Ayurvedic Facepack: ಆಯುರ್ವೇದಿಕ್ ಫೇಸ್​ಪ್ಯಾಕ್​ನಿಂದ ಚರ್ಮದ ಕಾಂತಿ ಹೆಚ್ಚಿಸಿ

ಮಾರುಕಟ್ಟೆಯಲ್ಲಿ ಸುಲಭವಾಗಿ ಅನೇಕ ರೀತಿಯ ಚರ್ಮದ ಉತ್ಪನ್ನಗಳು ಸಿಗುತ್ತವೆ. ಅವುಗಳನ್ನು ಹಚ್ಚುವುದರಿಂದ ಕೆಲವರಿಗೆ ಅಲರ್ಜಿ ಕೂಡ ಉಂಟಾಗಬಹುದು. ಅವುಗಳಲ್ಲಿ ಬಹುತೇಕ ಪ್ರಾಡಕ್ಟ್​ಗಳಲ್ಲಿ ರಾಸಾಯನಿಕಗಳನ್ನು ಬಳಸಲಾಗಿರುತ್ತದೆ. ಹೀಗಾಗಿ, ಹೊಳೆಯುವ ತ್ವಚೆ ಬೇಕೆಂದರೆ ಆಯುರ್ವೇದಿಕೆ ಫೇಸ್​ಪ್ಯಾಕ್​ಗಳನ್ನು ಹಚ್ಚಿ ನೋಡಿ.

Ayurvedic Facepack: ಆಯುರ್ವೇದಿಕ್ ಫೇಸ್​ಪ್ಯಾಕ್​ನಿಂದ ಚರ್ಮದ ಕಾಂತಿ ಹೆಚ್ಚಿಸಿ
ಫೇಸ್​ಪ್ಯಾಕ್Image Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 09, 2024 | 7:26 PM

ಆಯುರ್ವೇದದಲ್ಲಿ ನಮ್ಮ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಿದೆ. ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಸೌಂದರ್ಯಕ್ಕೂ ಆಯುರ್ವೇದವನ್ನು (Ayurveda) ಅವಲಂಬಿಸಬಹುದು. ಚಳಿಗಾಲದಲ್ಲಿ (Winter) ಚರ್ಮ ಒಡೆದು, ಕಾಂತಿ ಕಳೆದುಕೊಳ್ಳುವುದು ಸಾಮಾನ್ಯ. ಹೀಗಾಗಿ, ನಿಮ್ಮ ತ್ವಚೆಗೆ ಮರುಜೀವ ನೀಡಲು ಮತ್ತು ಚರ್ಮವನ್ನು ಕಾಂತಿಯುಕ್ತಗೊಳಿಸಲು ಸಹಾಯ ಮಾಡುವ ಕೆಲವು ಆಯುರ್ವೇದಿಕ್ ಫೇಸ್​ಪ್ಯಾಕ್​ಗಳ (Facepacks) ಬಗ್ಗೆ ಮಾಹಿತಿ ಇಲ್ಲಿದೆ. ಇವುಗಳಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದ ಕಾರಣ ಯಾವುದೇ ಭಯವಿಲ್ಲದೆ ಎಲ್ಲ ರೀತಿಯ ಚರ್ಮದವರೂ ಇದನ್ನು ಬಳಸಬಹುದು.

ಮೊಸರು ಮತ್ತು ಕಡಲೆಹಿಟ್ಟಿನ ಫೇಸ್​ಪ್ಯಾಕ್:

4 ಟೀ ಸ್ಪೂನ್ ಕಡಲೆಹಿಟ್ಟನ್ನು ತೆಗೆದುಕೊಂಡು ಅದನ್ನು 1 ಟೀ ಸ್ಪೂನ್ ಅರಿಶಿನ ಮತ್ತು ಮೊಸರಿನ ಜೊತೆ ಬೆರೆಸಿ ದಪ್ಪ ಪೇಸ್ಟ್ ಆಗಿ ಮಾಡಿಕೊಳ್ಳಿ. 15 ನಿಮಿಷಗಳ ಕಾಲ ಹಾಗೇ ಬಿಟ್ಟು ನಂತರ ಮುಖ ತೊಳೆಯಿರಿ.

ಇದನ್ನೂ ಓದಿ: Beauty Tips: ಫೇಸ್​ಪ್ಯಾಕ್ ಮಾಡಿಕೊಳ್ಳುವಾಗ ಈ ವಿಷಯಗಳನ್ನೆಂದೂ ಮರೆಯಬೇಡಿ

ಅಕ್ಕಿ ಹಿಟ್ಟು ಮತ್ತು ಗಂಧದ ಫೇಸ್​ಪ್ಯಾಕ್:

1 ಚಮಚ ಅಕ್ಕಿ ಹಿಟ್ಟು ಮತ್ತು ಶ್ರೀಗಂಧದ ಪುಡಿಯನ್ನು ತೆಗೆದುಕೊಂಡು, ಅದನ್ನು ಅಲೋವೆರಾ ಜೆಲ್​ನೊಂದಿಗೆ ಬೆರೆಸಿ ತೆಳುವಾದ ಪೇಸ್ಟ್ ಅನ್ನು ಮಾಡಿಕೊಳ್ಳಿ. 20 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಿರಿ.

ಬೇವು, ತುಳಸಿ ಫೇಸ್​ಪ್ಯಾಕ್:

ಒಂದಷ್ಟು ಬೇವಿನ ಎಲೆಗಳನ್ನು ತೆಗೆದುಕೊಂಡು ಪುಡಿ ಮಾಡಿ. ಅದಕ್ಕೆ ಒಂದು ಚಿಟಿಕೆ ಅರಿಶಿನ, 2 ತುಳಸಿ ಎಲೆಗಳು ಮತ್ತು ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಿ. 20 ನಿಮಿಷಗಳ ಕಾಲ ಬಿಟ್ಟು ಮುಖ ತೊಳೆಯಿರಿ.

ಬಾಳೆಹಣ್ಣು, ನಿಂಬೆ ರಸ ಮತ್ತು ಜೇನುತುಪ್ಪದ ಫೇಸ್​ಪ್ಯಾಕ್:

ಬಾಳೆಹಣ್ಣನ್ನು ಪೇಸ್ಟ್ ಮಾಡಿಕೊಳ್ಳಿ. ಅದಕ್ಕೆ ಜೇನುತುಪ್ಪ ಮತ್ತು ಅರ್ಧ ಟೀ ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಅದು ಒಣಗುವವರೆಗೆ ಮುಖಕ್ಕೆ ಹಚ್ಚಿಕೊಳ್ಳಿ.

ಅರಿಶಿನ, ಕಡಲೆಹಿಟ್ಟು ಮತ್ತು ಹಾಲಿನ ಫೇಸ್​ಪ್ಯಾಕ್:

1 ಚಮಚ ಕಡಲೆ ಹಿಟ್ಟನ್ನು 2 ಚಮಚ ಹಾಲು ಮತ್ತು ಒಂದು ಚಿಟಿಕೆ ಅರಿಶಿನ ಪುಡಿಯೊಂದಿಗೆ ಮಿಶ್ರಣ ಮಾಡಿ. 15 ನಿಮಿಷ ಬಿಟ್ಟು ಮುಖ ತೊಳೆಯಿರಿ.

ಇದನ್ನೂ ಓದಿ: Potato Face Pack: ಕೋಮಲ ತ್ವಚೆಗೆ ಆಲೂಗಡ್ಡೆಯ ಫೇಸ್​ಪ್ಯಾಕ್ ಹಚ್ಚಿ ನೋಡಿ!

ಮೊಸರು ಮತ್ತು ಅರಿಶಿನದ ಫೇಸ್​ಪ್ಯಾಕ್:

2 ಚಮಚ ಮೊಸರು ತೆಗೆದುಕೊಂಡು ಅರ್ಧ ಚಮಚ ಅರಿಶಿನ ಸೇರಿಸಿ. ಅದನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. ಅದು ಒಣಗುವವರೆಗೆ ಕಾದು ನಂತರ ಮುಖ ತೊಳೆಯಿರಿ.

ಟೊಮ್ಯಾಟೋ ಮತ್ತು ಮುಲ್ತಾನಿಮಿಟ್ಟಿ ಫೇಸ್​ಪ್ಯಾಕ್:

1 ಚಮಚ ಮುಲ್ತಾನಿ ಮಿಟ್ಟಿಯನ್ನು 2 ಚಮಚ ಟೊಮ್ಯಾಟೊ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ನಂತರ ತೊಳೆಯಿರಿ.

ಹೊಳೆಯುವ ಚರ್ಮಕ್ಕಾಗಿ ಮತ್ತು ನಿಮ್ಮ ಮುಖವನ್ನು ಸ್ವಚ್ಛವಾಗಿಡಲು ಈ ಫೇಸ್ ಮಾಸ್ಕ್‌ಗಳನ್ನು ಆಗಾಗ ನಿಯಮಿತವಾಗಿ ಹಚ್ಚಿಕೊಳ್ಳುತ್ತಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ