AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ!

10ನೇ ತರಗತಿಯಲ್ಲಿ ಶೇ. 92 ಅಂಕಗಳನ್ನು ಗಳಿಸಿದ್ದ ಬಾಲಕ ವಿಚಿತ್ರವಾದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ತಾಯಿಯನ್ನು ಕನಸಿನಲ್ಲಿ ಕಂಡ ಮಹಾರಾಷ್ಟ್ರದ ಬಾಲಕ ಆಕೆಯ ಬಳಿ ಹೋಗಲೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಧಿಕಾರಿಗಳು ಸೂಸೈಡ್ ನೋಟ್ ಅನ್ನು ಪತ್ತೆಹಚ್ಚಿದ್ದಾರೆ. ಅದರಲ್ಲಿ ಬಾಲಕ ತನ್ನ ತಾಯಿಯನ್ನು ಕನಸಿನಲ್ಲಿ ಕಂಡಿರುವುದಾಗಿ ಉಲ್ಲೇಖಿಸಿದ್ದಾನೆ. ಆ ಬಾಲಕ ತನ್ನ ಅಜ್ಜಿಯನ್ನು ತನ್ನ ತಂದೆಯ ಮನೆಗೆ ಕಳುಹಿಸದಂತೆ ಚಿಕ್ಕಪ್ಪನಿಗೆ ಮನವಿ ಮಾಡಿದ್ದಾನೆ.

ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ!
Shivsharan Bhutali Talkoti
ಸುಷ್ಮಾ ಚಕ್ರೆ
|

Updated on:Jul 25, 2025 | 9:17 PM

Share

ಸೋಲಾಪುರ, ಜುಲೈ 25: ಆತ 10ನೇ ತರಗತಿಯಲ್ಲಿ ಶೇ. 92ರಷ್ಟು ಅಂಕ ಪಡೆದಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ. ಕೆಲವು ತಿಂಗಳ ಹಿಂದಷ್ಟೇ ಪಿಯುಸಿಗೆ ಸೇರಿದ್ದ. ನೀಟ್ (NEET) ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದ. ಆದರೆ, ಆತನ ಭವಿಷ್ಯ ಅರಳುವ ಮೊದಲೇ ಕಮರಿಹೋಗಿದೆ. ಕನಸಿನಲ್ಲಿ ಬಂದು ಅಮ್ಮ ಕರೆದಳು ಎಂಬ ಕಾರಣಕ್ಕೆ ಆತ ಆತ್ಮಹತ್ಯೆ (Crime News) ಮಾಡಿಕೊಂಡು ತಾಯಿಯ ಬಳಿ ಹೋಗಿದ್ದಾನೆ! ಮಹಾರಾಷ್ಟ್ರದ ಸೋಲಾಪುರದಲ್ಲಿ ಈ ದಾರುಣ ಘಟನೆ ನಡೆದಿದೆ.

ತಾಯಿಯ ಇತ್ತೀಚಿನ ಸಾವಿನಿಂದ ಮನನೊಂದ 16 ವರ್ಷದ ಬಾಲಕ ಶಿವಶರಣ್ ಇಂದು ಮಹಾರಾಷ್ಟ್ರದ ಸೋಲಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಶರಣ್ ಭೂತಾಲಿ ಟಾಲ್ಕೋಟಿ ಎಂಬ ಬಾಲಕ ತನ್ನ ಚಿಕ್ಕಪ್ಪನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹುಡುಗನ ತಾಯಿ 3 ತಿಂಗಳ ಹಿಂದೆ ಕಾಮಾಲೆ ರೋಗದಿಂದ ಸಾವನ್ನಪ್ಪಿದ್ದರು. ಆತನ ಸಾವನ್ನಪ್ಪಿದ ಸ್ಥಳದಲ್ಲಿ ಸೂಸೈಡ್ ನೋಟ್ ಸಿಕ್ಕಿದೆ. ಅದರಲ್ಲಿ ಆ ಹುಡುಗ ತನ್ನ ತಾಯಿಯ ಕನಸು ಕಂಡಿದ್ದಾಗಿ ಬರೆದಿದ್ದಾನೆ. ನಾನು ಅಮ್ಮನ ಬಳಿ ಬರಬೇಕೆಂದು ಅಮ್ಮ ನನ್ನನ್ನು ಕರೆದರು. ಹೀಗಾಗಿ, ಅವಳ ಬಳಿ ಹೋಗುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.

ಇದನ್ನೂ ಓದಿ: Shocking News: ಲೈಂಗಿಕವಾಗಿ ತೃಪ್ತಿ ಪಡಿಸಲಿಲ್ಲವೆಂದು ಗಂಡನನ್ನು ಕೊಂದ ಹೆಂಡತಿ!

‘ನಾನು ಶಿವಶರಣ. ನನಗೆ ಬದುಕಲು ಇಷ್ಟವಿಲ್ಲವಾದ್ದರಿಂದ ನಾನು ಸಾಯುತ್ತಿದ್ದೇನೆ. ನನ್ನ ತಾಯಿ ಹೋದಾಗಲೇ ನಾನು ಹೋಗಬೇಕಿತ್ತು, ಆದರೆ ನಾನು ನನ್ನ ಚಿಕ್ಕಪ್ಪ ಮತ್ತು ಅಜ್ಜಿಯ ಮುಖ ನೋಡುತ್ತಾ ಜೀವಂತವಾಗಿದ್ದೆ. ನನ್ನ ಸಾವಿಗೆ ಕಾರಣ ನಿನ್ನೆ ನನ್ನ ತಾಯಿ ನನ್ನ ಕನಸಿನಲ್ಲಿ ಬಂದರು. ನಾನು ಯಾಕೆ ತುಂಬಾ ಬೇಸರವಾಗಿದ್ದೇನೆ ಎಂದು ಕೇಳಿದ ಅಮ್ಮ ನನ್ನನ್ನು ಅವಳ ಬಳಿಗೆ ಬರಲು ಹೇಳಿದ್ದರು. ಹಾಗಾಗಿ ನಾನು ಸಾಯುವ ಬಗ್ಗೆ ಯೋಚಿಸಿದೆ. ನನ್ನ ಚಿಕ್ಕಪ್ಪ ಮತ್ತು ಅಜ್ಜಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ, ಏಕೆಂದರೆ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು” ಎಂದು ಸೂಸೈಡ್ ನೋಟ್​​ನಲ್ಲಿ ಆತ ಬರೆದಿದ್ದಾನೆ.

“ಚಿಕ್ಕಪ್ಪ, ನಾನು ಸಾಯುತ್ತಿದ್ದೇನೆ. ನಾನು ಹೋದ ನಂತರ, ನನ್ನ ತಂಗಿಯನ್ನು ಸಂತೋಷವಾಗಿಡಿ. ಚಿಕ್ಕಪ್ಪ, ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಅಜ್ಜಿಯನ್ನು ಅಪ್ಪನ ಬಳಿಗೆ ಕಳುಹಿಸಬೇಡಿ. ಎಲ್ಲರೂ, ನಿಮ್ಮ ಬಗ್ಗೆ ಕಾಳಜಿ ವಹಿಸಿ. ನನ್ನ ಹೆತ್ತವರಿಗಿಂತ ನೀವು ನನಗಾಗಿ ಹೆಚ್ಚಿನ ಪ್ರೀತಿ ತೋರಿಸಿದ್ದೀರಿ” ಎಂದು ಆತ ಬರೆದಿದ್ದಾನೆ.

ಇದನ್ನೂ ಓದಿ: ಆನ್‌ಲೈನ್​ನಲ್ಲಿ ಲುಡೋ ಆಡಿ 5 ಲಕ್ಷ ಕಳೆದುಕೊಂಡು ಯುವಕ ಆತ್ಮಹತ್ಯೆ; ಹೈದರಾಬಾದ್​​​ನಲ್ಲಿ ಶಾಕಿಂಗ್ ಘಟನೆ

ಶಿವಶರಣ್ ತಮ್ಮ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು 10ನೇ ತರಗತಿಯಲ್ಲಿ ಶೇಕಡಾ 92 ರಷ್ಟು ಅಂಕಗಳನ್ನು ಗಳಿಸಿದ್ದ ಮತ್ತು ವೈದ್ಯನಾಗಲು ಬಯಸಿದ್ದ. ಸೋಲಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:16 pm, Fri, 25 July 25

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?