70,000 ಕೋಟಿ ರೂ. ಎಲ್ಲಿ ಹೋಯ್ತು? ಸಿಎಜಿ ವರದಿಯಲ್ಲಿ ಬಿಹಾರ ಸರ್ಕಾರದ ಅಕ್ರಮ ಬಯಲು
70,000 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳ ಬಳಕೆಯ ಪ್ರಮಾಣಪತ್ರ ಸಲ್ಲಿಸಲು ಬಿಹಾರ ಸರ್ಕಾರ ವಿಫಲವಾಗಿದೆ ಎಂದು ಸಿಎಜಿ ವರದಿ ಬೆಳಕಿಗೆ ತಂದಿದೆ. ಬಿಹಾರದಲ್ಲಿ ಗಂಭೀರ ಆರ್ಥಿಕ ಅಕ್ರಮಗಳನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಗುರುತಿಸಿದ್ದು, ಮಾರ್ಚ್ 31, 2024ರ ವೇಳೆಗೆ ರಾಜ್ಯ ಸರ್ಕಾರವು 70,877.61 ಕೋಟಿ ರೂಪಾಯಿಗಳಿಗೆ ಬಳಕೆಯ ಪ್ರಮಾಣಪತ್ರಗಳನ್ನು ಸಲ್ಲಿಸಿಲ್ಲ ಎಂದು ಬಹಿರಂಗಪಡಿಸಿದೆ.

ನವದೆಹಲಿ, ಜುಲೈ 25: 70,877 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಬಳಕೆಯ ಪ್ರಮಾಣಪತ್ರಗಳನ್ನು ಸಲ್ಲಿಸಲು ವಿಫಲವಾದ ಬಿಹಾರ ಸರ್ಕಾರವನ್ನು (Bihar Government) ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ತರಾಟೆಗೆ ತೆಗೆದುಕೊಂಡಿದ್ದಾರೆ. 2023-24ನೇ ಸಾಲಿನ ರಾಜ್ಯ ಹಣಕಾಸು ಕುರಿತ ಸಿಎಜಿ ವರದಿಯನ್ನು ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಯಿತು. ಈ ವೇಳೆ ಬಿಹಾರ ಸರ್ಕಾರವು 70,877.61 ಕೋಟಿ ರೂ.ಗಳ ನಿಧಿಗೆ ಬಳಕೆಯ ಪ್ರಮಾಣಪತ್ರಗಳನ್ನು ಸಲ್ಲಿಸಲು ವಿಫಲವಾದ ಬಗ್ಗೆ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಗಂಭೀರ ಕಳವಳ ವ್ಯಕ್ತಪಡಿಸಿದೆ.
ಈ ಸಂಶೋಧನೆಗಳನ್ನು ಗುರುವಾರ ಬಿಹಾರ ವಿಧಾನಸಭೆಯಲ್ಲಿ ಮಂಡಿಸಲಾದ 2023–24ರ ಸಿಎಜಿಯ ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿಯಲ್ಲಿ ವಿವರಿಸಲಾಗಿದೆ. ವರದಿಯ ಪ್ರಕಾರ, ಮಾರ್ಚ್ 31, 2024ರ ವೇಳೆಗೆ 49,649 ಪ್ರಮಾಣಪತ್ರಗಳ ಸಲ್ಲಿಕೆ ಬಾಕಿ ಉಳಿದಿದೆ.
ಇದನ್ನೂ ಓದಿ: ನಮಗೆ ಸ್ನೇಹವೇ ಮೊದಲು ಎಂದ ಮೋದಿ; ಮಾಲ್ಡೀವ್ಸ್ಗೆ ಭಾರತದಿಂದ 4,850 ಕೋಟಿ ರೂ. ಸಾಲ ಘೋಷಣೆ
“ನಿಗದಿತ ಅವಧಿಯೊಳಗೆ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯತೆಯ ಹೊರತಾಗಿಯೂ ಬಿಹಾರದ ಅಕೌಂಟೆಂಟ್ ಜನರಲ್ (ಲೆಕ್ಕಪತ್ರಗಳು ಮತ್ತು ಹಕ್ಕುಗಳು) ಅವರು 49,649 ಬಾಕಿ ಪ್ರಮಾಣಪತ್ರಗಳನ್ನು ಸ್ವೀಕರಿಸಿಲ್ಲ” ಎಂದು ವರದಿ ತಿಳಿಸಿದೆ. ಒಟ್ಟು ಬಾಕಿ ಮೊತ್ತದಲ್ಲಿ, 14,452.38 ಕೋಟಿ ರೂ.ಗಳು 2016-17ರ ಹಿಂದಿನ ಅವಧಿಗಳಿಗೆ ಸಂಬಂಧಿಸಿವೆ ಎನ್ನಲಾಗಿದೆ.
ಅತಿ ಹೆಚ್ಚು ಬಾಕಿ ಇರುವ ಯುಸಿಗಳನ್ನು ಹೊಂದಿರುವ ಸರ್ಕಾರಿ ಇಲಾಖೆಗಳು:
ಪಂಚಾಯತಿ ರಾಜ್: 28,154.10 ಕೋಟಿ ರೂ.
ಶಿಕ್ಷಣ: 12,623.67 ಕೋಟಿ ರೂ.
ನಗರಾಭಿವೃದ್ಧಿ: 11,065.50 ಕೋಟಿ ರೂ.
ಗ್ರಾಮೀಣಾಭಿವೃದ್ಧಿ: 7,800.48 ಕೋಟಿ ರೂ.
ಕೃಷಿ: 2,107.63 ಕೋಟಿ ರೂ.
ಇದನ್ನೂ ಓದಿ: ‘ಆರ್‌ಜೆಡಿ, ಕಾಂಗ್ರೆಸ್ ಜನರನ್ನು ಲೂಟಿ ಮಾಡಿವೆ’; ಬಿಹಾರದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ
2023–24ರ ಹಣಕಾಸು ವರ್ಷದಲ್ಲಿ ಬಿಹಾರವು 3.26 ಲಕ್ಷ ಕೋಟಿ ರೂ.ಗಳ ಬಜೆಟ್ ವೆಚ್ಚವನ್ನು ಹೊಂದಿತ್ತು. ಇದರಲ್ಲಿ 2.60 ಲಕ್ಷ ಕೋಟಿ ರೂ.ಗಳನ್ನು ಬಳಸಲಾಗಿದ್ದು, ಇದು ಒಟ್ಟು ಮೊತ್ತದ ಶೇ. 79.92ರಷ್ಟಿದೆ. ಆದರೆ, ಬಿಹಾರ ರಾಜ್ಯವು ತನ್ನ ಒಟ್ಟು ಉಳಿತಾಯವಾದ 65,512.05 ಕೋಟಿ ರೂ.ಗಳಲ್ಲಿ 23,875.55 ಕೋಟಿ ರೂ.ಗಳನ್ನು ಅಥವಾ ಶೇ. 36.44ರಷ್ಟು ಹಣವನ್ನು ಮಾತ್ರ ಬಿಟ್ಟುಕೊಟ್ಟಿದೆ. ಸಿಎಜಿ ಇದನ್ನು ಅಸಮರ್ಥ ಬಜೆಟ್ ನಿರ್ವಹಣೆಯ ಸಂಕೇತವೆಂದು ಗುರುತಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ