ಹೊಳೆಯುವ ಸುಂದರ ತ್ವಚೆಗಾಗಿ ಮನೆಯಲ್ಲೇ ಸುಲಭವಾಗಿ ಈ ಫೇಸ್ಪ್ಯಾಕ್ ಮಾಡಿಕೊಳ್ಳಿ
Rice Facepack: ಮುಖದಲ್ಲಿರುವ ಎಣ್ಣೆ ಅಂಶವನ್ನು ತೆಗೆದುಹಾಕಲು, ಮೊಡವೆಗಳನ್ನು ತೊಡೆದುಹಾಕಲು, ಕಪ್ಪು ಕಲೆಗಳನ್ನು ಅಳಿಸಲು ಮತ್ತು ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ನೀವು ಅಕ್ಕಿಯನ್ನು ಬಳಸಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು.
ಮುಖ ಸುಂದರವಾಗಿ ಕಾಣಬೇಕೆಂದು ಬ್ಯೂಟಿ ಪಾರ್ಲರ್ಗೆ ಹೋಗಿ ಕ್ಲೀನಿಂಗ್, ಫೇಸ್ಪ್ಯಾಕ್ ಮಾಡಿಸಿಕೊಳ್ಳುತ್ತೀರಾ? ನಿಮ್ಮ ಅಡುಗೆ ಮನೆಯಲ್ಲೇ ಇರುವ ಅಕ್ಕಿ ಮತ್ತು ಅಕ್ಕಿ ಹಿಟ್ಟಿನಿಂದ ನಿಮ್ಮ ತ್ವಚೆ ಹೊಳೆಯುವಂತೆ ಮಾಡಬಹುದು ಎಂಬುದು ನಿಮಗೆ ಗೊತ್ತಾ? ಮುಖದಲ್ಲಿರುವ ಎಣ್ಣೆ ಅಂಶವನ್ನು ತೆಗೆದುಹಾಕಲು, ಮೊಡವೆಗಳನ್ನು ತೊಡೆದುಹಾಕಲು, ಕಪ್ಪು ಕಲೆಗಳನ್ನು ಅಳಿಸಲು ಮತ್ತು ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ನೀವು ಅಕ್ಕಿಯನ್ನು ಬಳಸಿ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು.
ಅಕ್ಕಿ ಮತ್ತು ಅಕ್ಕಿ ಹಿಟ್ಟನ್ನು ಬಳಸಿ ಸುಲಭವಾಗಿ ಮಾಡಿಕೊಳ್ಳಬಹುದಾದ 3 ಫೇಸ್ಪ್ಯಾಕ್ಗಳ ಬಗ್ಗೆ ಮಾಹಿತಿ ಇಲ್ಲಿದೆ.
1. ಅಕ್ಕಿ ನೀರಿನ ಐಸ್ ಕ್ಯೂಬ್:
– ಅಕ್ಕಿಯನ್ನು ಕುದಿಸಿ, ತಿಳಿ ಮಾಡಿ ಮತ್ತು ಆ ನೀರನ್ನು ಸಂಗ್ರಹಿಸಿಟ್ಟುಕೊಳ್ಳಿ.
– ಅದನ್ನು ತಣ್ಣಗಾಗಲು ಬಿಡಿ. ಅದನ್ನು ಸಣ್ಣ ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಿ.
– ಅಥವಾ ಅಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಆ ನೀರನ್ನು ಸಂಗ್ರಹಿಸಬಹುದು.
– ಇದನ್ನು 2-3 ದಿನಗಳವರೆಗೆ ಹುದುಗಿಸಲು ಬಿಡಿ. ಅದನ್ನು ಒಂದು ಬಾಟಲಿಯಲ್ಲಿ ಹಾಕಿಟ್ಟು, ಫ್ರೀಜರ್ನಲ್ಲಿಡಿ.
– ನಂತರ ಆ ಅಕ್ಕಿ ನೀರಿನ ಐಸ್ ಕ್ಯೂಬನ್ನು ಬೆಳಿಗ್ಗೆ ನಿಮ್ಮ ಸ್ನಾನದ ನಂತರ ಮತ್ತು ನೀವು ಮಲಗುವ ಮೊದಲು ಮುಖಕ್ಕೆ ಉಜ್ಜಿಕೊಳ್ಳಿ.
ಇದನ್ನೂ ಓದಿ: ಒಣಗಿದ ಚರ್ಮಕ್ಕೆ ಹೊಳಪು ನೀಡಲು ಸೌತೆಕಾಯಿ ಫೇಸ್ಪ್ಯಾಕ್ ಹಚ್ಚಿ ನೋಡಿ
2. ಅಕ್ಕಿ ಮತ್ತು ಮೊಸರಿನ ಫೇಸ್ಪ್ಯಾಕ್:
– ಒಂದು ಕಪ್ ಅಕ್ಕಿ ತೆಗೆದುಕೊಳ್ಳಿ (ಸುಮಾರು 100 ಗ್ರಾಂ).
– ಅಕ್ಕಿಯನ್ನು ರುಬ್ಬಿಕೊಳ್ಳಿ.
– ಅದಕ್ಕೆ ಅರ್ಧ ಚಮಚ ಕಡಲೆ ಹಿಟ್ಟು ಮತ್ತು 1 ಚಮಚ ಮೊಸರು ಸೇರಿಸಿ.
– ಇದನ್ನು ಬ್ರಷ್‌ನಿಂದ ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಒಣಗಲು ಬಿಡಿ.
– ನಿಮ್ಮ ಮುಖವನ್ನು ನೀರಿನಿಂದ ನಿಧಾನವಾಗಿ ತೊಳೆಯಿರಿ.
ಇದನ್ನೂ ಓದಿ: ಮೊಸರು ಬಳಸಿ ಹೇಗೆಲ್ಲ ಫೇಸ್ಪ್ಯಾಕ್ ಮಾಡಿಕೊಳ್ಳಬಹುದು ಗೊತ್ತಾ?
3. ಅಕ್ಕಿ ಪುಡಿ ಮತ್ತು ಎಣ್ಣೆಯ ಫೇಸ್ಪ್ಯಾಕ್:
– 1 ಚಮಚ ಅಕ್ಕಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಮೊಸರು ಸೇರಿಸಿ.
– ಅದಕ್ಕೆ ಎಣ್ಣೆಯ 2-3 ಹನಿಗಳನ್ನು ಸೇರಿಸಿ.
– ಮುಖಕ್ಕೆ ಅದನ್ನು ಮಸಾಜ್ ಮಾಡಿ. 20 ನಿಮಿಷ ಬಿಟ್ಟು ತೊಳೆಯಿರಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ