀತಿಯಲ್ಲಿ ಬಹಳಷ್ಟು ವ್ಯತ್ಯಾಸವನ್ನು ಮಾಡಬಹುದು. ನಮ್ಮ ನಿಜವಾದ ವಯಸ್ಸಿಗಿಂತ ಕಿರಿಯರಾಗಿ ಕಾಣುವಂತೆ ಮಾಡುವ ಕೆಲವು ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಕೈಗಳ ಆರೈಕೆ ಮಾಡಿ:

ನಾವು ಸಾಮಾನ್ಯವಾಗಿ ನಮ್ಮ ಕೈಗಳ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ. ಆದರೆ ಕೆಲವೊಮ್ಮೆ ಜನರು ನಿಮ್ಮ ಕೈಗಳನ್ನು ಮೊದಲು ನೋಡುತ್ತಾರೆ. ಆದ್ದರಿಂದ ನಿಮ್ಮ ಕೈಗಳನ್ನು ಯಾವಾಗಲೂ ಚೆನ್ನಾಗಿಟ್ಟುಕೊಳ್ಳಿ.

ಇದನ್ನೂ ಓದಿ: ಕಾಫಿ ವರ್ಸಸ್ ಟೀ; ನಿಮ್ಮ ಚರ್ಮಕ್ಕೆ ಯಾವುದರ ಸೇವನೆ ಒಳ್ಳೆಯದು?

ನಿಮ್ಮ ಹುಬ್ಬುಗಳನ್ನು ಶೇಪ್​ನಲ್ಲಿಟ್ಟುಕೊಳ್ಳಿ:

ನಿಮ್ಮ ಹುಬ್ಬುಗಳಿಗೆ ಶೇಪ್ ನೀಡಿ. ಆಗಾಗ ಐಬ್ರೋ ಮಾಡಿಸಿಕೊಳ್ಳುತ್ತಿರಿ.

ಬ್ಯೂಟಿ ಉತ್ಪನ್ನಗಳನ್ನು ಅಚ್ಚುಕಟ್ಟಾಗಿ ಖರೀದಿಸಿ:

ನಿಮ್ಮ ಸ್ನೇಹಿತರು ಖರೀದಿಸುವ ಉತ್ಪನ್ನಗಳನ್ನು ನೀವು ಖರೀದಿಸಬಾರದು. ಅವರು ಖರೀದಿಸಿದ್ದಾರೆಂದು ನೀವೂ ಬಳಸುವ ಬದಲು ನಿಮ್ಮ ಚರ್ಮಕ್ಕೆ ಅಗತ್ಯವಿರುವ ಸೌಂದರ್ಯವರ್ಧಕಗಳನ್ನು ಖರೀದಿಸಿ.

ಲೈಟ್ ಫೌಂಡೇಷನ್ ಬಳಸಿ:

ಮುಖ ಯೌವನದಿಂದ ಕಾಣಲು ನಿಮ್ಮ ತ್ವಚೆಗೆ ಲೈಟ್ ಬಣ್ಣದ ಫೌಂಡೇಷನ್ ಕ್ರೀಂ ಹಚ್ಚಿ.

ಬ್ಲಶ್ ಬಳಸಿ:

ನಿಮ್ಮ ಮೈಬಣ್ಣವನ್ನು ಹೆಚ್ಚಿಸಲು ಮತ್ತು ನಿಮ್ಮ ಮುಖವನ್ನು ಯಂಗ್ ಆಗಿ ಕಾಣುವಂತೆ ಮಾಡಲು ಕ್ರೀಮ್ ಬ್ಲಶ್ ಅನ್ನು ಬಳಸಿ.

ರೋಸ್ ವಾಟರ್ ಬಳಸಿ:

ರೋಸ್ ವಾಟರ್ ನಿಮ್ಮ ಮುಖವನ್ನು ತಾಜಾವಾಗಿ ಕಾಣುವಂತೆ ಮಾಡುತ್ತದೆ. ಪ್ರತಿದಿನ ರೋಸ್ ವಾಟರ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ.

ಇದನ್ನೂ ಓದಿ: Skin Care Tips: ನಿಮ್ಮ ತ್ವಚೆಯ ಸೌಂದರ್ಯಕ್ಕೂ ಆಲೂಗಡ್ಡೆಗೂ ಏನು ಸಂಬಂಧ?

ನಿಮ್ಮ ಕಣ್ಣುಗಳನ್ನು ಸುಕ್ಕುಗಟ್ಟದಂತೆ ನೋಡಿಕೊಳ್ಳಿ:

ದೈನಂದಿನ ಒತ್ತಡವು ಕಣ್ಣುಗಳ ಸುತ್ತ ಡಾರ್ಕ್ ಸರ್ಕಲ್ ಮೂಡುವಂತೆ ಮಾಡುತ್ತದೆ. ಅದಕ್ಕೆ ಒದ್ದೆಯಾದ ಟೀ ಬ್ಯಾಗ್‌ಗಳನ್ನು ತೆಗೆದುಕೊಂಡು ಕಣ್ಣಿನ ಕೆಳಗೆ ಮಸಾಜ್ ಮಾಡಿಕೊಳ್ಳಿ.

ಮುಖದ ವ್ಯಾಯಾಮ ಮಾಡಿ:

ನಿಮ್ಮ ಮುಖದ ಸ್ನಾಯುಗಳನ್ನು ಉತ್ತಮವಾಗಿ ಇರಿಸಿಕೊಳ್ಳಲು ಆಗಾಗ ಮುಖಕ್ಕೆ ವ್ಯಾಯಾಮ ಮಾಡಿ.

ತುಟಿಗಳು ಒಣಗದಂತೆ ನೋಡಿಕೊಳ್ಳಿ:

ನೀವು ಮೇಕಪ್ ಮಾಡದೇ ಇದ್ದರೂ ನಿಮ್ಮ ತುಟಿಗಳು ಯಾವಾಗಲೂ ತೇವವಾಗಿರುವಂತೆ ನೋಡಿಕೊಳ್ಳಿ. ತುಟಿಗೆ ಲಿಪ್ ಬಾಮ್ ಹಚ್ಚಿಕೊಳ್ಳಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ