Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿರಿಯಡ್ಸ್​ ಆದಾಗ ಮಹಿಳೆಯರು ಸ್ನಾನ ಮಾಡಬಹುದಾ?

ಮುಟ್ಟಿನ ಸಮಯದಲ್ಲಿ ಸ್ನಾನ ಮಾಡುವುದು ಕೂಡ ಅಸುರಕ್ಷಿತ ಎಂದು ಕೆಲವರು ಭಾವಿಸುತ್ತಾರೆ. ಬಿಸಿನೀರು ರಕ್ತಸ್ರಾವವನ್ನು ಪ್ರಚೋದಿಸುತ್ತದೆ, ಇದು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ನಂಬಿಕೆಯಿದೆ. ಆದರೆ, ಸ್ನಾನವು ನಿಮ್ಮ ಪಿರಿಯಡ್ ರಕ್ತಸ್ರಾವದ ಮೇಲೆ ಪರಿಣಾಮ ಬೀರಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಪಿರಿಯಡ್ಸ್​ ಆದಾಗ ಮಹಿಳೆಯರು ಸ್ನಾನ ಮಾಡಬಹುದಾ?
ಸಾಂದರ್ಭಿಕ ಚಿತ್ರImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 09, 2023 | 6:06 PM

ನಮ್ಮ ಜಗತ್ತಿನಲ್ಲಿ ಹಲವು ರೀತಿಯ ಸಂಸ್ಕೃತಿಗಳಿದ್ದರೂ, ಸಂಪ್ರದಾಯಗಳಿದ್ದರೂ ಅವುಗಳಲ್ಲಿ ಬಹುತೇಕ ಸಂಸ್ಕೃತಿಯಲ್ಲಿ ಋತುಚಕ್ರವನ್ನು ಅಶುದ್ಧ ಎಂದೇ ಪರಿಗಣಿಸಲಾಗುತ್ತದೆ. ಇಂದಿಗೂ ಹಲವೆಡೆ ಋತುಕ್ರಿಯೆಯನ್ನು ಸಾಮಾನ್ಯ ವಿಷಯವಾಗಿ ಜನರು ಪರಿಗಣಿಸುವುದಿಲ್ಲ. ಹೆಣ್ಣು ಮುಟ್ಟಾದಾಗ ಆಕೆ ಸ್ನಾನ ಮಾಡಬಾರದು ಎಂಬ ತಪ್ಪುಕಲ್ಪನೆಯೂ ಹಲವರಲ್ಲಿದೆ. ಆದರೆ, ಇದು ಸರಿಯಲ್ಲ. ಋತುಕ್ರಿಯೆಯಾದಾಗ ಮಹಿಳೆ ಎಷ್ಟು ಸ್ವಚ್ಛವಾಗಿರುತ್ತಾಳೋ ಅಷ್ಟು ಒಳ್ಳೆಯದು. ಹೀಗಾಗಿ, ಮುಟ್ಟಾದಾಗ ದಿನಕ್ಕೆ 2 ಬಾರಿ ಸ್ನಾನ ಮಾಡುವುದು ಉತ್ತಮ. ಸ್ನಾನ ಮಾಡಿದಾಗ ದೇಹ ಸ್ವಚ್ಛವಾಗುವುದು ಮಾತ್ರವಲ್ಲದೆ ಹೊಟ್ಟೆನೋವು ಕಡಿಮೆಯಾಗಿ, ಮೈ ಹಗುರವಾಗುತ್ತದೆ.

ಸ್ನಾನವು ನಿಮ್ಮ ಪಿರಿಯಡ್ ರಕ್ತಸ್ರಾವದ ಮೇಲೆ ಪರಿಣಾಮ ಬೀರಬಹುದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವೈದ್ಯರು ಕೂಡ ಈ ವಿಷಯವನ್ನು ಒಪ್ಪುವುದಿಲ್ಲ. ಹಿಂದಿನಿಂದಲೂ ಮುಟ್ಟಿನ ಬಗ್ಗೆ ಕೆಲವು ನಂಬಿಕೆಗಳಿವೆ. ಸ್ನಾನ ನಿಮ್ಮ ಮುಟ್ಟು ಮತ್ತು ಫಲವತ್ತತೆಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ನಿಮ್ಮ ಮುಟ್ಟಿನ ಸಮಯದಲ್ಲಿ ತಲೆಸ್ನಾನ ಮಾಡಿದರೆ ಕೂದಲು ಉದುರುತ್ತದೆ. ಮುಟ್ಟಿನ ಮೊದಲ ದಿನದಂದು ಮಾತ್ರ ನೀವು ನಿಮ್ಮ ಕೂದಲನ್ನು ತೊಳೆಯಬೇಕು. ನಿಮ್ಮ ಮೊದಲ ಋತುಚಕ್ರವನ್ನು ನೀವು ಅನುಭವಿಸಿದಾಗ ನಿಮ್ಮ ಮುಖವನ್ನು ನಿಮ್ಮ ಮೊದಲ ಮುಟ್ಟಿನ ರಕ್ತದಿಂದ ತೊಳೆಯಬೇಕು. ಇದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಮುಟ್ಟಿನ ಅವಧಿಯಲ್ಲಿ ನೀರಿಗೆ ಇಳಿಯಬಾದರು, ನೀರು ಇರುವ ಕಡೆ ಹೋಗಲೂ ಬಾರದು ಎಂಬ ನಂಬಿಕೆಗಳಿವೆ. ಈ ಪುರಾತನ ನಂಬಿಕೆಗಳನ್ನು ಇಂದಿಗೂ ಕೆಲವರು ಆಚರಿಸಿಕೊಂಡು ಬರುತ್ತಿದ್ದಾರೆ.

ಇದನ್ನೂ ಓದಿ: Period fatigue: ಮುಟ್ಟಿನ ಸಮಯದಲ್ಲಾಗುವ ಆಯಾಸ ನಿವಾರಿಸಲು ಇಲ್ಲಿವೆ 5 ಸರಳ ಮಾರ್ಗಗಳು

ಮುಟ್ಟಿನ ಸಮಯದಲ್ಲಿ ಸ್ನಾನ ಮಾಡುವುದು ಕೂಡ ಅಸುರಕ್ಷಿತ ಎಂದು ಕೆಲವರು ಭಾವಿಸುತ್ತಾರೆ. ಬಿಸಿನೀರು ರಕ್ತಸ್ರಾವವನ್ನು ಪ್ರಚೋದಿಸುತ್ತದೆ, ಇದು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು ಎಂಬ ನಂಬಿಕೆಯಿದೆ. ಆದರೆ, ಸತ್ಯ ಸಂಗತಿಯೆಂದರೆ, ಬಿಸಿನೀರು ರಕ್ತದ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ವಾಸ್ತವವಾಗಿ ಮುಟ್ಟಿನ ಸೆಳೆತವನ್ನು ನಿವಾರಿಸಲು ಮತ್ತು ಸ್ನಾಯುವಿನ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಮುಟ್ಟಾದಾಗ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಆರಾಮ ಸಿಗುತ್ತದೆ. ಆದರೆ, ಸ್ನಾನ ಮಾಡುವಾಗ ಸೌಮ್ಯವಾದ ಮತ್ತು ಸುಗಂಧರಹಿತ ಸೋಪ್ ಬಳಸಿ. ಮೈ ಒರೆಸುವ ಬಟ್ಟೆಗಳು ಸ್ವಚ್ಛವಾಗಿರಲಿ.

ನಮ್ಮ ಜಗತ್ತಿನ 7.58 ಶತಕೋಟಿ ಮಹಿಳೆಯರು ಪ್ರತಿ ತಿಂಗಳು ಈ ಋತುಚಕ್ರವನ್ನು ಅನುಭವಿಸುತ್ತಾರೆ. ತಿಂಗಳಲ್ಲಿ 4ರಿಂದ 5 ದಿನ ಈ ಮಹಿಳೆಯರಿಗೆ ಋತುಚಕ್ರ ಉಂಟಾಗುತ್ತದೆ. ಮಹಿಳೆ ಗರ್ಭ ಧರಿಸಲು, ಆಕೆಯ ಸಂತಾನೋತ್ಪತ್ತಿ ಕ್ರಿಯೆಗೆ ಈ ಋತುಚಕ್ರ ಅತ್ಯಗತ್ಯ. ಪ್ರತಿ ತಿಂಗಳೂ ಪಿರಿಯಡ್ ಆಗುವುದು ಹೆಣ್ಣಿನ ಜೀವನದ ಒಂದು ಅವಿಭಾಜ್ಯ ಕ್ರಿಯೆ. ಈ ಸಮಯದಲ್ಲಿ ಗರ್ಭಾಶಯವು ಯೋನಿಯ ಮೂಲಕ ರಕ್ತದ ಜೊತೆಗೆ ಲೋಳೆಪೊರೆಯ ಅಂಗಾಂಶವನ್ನು ಹೊರಹಾಕುತ್ತದೆ. ಪ್ರತಿತಿಂಗಳೂ ಹೆಣ್ಣಿನಲ್ಲಿ ಈ ಕ್ರಿಯೆ ನಡೆಯುತ್ತಲೇ ಇರುತ್ತದೆ. ಪಿರಿಯಡ್ ಕೆಲವರಿಗೆ 28 ದಿನಗಳಿಗೆ ಉಂಟಾದರೆ ಇನ್ನು ಕೆಲವರಿಗೆ 30 ದಿನ, 40 ದಿನದ ಬಳಿಕವೂ ಆಗುತ್ತದೆ. ಈ ಜೈವಿಕ ಪ್ರಕ್ರಿಯೆಯು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆಯಾದರೂ, ಅದರ ಬಗ್ಗೆ ಅನೇಕ ತಪ್ಪುಗ್ರಹಿಕೆಗಳು ಇಂದಿಗೂ ಮುಂದುವರಿದಿವೆ.

ಇದನ್ನೂ ಓದಿ: ಮುಟ್ಟಾದರೆ ಮುಜುಗರ ಬೇಡ; ಋತುಚಕ್ರದ ಬಗ್ಗೆ ಇರುವ 3 ತಪ್ಪು ಕಲ್ಪನೆಗಳಿವು

ಮುಟ್ಟಿನ ಅವಧಿಯಲ್ಲಿ ಸ್ನಾನ ಮಾಡುವ ಮೊದಲು ನಿಮ್ಮ ಪ್ಯಾಡ್, ಟ್ಯಾಂಪೂನ್ ಅಥವಾ ಮುಟ್ಟಿನ ಕಪ್ ಅನ್ನು ತೆಗೆದುಹಾಕಲು ಮರೆಯಬೇಡಿ. ಋತುಚಕ್ರದ ಸಮಯದಲ್ಲಿ ವಾಸನೆಯನ್ನು ತಡೆಗಟ್ಟಲು ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ದಿನಕ್ಕೆ 2 ಬಾರಿ ಬಿಸಿ ನೀರಿನ ಸ್ನಾನ ಮಾಡಿ. ನೀವು ಬಾತ್ ಟಬ್ ಬಳಸಲು ಬಯಸಿದರೆ, ಅದನ್ನು ಪ್ರವೇಶಿಸುವ ಮೊದಲು ಮತ್ತು ಅದನ್ನು ಬಳಸಿದ ನಂತರ ಅದನ್ನು ಸ್ವಚ್ಛಗೊಳಿಸಿ.

ಸೋಂಕುಗಳನ್ನು ತಡೆಗಟ್ಟಲು ಯೋನಿಯನ್ನು ಮುಂಭಾಗದಿಂದ ಹಿಂಭಾಗಕ್ಕೆ ತೊಳೆಯಿರಿ. ಇದು ನಿಮ್ಮ ಯೋನಿಯಲ್ಲಿ ಬ್ಯಾಕ್ಟೀರಿಯಾ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !