ದೆಹಲಿಯ ಏಮ್ಸ್ನಲ್ಲಿ ತನ್ನ ಮಗನಿಗೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು 100 ಅಡಿ ಎತ್ತರದ ಟವರ್ ಅನ್ನು ಏರಿರುವ ಮಾಹಿತಿ ಲಭ್ಯವಾಗಿದೆ. ತನ್ನ ಮಗನಿಗೆ ಯೋಗ್ಯವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸದ ಉತ್ತರ ಪ್ರದೇಶದ ಆಸ್ಪತ್ರೆಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ, ವ್ಯಕ್ತಿ 100 ಅಡಿ ಎತ್ತರದ ಟವರ್ ಹತ್ತಿ ನ್ಯಾಯ ಕೋರಿದ್ದಾರೆ.
ಇಲ್ಲಿಯ ಆಸ್ಪತ್ರೆಗಳು ತನ್ನ ಮಗನಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ, ಮಗನನ್ನು ಒಂದರ ನಂತರ ಒಂದು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಆದರೆ ಚೇತರಿಕೆ ಮಾತ್ರ ಕಾಣಿಸುತ್ತಿಲ್ಲ.
ಮತ್ತಷ್ಟು ಓದಿ: ವೈದ್ಯರ ಕೊರತೆ; ಕೊಟ್ಯಾಂತರ ಹಣ ಖರ್ಚು ಮಾಡಿ ನಿರ್ಮಾಣವಾದ ಶಿವಾಜಿನಗರದ ಸೂಪರ್ ಸ್ಪೆಷಲಿಟಿ ಚರಕ ಆಸ್ಪತ್ರೆಗೆ ಬೀಗ
ತನ್ನ ಮಗನಿಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ತನ್ನ ಜಮೀನನ್ನು ಮಾರಾಟ ಮಾಡಲು ನಿರ್ಧರಿಸಿದಾಗ, ಭೂಮಾಫಿಯಾ ಮಾರಾಟಕ್ಕೆ ಅಡ್ಡಿಪಡಿಸಿತ್ತು, ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಾಗದೇ ಹೋಯಿತು ಎಂದು ಕಣ್ಣೀರು ಹಾಕಿದ್ದಾರೆ. ವೈಯಕ್ತಿಕವಾಗಿ ಯಾರ ಮೇಲೂ ಕೋಪವಿಲ್ಲ ಆದರೆ ನನ್ನ ಮಗ ಗುಣಮುಖನಾಗುವುದು ಮುಖ್ಯ, ಹಾಗಾಗಿ ಹಲವು ಆಸ್ಪತ್ರೆಗಳಿಗೆ ಅಲೆಸಬೇಡಿ ಎಂದು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ