AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನಾನ ಮಾಡುವ ಮೊದಲು ಫೇಸ್​ಪ್ಯಾಕ್ ಮಾಡಿಕೊಳ್ಳಬೇಕಾ? ಸ್ನಾನದ ನಂತರವಾ?

ಬೆಚ್ಚಗಿನ ಸ್ನಾನ ನಿಮ್ಮ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಹಾಗೇ, ಫೇಸ್​ಮಾಸ್ಕ್​ಗಳಲ್ಲಿರುವ ಪದಾರ್ಥಗಳನ್ನು ಹೀರಿಕೊಳ್ಳಲು ನಿಮ್ಮ ಮುಖವನ್ನು ಸಿದ್ಧಗೊಳಿಸುತ್ತದೆ. ಸ್ನಾನದ ನಂತರ ಫೇಸ್​ಮಾಸ್ಕ್​ಗಳನ್ನು ಹಚ್ಚಿಕೊಳ್ಳುವುದರಿಂದ ಚರ್ಮದಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಸ್ನಾನ ಮಾಡುವ ಮೊದಲು ಫೇಸ್​ಪ್ಯಾಕ್ ಮಾಡಿಕೊಳ್ಳಬೇಕಾ? ಸ್ನಾನದ ನಂತರವಾ?
ಫೇಸ್ ಮಾಸ್ಕ್ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 09, 2023 | 4:32 PM

ಸ್ನಾನ ಮಾಡುವ ಮೊದಲು ಫೇಸ್​ಪ್ಯಾಕ್ ಬಳಸಬೇಕಾ? ಅಥವಾ ಸ್ನಾನದ ನಂತರ ಫೇಸ್ ಮಾಸ್ಕ್ ಬಳಸಬೇಕಾ? ಎಂಬ ಬಗ್ಗೆ ನೀವು ಗೊಂದಲದಲ್ಲಿದ್ದೀರಾ? ಮುಖ್ಯವಾಗಿ ಫೇಸ್​ಪ್ಯಾಕ್ ಮಾಡಿಕೊಳ್ಳುವ ಮೊದಲು ನಿಮ್ಮ ಸ್ಕಿನ್ ಯಾವ ರೀತಿಯದ್ದು ಎಂದು ತಿಳಿದುಕೊಳ್ಳಬೇಕಾದುದು ಅಗತ್ಯ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಫೇಸ್ ಪ್ಯಾಕ್​ಗಳನ್ನು ಬಳಸುವಾಗ ನಿಮ್ಮ ಚರ್ಮಕ್ಕೆ ಸರಿಹೊಂದುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಲು ಮರೆಯಬೇಡಿ. ಸ್ನಾನದ ಮೊದಲು ಅಥವಾ ನಂತರ ಯಾವ ರೀತಿಯ ಫೇಸ್​ಪ್ಯಾಕ್ ಬಳಸಬೇಕು ಎಂಬ ಮಾಹಿತಿ ಇಲ್ಲಿದೆ.

ಫೇಸ್ ಮಾಸ್ಕ್ ಅನ್ನು ಯಾವಾಗ ಬಳಸಬೇಕು?:

ಕೆಲವು ಫೇಸ್ ಮಾಸ್ಕ್​ಗಳನ್ನು ಸ್ನಾನದ ಮೊದಲು ಬಳಸಬೇಕು. ಮೊಡವೆ ವಿರೋಧಿ, ಕ್ಲೆನ್ಸಿಂಗ್ ಮತ್ತು ಎಫ್ಫೋಲಿಯೇಟಿಂಗ್ ಮಾಸ್ಕ್‌ಗಳಾದ ಜೇಡಿಮಣ್ಣು, ಇದ್ದಿಲು ಅಥವಾ ಮಣ್ಣಿನ ಮಾಸ್ಕ್​ಗಳನ್ನು ಸ್ನಾನ ಮಾಡುವ ಮೊದಲು ಹಚ್ಚಿಕೊಳ್ಳುವುದು ಉತ್ತಮ. ಎಫ್ಫೋಲಿಯೇಟ್ ಮಾಡಿದ ನಂತರ ಮತ್ತು ಮಾಸ್ಕ್ ಅನ್ನು ಕೆಲವು ನಿಮಿಷಗಳ ಕಾಲ ಬಿಟ್ಟ ನಂತರ ಫೇಸ್​ಪ್ಯಾಕ್ ತೆಗೆದುಹಾಕಲು ಉಗುರು ಬೆಚ್ಚಗಿನ ನೀರನ್ನು ಬಳಸಬಹುದು. ಇದು ಚರ್ಮದ ರಂಧ್ರಗಳಿಂದ ಕೊಳೆ, ಡೆಡ್ ಸ್ಕಿನ್ ಮತ್ತು ಇತರ ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಮೊಸರು ಬಳಸಿ ಹೇಗೆಲ್ಲ ಫೇಸ್​ಪ್ಯಾಕ್ ಮಾಡಿಕೊಳ್ಳಬಹುದು ಗೊತ್ತಾ?

ಸ್ನಾನ ಮಾಡಿದ ನಂತರ ಹಚ್ಚಿಕೊಳ್ಳಬೇಕಾದ ಫೇಸ್ ಮಾಸ್ಕ್ ಬಗ್ಗೆ ಮಾಹಿತಿ ಇಲ್ಲಿದೆ.

ಬೆಚ್ಚಗಿನ ಸ್ನಾನ ನಿಮ್ಮ ಚರ್ಮದ ರಂಧ್ರಗಳನ್ನು ತೆರೆಯುತ್ತದೆ. ಹಾಗೇ, ಫೇಸ್​ಮಾಸ್ಕ್​ಗಳಲ್ಲಿರುವ ಪದಾರ್ಥಗಳನ್ನು ಹೀರಿಕೊಳ್ಳಲು ನಿಮ್ಮ ಮುಖವನ್ನು ಸಿದ್ಧಗೊಳಿಸುತ್ತದೆ. ಸ್ನಾನದ ನಂತರ ಈ ಫೇಸ್​ಮಾಸ್ಕ್​ಗಳನ್ನು ಹಚ್ಚಿಕೊಳ್ಳುವುದರಿಂದ ಚರ್ಮದಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಫೇಸ್​ಪ್ಯಾಕ್ ತೆಗೆದ ನಂತರ ಅದು ಮೃದು ಭಾವನೆಯನ್ನು ನೀಡುತ್ತದೆ.

ಫೇಸ್ ಮಾಸ್ಕ್ ಬಳಸಲು ಉತ್ತಮ ಸಮಯ ಯಾವಾಗ?:

ಮುಖದ ಮಾಸ್ಕ್ ಅನ್ನು ಯಾವ ಸಮಯದಲ್ಲಿ ಬೇಕಾದರೂ ಹಚ್ಚಿಕೊಳ್ಳಬಹುದು. ನೀವು ಸ್ನಾನ ಮಾಡುವ ಮೊದಲು ಹೈಡ್ರೇಟಿಂಗ್ ಮತ್ತು ಆ್ಯಂಟಿಏಜಿಂಗ್ ಫೇಸ್ ಮಾಸ್ಕ್‌ಗಳನ್ನು ಬಳಸಿದಾಗ ಅದಾದ ನಂತರ ನೀವು ಸ್ನಾನ ಮಾಡಿದರೆ ಮಾಸ್ಕ್​ನಲ್ಲಿರುವ ಆ್ಯಕ್ಟಿವ್ ಏಜೆಂಟ್‌ಗಳು ತೊಳೆದುಹೋಗುವ ಸಾಧ್ಯತೆಯಿದೆ. ಇದರಿಂದ ಫೇಸ್​ಪ್ಯಾಕ್​ನಿಂದ ನಿಮ್ಮ ಮುಖಕ್ಕೆ ಆಗುವ ಪ್ರಯೋಜನ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಹೊಳೆಯುವ ಸುಂದರ ತ್ವಚೆಗಾಗಿ ಮನೆಯಲ್ಲೇ ಸುಲಭವಾಗಿ ಈ ಫೇಸ್​ಪ್ಯಾಕ್ ಮಾಡಿಕೊಳ್ಳಿ

ಆದ್ದರಿಂದ, ಹೈಡ್ರೇಟಿಂಗ್ ಫೇಸ್ ಮಾಸ್ಕ್‌ಗಳನ್ನು ಬೆಳಿಗ್ಗೆ ಬಳಸುವುದು ಉತ್ತಮ. ಏಕೆಂದರೆ ಅದು ಆ ಇಡೀ ದಿನ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಅಂತೆಯೇ, ನೀವು ಮಲಗುವ ಮುನ್ನ ರಾತ್ರಿಯಲ್ಲಿ ಎಕ್ಸ್‌ಫೋಲಿಯೇಟಿಂಗ್ ಫೇಸ್ ಮಾಸ್ಕ್‌ಗಳನ್ನು ಬಳಸಬಹುದು.

ನೀವು ಹೈಡ್ರೇಟಿಂಗ್ ಅಥವಾ ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುವ ಫೇಸ್ ಮಾಸ್ಕ್ ಅನ್ನು ಬಳಸುವಾಗ ಸ್ನಾನದ ನಂತರ ಅದನ್ನು ಹಚ್ಚಿಕೊಳ್ಳುವುದು ಉತ್ತಮ. ನೀವು ಎಫ್ಫೋಲಿಯೇಟಿಂಗ್ ಅಥವಾ ಮೊಡವೆ ವಿರೋಧಿ ಮಾಸ್ಕ್ ಬಳಸುವಾಗ ಸ್ನಾನ ಮಾಡುವ ಮೊದಲು ಅದನ್ನು ಬಳಸುವುದು ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ