AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಕೊಡುವಂತೆ ಬರೆದ ಮೆಸೇಜ್​ನಲ್ಲಿದ್ದ ಸ್ಪೆಲಿಂಗ್ ಮಿಸ್ಟೇಕ್​ನಿಂದ ಸಿಕ್ಕಿಬಿದ್ದ ಅಪಹರಣಕಾರ

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಗುತ್ತಿಗೆದಾರರೊಬ್ಬರನ್ನು ಅಪಹರಿಸುವ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದು, ಮೆಸೇಜ್​ನಲ್ಲಿ ಬರೆದಿದ್ದ ತಪ್ಪನ್ನು ಬಳಸಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಡರಹಾ ಗ್ರಾಮದ ಗುತ್ತಿಗೆದಾರ ಸಂಜಯ್ ಕುಮಾರ್ ಎಂಬುವರು ತಮ್ಮ ಸಹೋದರ ಸಂದೀಪ್ (27) ಅವರನ್ನು ಅಪಹರಿಸಿರುವುದಾಗಿ ಅಪರಿಚಿತ ನಂಬರ್‌ನಿಂದ ಮೆಸೇಜ್ ಬಂದಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹಣ ಕೊಡುವಂತೆ ಬರೆದ ಮೆಸೇಜ್​ನಲ್ಲಿದ್ದ ಸ್ಪೆಲಿಂಗ್ ಮಿಸ್ಟೇಕ್​ನಿಂದ ಸಿಕ್ಕಿಬಿದ್ದ ಅಪಹರಣಕಾರ
ಅಪಹರಣImage Credit source: Banner Financial Service
ನಯನಾ ರಾಜೀವ್
|

Updated on: Jan 08, 2025 | 3:10 PM

Share

ಹಣ ಕೊಡುವಂತೆ ಬರೆದ ಮೆಸೇಜ್​ನಲ್ಲಿ ಸ್ಪೆಲಿಂಗ್ ಮಿಸ್ಟೇಕ್​ನಿಂದಾಗಿ ಅಪಹರಣಕಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಹರ್ದೋಯ್​ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಸಹೋದರನಿಗೆ 5 ಸಾವಿರ ರೂ. ವಂಚನೆ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿರುವ ಘಟನೆ ಇದಾಗಿದೆ.

ಜನವರಿ 5 ರಂದು, ಪಿಹಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂದರ್ಹಾ ಗ್ರಾಮದ ನಿವಾಸಿ ಗುತ್ತಿಗೆದಾರ ಸಂಜಯ್ ಕುಮಾರ್, ತನ್ನ 27 ವರ್ಷದ ಸಹೋದರ ಸಂದೀಪ್‌ನನ್ನು ಅಪಹರಿಸಲಾಗಿದೆ ಎಂದು ಅಪರಿಚಿತ ಸಂಖ್ಯೆಯಿಂದ ಮಾಹಿತಿ ಬಂದಿದ್ದು, ಬೇಡಿಕೆಯಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆತನನ್ನು ಬಿಡುಗಡೆ ಮಾಡಲು 5 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಷ್ಟೇ ಅಲ್ಲದೆ ಒಂದೊಮ್ಮೆ ಹಣ ಕೊಡದಿದ್ದರೆ ಸಾವು ಖಚಿತ ಎಂದು ಬರೆಯಲು Death ಬದಲು Deth ಎಂದು ತಪ್ಪಾಗಿ ಬರೆದಿದ್ದ. 13 ಸೆಕೆಂಡುಗಳ ವಿಡಿಯೋವನ್ನು ಕೂಡ ಬಿಡುಗಡೆ ಮಾಡಿದ್ದು ಅದರಲ್ಲಿ ಸಂದೀಪ್​ನನ್ನು ಯಾರೋ ಕಟ್ಟಿಹಾಕಿರುವುದನ್ನು ಕಾಣಬಹುದು.

ಆದರೆ ಸಂದೀಪ್​ಗೆ ಯಾರೊಂದಿಗೂ ದ್ವೇಷ ಇರಲಿಲ್ಲ. ಸುಲಿಗೆ ಮೊತ್ತ ಕೂಡ ದೊಡ್ಡದಲ್ಲ ಹೀಗಾಗಿ ಅನುಮಾನ ಮೂಡಿತ್ತು. ಹಾಗೆಯೇ ಸ್ಪೆಲ್ಲಿಂಗ್ ಮಿಸ್ಟೇಕ್​ನ್ನು ಕೂಡ ಪೊಲೀಸರು ಕಂಡು ಹಿಡಿದಿದ್ದರು, ಜತೆಗೆ ಅಪಹರಣಕಾರ ವಿದ್ಯಾವಂತನಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು.

ಮತ್ತಷ್ಟು ಓದಿ: ಅಂಗಡಿಯಿಂದ ಸಿಗರೇಟ್ ತರಲು ನಿರಾಕರಿಸಿದ್ದಕ್ಕೆ ಬಾಲಕನ ಹಣೆಗೆ ಗುಂಡು ಹಾರಿಸಿದ ವ್ಯಕ್ತಿ

ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ನಡೆಸಿದ ಹುಡುಕಾಟದಲ್ಲಿ ರೂಪಾಪುರದಲ್ಲಿ ಸಂದೀಪ್ ಪತ್ತೆಯಾಗಿದ್ದಾನೆ, ಅವನ ಬಳಿ ಡೆತ್ ಎಂದು ಬರೆಸಲಾಯಿತು ಆಗಲೂ ಆತ ತಪ್ಪಾಗಿಯೇ ಬರೆದಿದ್ದ.

ನಂತರ ತನ್ನ ಅಪಹರಣದ ಸುಳ್ಳು ಕಥೆಯನ್ನು ಹೆಣೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಮತ್ತು ಟಿವಿಯಲ್ಲಿ ಸಿಐಡಿ ಧಾರಾವಾಹಿಯನ್ನು ನೋಡಿದ ನಂತರ ತನ್ನ ಸಹೋದರನಿಂದ ಹಣ ವಸೂಲಿ ಮಾಡುವ ಆಲೋಚನೆ ನನಗೆ ಬಂದಿತು ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಸಂದೀಪ್ ಅವರು ಪಾಲಿ ಪ್ರದೇಶದ ಮಿರ್ಜಾಪುರ ಕಬ್ಬು ಖರೀದಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಅವರ ಬೈಕ್ ಡಿ.30 ರಂದು ಸಹಾಬಾದ್‌ನಲ್ಲಿ ವಯೋವೃದ್ಧರಿಗೆ ಡಿಕ್ಕಿ ಹೊಡೆದು ಅವರ ಕಾಲಿಗೆ ಮೂಳೆ ಮುರಿತವಾಗಿತ್ತು. ಬೇರೆ ಕಡೆಯವರು ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದರಿಂದ ಅವರಿಗೆ ಹಣದ ಅವಶ್ಯಕತೆ ಇತ್ತು, ಆರೋಪಿಯನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ