AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TTD ಬಂಪರ್ ಆಫರ್! ತಿರುಪತಿ ತಿಮ್ಮಪ್ಪನ ಪರಮ ಭಕ್ತರಿಗೆ ವಿಐಪಿ ವಿಶೇಷ ದರ್ಶನ -ಹೆಚ್ಚಿನ ವಿವರಗಳು ಇಲ್ಲಿವೆ

TTD ಬಂಪರ್ ಆಫರ್! ತಿರುಪತಿ ತಿಮ್ಮಪ್ಪನ ಪರಮ ಭಕ್ತರಿಗೆ ವಿಐಪಿ ವಿಶೇಷ ದರ್ಶನ -ಹೆಚ್ಚಿನ ವಿವರಗಳು ಇಲ್ಲಿವೆ

ಸಾಧು ಶ್ರೀನಾಥ್​
|

Updated on: Sep 08, 2023 | 11:58 AM

Share

Govinda Koti: 10,01,116 ಬಾರಿ ಗೋವಿಂದನಾಮ ಬರೆದವರಿಗೆ ತಿಮ್ಮಪ್ಪನ ದರ್ಶನ ನೀಡಲಾಗುವುದು. ಅಲ್ಲದೆ ವಿದ್ಯಾರ್ಥಿಗಳಿಗೆ ಶ್ರೀವಾರಿ ಪ್ರಸಾದವಾಗಿ 20 ಕೋಟಿ ಭಗವದ್ಗೀತೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು. ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಖಂಡಿಸಿದ್ದಾರೆ.

ತಿರುಮಲ ತಿರುಪತಿ ದೇವಸ್ಥಾನವು ರಾಮ ಕೋಟಿಯ ಮಾದರಿಯಲ್ಲಿ ‘ಗೋವಿಂದ ಕೋಟಿ’ ಎಂಬ (Govinda Koti – Govinda Namavali) ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಟಿಟಿಡಿ ಛೇರ್ಮನ್​ ಭೂಮನ ಕರುಣಾಕರ ರೆಡ್ಡಿ ಮಾತನಾಡಿ, ಇಂದಿನ ಯುವಜನರಲ್ಲಿ ಭಕ್ತಿ ಭಾವವನ್ನು (Spiritual) ಹೆಚ್ಚಿಸಲು ಹಾಗೂ ಸನಾತನ ಧರ್ಮದ ಬಗ್ಗೆ ವ್ಯಾಪಕ ಪ್ರಚಾರ ಮಾಡಲು ಈ ಕಾರ್ಯಕ್ರಮ ಉಪಯುಕ್ತವಾಗಲಿದೆ. ಅಷ್ಟೇ ಅಲ್ಲ, ‘ಗೋವಿಂದ ಕೋಟಿ’ ಬರೆದ ಮಕ್ಕಳು, ಯುವಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ತಿರುಮಲ ಬೆಟ್ಟದಲ್ಲಿ ಒಮ್ಮೆ ಶ್ರೀವಾರು ತಿಮ್ಮಪ್ಪನ (Lord venkateswara) ವಿಐಪಿ ಬ್ರೇಕ್ ದರ್ಶನ ನೀಡುವುದಾಗಿ ಘೋಷಿಸಿದ್ದಾರೆ.

ಅದೇ ರೀತಿ 10,01,116 ಬಾರಿ ಗೋವಿಂದನಾಮಗಳನ್ನು ಬರೆದವರಿಗೆ ಶ್ರೀಗಳ ದರ್ಶನ ನೀಡಲಾಗುವುದು ಎಂದೂ ಮಂಗಳವಾರ ಮೊದಲ ಬಾರಿಗೆ ಸಭೆ ನಡೆಸಿದ ಟಿಟಿಡಿಯ ನೂತನ ಟ್ರಸ್ಟಿಗಳ ಮಂಡಳಿ ಪ್ರಕಟಿಸಿದೆ. ಅಲ್ಲದೆ ಎಲ್ ಕೆಜಿಯಿಂದ ಪಿಜಿ ವರೆಗಿನ ವಿದ್ಯಾರ್ಥಿಗಳಿಗೆ ಶ್ರೀವಾರಿ ಪ್ರಸಾದವಾಗಿ 20 ಕೋಟಿ ಭಗವದ್ಗೀತೆ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಸನಾತನ ಧರ್ಮದ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಖಂಡಿಸಿದ್ದಾರೆ. ಸನಾತನ ಧರ್ಮವು (Hinduism, Sanatana Dharma) ಧರ್ಮವಷ್ಟೇ ಅಲ್ಲ. ಅದೊಂದು ಜೀವನ ಪಯಣ. ಪ್ರತಿಯೊಂದು ದೇಶಕ್ಕೂ ಒಂದು ಸಂಸ್ಕೃತಿ ಮತ್ತು ಸಂಪ್ರದಾಯವಿದೆ. ಅವರನ್ನು ಅರ್ಥ ಮಾಡಿಕೊಳ್ಳದೆ ಟೀಕೆ ಮಾಡುವುದು ಸರಿಯಲ್ಲ. ಇವು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಲಿದ್ದು, ಟೀಕಿಸುವವರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಟಿಟಿಡಿ (Tirumala Tirupati Devasthanams) ಅಧ್ಯಕ್ಷ ಭೂಮನ ಹೇಳಿದರು.