ರಾಯಚೂರು ತಾಲ್ಲೂಕು ಕಚೇರಿಯ ಡೆಪ್ಯುಟಿ ತಹಸೀಲ್ದಾರ್ ಲಂಚದ ಹಣದೊಂದಿಗೆ ಸಿಕ್ಕಿಬಿದ್ದರೂ ಹಣ ಮುಟ್ಟೇ ಇಲ್ಲ ಅಂದರು!

ರಾಯಚೂರು ತಾಲ್ಲೂಕು ಕಚೇರಿಯ ಡೆಪ್ಯುಟಿ ತಹಸೀಲ್ದಾರ್ ಲಂಚದ ಹಣದೊಂದಿಗೆ ಸಿಕ್ಕಿಬಿದ್ದರೂ ಹಣ ಮುಟ್ಟೇ ಇಲ್ಲ ಅಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 08, 2023 | 11:33 AM

ಕೆಲಸ ಮಾಡಿಕೊಳ್ಳುವ ಜನ ಟೇಬಲ್ ಮೇಲೆ ಇಡುವ ಲಂಚದ ಹಣವನ್ನು ಟಿವಿ9 ಕನ್ನಡ ವಾಹಿನಿಯ ರಾಯಚೂರು ವರದಿಗಾರ ಕಿಟಕಿಯಿಂದ ತಮ್ಮ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ, ಅವರು ಮೇಡಂ ಕೋಣೆಗೆ ಹೋಗಿ ಹಣದ ಬಗ್ಗೆ ಪ್ರಶ್ನಿಸಿದಾಗ, ನಾನದನ್ನು ಮುಟ್ಟಿದ್ದೀನಾ? ಅಂತ ಅಮಾಯಕತೆಯೊಂದಿಗೆ ದಾರ್ಷ್ಟ್ಯತೆ ಪ್ರದರ್ಶಿಸುತ್ತಾರೆ.

ರಾಯಚೂರು: ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಅಂತ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರಕ್ಕೆ (Siddaramaiah government) ನಗರದ ತಾಲ್ಲೂಕು  ಕಚೇರಿಯಲ್ಲಿ ಉಪ-ತಹಸೀಲ್ದಾರ್ ಆಗಿ ಕೆಲಸ ಮಾಡುವ ಶಶಿಕಲಾ ಮೇಡಂ (Shashikala) ಸವಾಲೆಸೆದಿದ್ದಾರೆ. ಇವರದ್ದು ಒಂದು ಸಿಂಪಲ್ ಫಾರ್ಮುಲಾ. ಜನ ಯಾವುದೇ ಕೆಲಸಕ್ಕೆ ಅವರ ಚೇಂಬರ್ ಗೆ ಹೋದಾಗ ಅವರಲ್ಲಿ ಮನವಿ ಪತ್ರ ಇಲ್ಲದಿದ್ದರೂ ಓಕೆ; ಕೈಯಲ್ಲಿ ಮಾತ್ರ ಒಂದಷ್ಟು ಗರಿಗರಿ ನೋಟುಗಳಿರಬೇಕು. ಅವರ ಟೇಬಲ್ ಮೇಲೆ ರೂ. 500 ರ ನೋಟುಗಳನ್ನು ನೋಡಬಹುದು. ಅವರೆಷ್ಟು ಬಿಂದಾಸ್ (blatant) ಆಗಿ ಲಂಚ ತೆಗೆದುಕೊಳ್ಳುತ್ತಾರೆ ಅಂತ ನೀವೇ ಗಮನಿಸಿ. ಕೆಲಸ ಮಾಡಿಕೊಳ್ಳುವ ಜನ ಟೇಬಲ್ ಮೇಲೆ ಇಡುವ ಲಂಚದ ಹಣವನ್ನು ಟಿವಿ9 ಕನ್ನಡ ವಾಹಿನಿಯ ರಾಯಚೂರು ವರದಿಗಾರ ಕಿಟಕಿಯಿಂದ ತಮ್ಮ ಕೆಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ನಂತರ, ಅವರು ಮೇಡಂ ಕೋಣೆಗೆ ಹೋಗಿ ಹಣದ ಬಗ್ಗೆ ಪ್ರಶ್ನಿಸಿದಾಗ, ನಾನದನ್ನು ಮುಟ್ಟಿದ್ದೀನಾ? ಅಂತ ಅಮಾಯಕತೆಯೊಂದಿಗೆ ದಾರ್ಷ್ಟ್ಯತೆ ಪ್ರದರ್ಶಿಸುತ್ತಾರೆ. ಅವರ ಟೇಬಲ್ ನ ಡ್ರಾವರ್ ಓಪನ್ ಮಾಡಿಸಿದಾಗ ಅದರಲ್ಲಿದ್ದ ಹಣವನ್ನು ಎತ್ತಿ ತಮ್ಮ ಅಡಿಗೆ ಹಾಕಿಕೊಂಡು ಕೂತುಬಿಡುತ್ತಾರೆ! ಭ್ರಷ್ಟಾಚಾರದಲ್ಲಿ ಕೇವಲ ಶಶಿಕಲಾ ಮಾತ್ರ ತೊಡಗಿಲ್ಲ, ಎಲ್ಲ ಸರ್ಕಾರೀ ಕಚೇರಿಗಳಲ್ಲಿ ಅದು ಬಿಡುಬೀಸಾಗಿ ನಡೆಯುತ್ತಿದೆ; ಕೆಲವು ಕಡೆ ಕದ್ದು ಮುಚ್ಚಿಯಾದರೆ ಬೇರೆ ಕಡೆ ಹೀಗೆ ಶಶಿಕಲಾರಂತೆ ರಾಜಾರೋಶವಾಗಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ