ಗಾಜಿಯಾಬಾದ್ ಕೋರ್ಟ್ನ ಆವರಣಕ್ಕೆ ನುಗ್ಗಿದ ಚಿರತೆಯೊಂದು 6 ಮಂದಿ ಮೇಲೆ ದಾಳಿ ನಡೆಸಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ವೇಳೆ ಚಿರತೆ ಕೆಲವರ ಮೇಲೂ ದಾಳಿ ಮಾಡಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ನಾಲ್ವರು ಗಾಯಗೊಂಡವರನ್ನು ಪ್ರಥಮ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ.
ಚಿರತೆ ಹಿಡಿಯಲು ಗಾಜಿಯಾಬಾದ್ ಮಾತ್ರವಲ್ಲದೆ ಮೀರತ್ ನಿಂದ ಅರಣ್ಯ ಇಲಾಖೆ ತಂಡವನ್ನು ಕರೆಸಲಾಗಿತ್ತು. ಸುಮಾರು 5 ಗಂಟೆಗಳ ಪರಿಶ್ರಮದ ಬಳಿಕ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಎಡಿಎಂ ಸಿಟಿ ಗಾಜಿಯಾಬಾದ್, ವಿಪಿನ್ ಕುಮಾರ್, ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುವುದು ಇದರಿಂದ ಚಿರತೆ ಯಾವ ಸಮಯದಲ್ಲಿ ಮತ್ತು ಎಲ್ಲಿಂದ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿತು ಎಂದು ತಿಳಿಯಬಹುದು.
ಮತ್ತಷ್ಟು ಓದಿ: ಮಂಡ್ಯ: ಮಹಿಳೆ ಮೇಲೆ ಚಿರತೆ ದಾಳಿ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ
ಬುಧವಾರ (ಫೆಬ್ರವರಿ 8) ಸಂಜೆ 4 ಗಂಟೆ ಸುಮಾರಿಗೆ ನ್ಯಾಯಾಲಯದ ಆವರಣದಲ್ಲಿ ಚಿರತೆ ಪತ್ತೆಯಾಗಿದೆ ಎಂದು ಎಡಿಎಂ ವಿಪಿನ್ ಕುಮಾರ್ ತಿಳಿಸಿದ್ದಾರೆ. ಬಳಿಕ ಅವ್ಯವಸ್ಥೆ ಉಂಟಾಯಿತು. ಈ ವೇಳೆ ಚಿರತೆ 6 ಮಂದಿಯನ್ನು ಗಾಯಗೊಳಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಪೈಕಿ 4 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಬಳಿಕ ಬಿಡುಗಡೆಗೊಂಡಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಜಿಯಾಬಾದ್ ಅರಣ್ಯ ಇಲಾಖೆ ತಂಡವು ತಕ್ಷಣ ಸ್ಥಳಕ್ಕೆ ತಲುಪಿದೆ ಆದರೆ ಟ್ರ್ಯಾಂಕ್ವಿಲೈಜರ್ ಗನ್ ಲಭ್ಯವಿಲ್ಲದ ಕಾರಣ ಮೀರತ್‌ನಿಂದ ಅರಣ್ಯ ಇಲಾಖೆ ತಂಡವನ್ನು ಕರೆತರಲಾಯಿತು ಎಂದು ಎಡಿಎಂ ವಿಪಿನ್ ಕುಮಾರ್ ತಿಳಿಸಿದ್ದಾರೆ. ಪೊಲೀಸರು, ಅರಣ್ಯ ಇಲಾಖೆ ಮತ್ತು ಆಡಳಿತ ಒಟ್ಟಾಗಿ ಶ್ರಮಿಸಿದ್ದು, ಸುಮಾರು 5 ಗಂಟೆಗಳ ನಂತರ ಚಿರತೆ ಹಿಡಿಯಲು ಸಾಧ್ಯವಾಯಿತು. ಅರಣ್ಯ ಇಲಾಖೆ ತಂಡ ಇವರನ್ನು ಕರೆದುಕೊಂಡು ಹೋಗಿದ್ದಾರೆ.
ಇದೇ ವೇಳೆ ಈ ಚಿರತೆಯನ್ನು ಸಹರಾನ್‌ಪುರದ ಅರಣ್ಯದಲ್ಲಿ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ