AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Ramanujacharya Samatha Kumbh: ಶ್ರೀ ರಾಮಾನುಜಾಚಾರ್ಯರ ಸಮತಾ ಕುಂಭದ 7ನೇ ದಿನ ಅತ್ಯಂತ ಸಡಗರದಿಂದ ಪ್ಲವೋತ್ಸವ ಆಚರಣೆ

Samatha Kumbh: ಸಮತಾ ಕುಂಭದ ಅಂಗವಾಗಿ ಆಂಧ್ರ ಪ್ರದೇಶದ ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್‌ನ ಮುಚ್ಚಿಂತಲ್‌ನಲ್ಲಿ ಸಮಾನತೆಯ ಪ್ರತಿಮೆ ಪ್ರತಿಷ್ಠಾಪನೆಯ ಒಂದು ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಭಕ್ತಿ ಕಾರ್ಯಕ್ರಮಗಳು ನಡೆದವು.

Sri Ramanujacharya Samatha Kumbh: ಶ್ರೀ ರಾಮಾನುಜಾಚಾರ್ಯರ ಸಮತಾ ಕುಂಭದ 7ನೇ ದಿನ ಅತ್ಯಂತ ಸಡಗರದಿಂದ ಪ್ಲವೋತ್ಸವ ಆಚರಣೆ
ಶ್ರೀ ಮಾನುಜಾಚಾರ್ಯರ
TV9 Web
| Edited By: ಸಾಧು ಶ್ರೀನಾಥ್​|

Updated on:Feb 09, 2023 | 10:41 AM

Share

ಸಮಾನತೆ ಪ್ರತಿಮೆಯ (Statue of Equality) ಪ್ರತಿಷ್ಠಾಪನೆಯಾಗಿ ಒಂದು ವರ್ಷ ಸಂದಿರುವಾಗ, ವಾರ್ಷಿಕೋತ್ಸವದ ನೆನಪಿಗಾಗಿ ನಡೆದ ಸಮತಾ ಕುಂಭವು ಹಗಲಿನಲ್ಲಿ ಭಕ್ತಿ ಕಾರ್ಯಕ್ರಮಗಳ ಸರಣಿಯೊಂದಿಗೆ ಮುಂದುವರೆಯಿತು. ಹಗಲು ಹೊತ್ತಿನಲ್ಲಿ ವಿಶ್ವಕಸೇನ ಪೂಜೆ, ಪುಣ್ಯಾಹವಾಚನ ನಡೆಯಿತು. ನಂತರ ಸಂಜೆ 4.30ಕ್ಕೆ ತೆಪ್ಪೋತ್ಸವ ಅಥವಾ ಪ್ಲವೋತ್ಸವವನ್ನು (Plavotsavam) ಆಚರಿಸಲಾಯಿತು.

ಸಮತಾ ಕುಂಭದ ಅಂಗವಾಗಿ ಆಂಧ್ರ ಪ್ರದೇಶದ ರಂಗಾ ರೆಡ್ಡಿ ಜಿಲ್ಲೆಯ ಶಂಶಾಬಾದ್‌ನ ಮುಚ್ಚಿಂತಲ್‌ನಲ್ಲಿ ಸಮಾನತೆಯ ಪ್ರತಿಮೆ ಪ್ರತಿಷ್ಠಾಪನೆಯ ಒಂದು ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಭಕ್ತಿ ಕಾರ್ಯಕ್ರಮಗಳು ನಡೆದವು.

ಹಗಲು ಹೊತ್ತಿನಲ್ಲಿ. ವಿಶ್ವಕಸೇನ ಪೂಜೆ, ಪುಣ್ಯಾಹವಾಚನ ನಡೆಯಿತು. ನಂತರ ಸಂಜೆ 4:30ಕ್ಕೆ. ತೆಪ್ಪೋತ್ಸವ ಅಥವಾ ಪ್ಲವೋತ್ಸವವನ್ನು ಆಚರಿಸಲಾಯಿತು. ಪ್ಲವೋತ್ಸವ ಹೆಸರಿನ ಮೂಲ ‘ಪ್ಲವ’ ಅಂದರೆ ದೋಣಿಯಿಂದ ಪಡೆದುಕೊಂಡಿದೆ. ಪ್ರಾರ್ಥನೆಯ ಸೇವೆಯು ದೋಣಿಯಲ್ಲಿ 18 ದೇವತೆಗಳನ್ನು ಹೊತ್ತೊಯ್ಯುವುದು ಆಗಿರುತ್ತದೆ.

ಪ್ಲವೋತ್ಸವಂಗ ಹೋಮದಲ್ಲಿ ವಿರಜಾನದಿಯನ್ನು ಆವಾಹನೆ ಮಾಡಿ ನೈವೇದ್ಯ ಸಲ್ಲಿಸಲಾಗುತ್ತದೆ. ನದಿ ಪೂಜೆಯ ಸಮಯದಲ್ಲಿ ಶ್ರೀ ಚಿನ್ನ ಜೀಯರ್ ಸ್ವಾಮಿ ತೇಲುವ ತೆಪ್ಪಕ್ಕೆ ಭಿಕ್ಷೆಯನ್ನು ಅರ್ಪಿಸುತ್ತಾರೆ. ಬಳಿಕ ವೇದಘೋಷಗಳನ್ನು ಪಠಿಸಿ ಭಗವಂತನ ನಾಮಸ್ತೋತ್ರಗಳನ್ನು ಹಾಡಲಾಯಿತು.

ಸಾಮಾನ್ಯವಾಗಿ, ಪ್ಲವೋತ್ಸವವನ್ನು ಕೇವಲ ಒಂದು ವಿಗ್ರಹದಿಂದ ನಡೆಸಲಾಗುತ್ತದೆ. ಆದರೆ ಸಮತಾ ಕುಂಭ ಬ್ರಹ್ಮೋತ್ಸವದಲ್ಲಿ ಇದನ್ನು ಏಕಕಾಲದಲ್ಲಿ 18 ವಿಗ್ರಹಗಳೊಂದಿಗೆ ಆಚರಿಸಲಾಗುತ್ತದೆ. ಸಮತಾ ಕುಂಭದ ಸಮಯದಲ್ಲಿ ಸಮಾನತೆಯ ಪ್ರತಿಮೆಯಲ್ಲಿ ನಿಯಮಿತ ಕಾರ್ಯಕ್ರಮಗಳಲ್ಲದೆ, ಬ್ರಹ್ಮೋತ್ಸವವು ಕೊನೆಗೊಳ್ಳುವ ಫೆಬ್ರವರಿ 12 ರವರೆಗೆ ಹಲವಾರು ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ.

ಸಮತಾ ಕುಂಭವು ತನ್ನ ಹೆಸರನ್ನು ಸಮತಾ ಮೂರ್ತಿಯಿಂದ ಪಡೆದುಕೊಂಡಿದೆ. ಸಮಾನತೆಯ ಪ್ರತಿಮೆ ಅಥವಾ ಸಮತೆಯ ಪ್ರತಿಮೆಯು ವೈದಿಕ ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ವಿಶಿಷ್ಟಾದ್ವೈತದ ವೈದಿಕ ತತ್ತ್ವಶಾಸ್ತ್ರದ ಮಹಾನ್ ಪ್ರತಿಪಾದಕರಾದ ಶ್ರೀ ರಾಮಾನುಜಾಚಾರ್ಯರ ಶಾಶ್ವತ ಕೊಡುಗೆಯ ಸಂಕೇತವಾಗಿದೆ. ಇದು ಜಗತ್ತು ಒಂದು ವಾಸ್ತವವಾಗಿದೆ ಮತ್ತು ಭ್ರಮೆಯಲ್ಲ ಎಂದು ಹೇಳಿದರು.

Published On - 10:40 am, Thu, 9 February 23

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ