Beauty Tips: ಫೇಸ್ಪ್ಯಾಕ್ ಮಾಡಿಕೊಳ್ಳುವಾಗ ಈ ವಿಷಯಗಳನ್ನೆಂದೂ ಮರೆಯಬೇಡಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಫೇಸ್ ಪ್ಯಾಕ್ಗಳನ್ನು ಬಳಸುವಾಗ ನಿಮ್ಮ ಚರ್ಮಕ್ಕೆ ಸರಿಹೊಂದುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಲು ಮರೆಯಬೇಡಿ. ಮನೆಯಲ್ಲೇ ಲಭ್ಯವಿರುವ ಹಣ್ಣುಗಳು, ಅಡುಗೆ ಪದಾರ್ಥಗಳು, ಮೊಸರು, ಜೇನುತುಪ್ಪ, ತರಕಾರಿಗಳನ್ನು ಕೂಡ ಬಳಸಿಕೊಂಡು ನ್ಯಾಚುರಲ್ ಫೇಸ್ಪ್ಯಾಕ್ ತಯಾರಿಸಿಕೊಳ್ಳಬಹುದು.
Updated on: Nov 10, 2023 | 3:55 PM

ಫೇಸ್ಪ್ಯಾಕ್ ಮಾಡಿಕೊಳ್ಳುವ ಮೊದಲು ನಿಮ್ಮ ಸ್ಕಿನ್ ಯಾವ ರೀತಿಯದ್ದು ಎಂದು ತಿಳಿದುಕೊಳ್ಳಬೇಕಾದುದು ಅಗತ್ಯ.

ನಿಮ್ಮದು ಎಣ್ಣೆ ಚರ್ಮವಾ? ಒಣ ಚರ್ಮವಾ? ಅಥವಾ ನಾರ್ಮಲ್ ಚರ್ಮವಾ? ಎಂಬುದರ ಆಧಾರದ ಮೇಲೆ ಯಾವ ರೀತಿಯ ಫೇಸ್ಪ್ಯಾಕ್ ಮಾಡಿಕೊಳ್ಳಬೇಕೆಂದು ನಿರ್ಧರಿಸಿ.

ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಫೇಸ್ ಪ್ಯಾಕ್ಗಳನ್ನು ಬಳಸುವಾಗ ನಿಮ್ಮ ಚರ್ಮಕ್ಕೆ ಸರಿಹೊಂದುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಲು ಮರೆಯಬೇಡಿ.

ಮನೆಯಲ್ಲೇ ಲಭ್ಯವಿರುವ ಹಣ್ಣುಗಳು, ಅಡುಗೆ ಪದಾರ್ಥಗಳು, ಮೊಸರು, ಜೇನುತುಪ್ಪ, ತರಕಾರಿಗಳನ್ನು ಕೂಡ ಬಳಸಿಕೊಂಡು ನ್ಯಾಚುರಲ್ ಫೇಸ್ಪ್ಯಾಕ್ ತಯಾರಿಸಿಕೊಳ್ಳಬಹುದು. ಇದು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಫೇಸ್ ಮಾಸ್ಕ್ ಯಾವುದೇ ಇರಲಿ, ಅದನ್ನು ಯಾವ ರೀತಿ ಸರಿಯಾಗಿ ಹಚ್ಚಿಕೊಳ್ಳಬೇಕು ಎಂಬ ಬಗ್ಗೆಯೂ ನಿಮಗೆ ತಿಳಿದಿರಬೇಕು. ಆ ಬಗ್ಗೆ ಮಾಹಿತಿ ಇಲ್ಲಿದೆ.

ಫೇಸ್ಪ್ಯಾಕ್ ಹಾಕಿಕೊಳ್ಳುವ ಮೊದಲು ನಿಮ್ಮ ಮುಖವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸೌಮ್ಯವಾದ ಕ್ಲೆನ್ಸರ್ ಅನ್ನು ಬಳಸಿ.

ಮೃದುವಾದ ಬ್ರಷ್ ಬಳಸಿಕೊಂಡು ನಿಮ್ಮ ಮುಖ ಮತ್ತು ಕುತ್ತಿಗೆಯ ಸುತ್ತ ಫೇಸ್ಪ್ಯಾಕ್ನ ಮಿಶ್ರಣವನ್ನು ತೆಳುವಾಗಿ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕಣ್ಣುಗಳು ಮತ್ತು ತುಟಿಗಳಿಗೆ ಹಚ್ಚಿಕೊಳ್ಳಬೇಡಿ.

ನೀವು ಬಳಸುವುದು ಎಕ್ಸ್‌ಫೋಲಿಯೇಟಿಂಗ್ ಫೇಸ್ ಮಾಸ್ಕ್ ಆಗಿದ್ದರೆ, ಕೆಲವು ನಿಮಿಷಗಳ ಕಾಲ ವೃತ್ತಾಕಾರವಾಗಿ ನಿಮ್ಮ ಬೆರಳುಗಳಿಂದ ಚರ್ಮವನ್ನು ಮೃದುವಾಗಿ ಮಸಾಜ್ ಮಾಡಿ.

ನಿಮ್ಮ ಫೇಸ್ಪ್ಯಾಕ್ ಒಣಗುವವರೆಗೆ 15-20 ನಿಮಿಷಗಳ ಕಾಲ ಕಾಯಿರಿ. ಸಾಮಾನ್ಯವಾಗಿ, ಎಣ್ಣೆಯುಕ್ತ ತ್ವಚೆಯಲ್ಲಿ ಫೇಸ್ಪ್ಯಾಕ್ ಬಹಳ ಬೇಗ ಒಣಗುತ್ತದೆ. ಆದರೆ ವಯಸ್ಸಾದ ವಿರೋಧಿ ಮತ್ತು ಹೈಡ್ರೇಟಿಂಗ್ ಮಾಸ್ಕ್ಗಳನ್ನು ಹೆಚ್ಚು ಸಮಯ ಬಿಡಬೇಕಾಗುತ್ತದೆ.

ಫೇಸ್ಪ್ಯಾಕ್ ಅನ್ನು ತೊಳೆಯಲು ಉಗುರು ಬೆಚ್ಚಗಿನ ನೀರನ್ನು ಬಳಸಿ. ಸುಲಭವಾಗಿ ಸ್ವಚ್ಛಗೊಳಿಸಲು ನೀವು ಮೃದುವಾದ ಕಾಟನ್ ಬಟ್ಟೆಯನ್ನು ಸಹ ಬಳಸಬಹುದು. ಅಥವಾ ಅಂಗಡಿಗಳಲ್ಲಿ ಲಭ್ಯವಿರುವ ಫೇಸ್ಪ್ಯಾಕ್ ಬ್ರಶ್ನಿಂದಲೂ ಮಸಾಜ್ ಮಾಡುತ್ತಾ ಮುಖವನ್ನು ಕ್ಲೀನ್ ಮಾಡಿಕೊಳ್ಳಬಹುದು.

ಫೇಸ್ಪ್ಯಾಕ್ ತೊಳೆದುಕೊಂಡ ಅರ್ಧ ಘಂಟೆಯ ನಂತರ ಟೋನಿಂಗ್, ಸೀರಮ್ ಅನ್ನು ಹಚ್ಚಿಕೊಳ್ಳಬಹುದು. ಮಾಯಿಶ್ಚರೈಸಿಂಗ್ ಮತ್ತು ಸನ್‌ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಬಹುದು.
























