ತಾನು ಹೇಳಿದವರಿಗೆ ಮತ ಹಾಕಲಿಲ್ಲವೆಂದು ಹೆಂಡತಿಗೆ ಹೊಡೆದು, ಮನೆಯಿಂದ ಹೊರಹಾಕಿದ ಗಂಡ!

ಉತ್ತರ ಪ್ರದೇಶದ ಬರೇಲಿಯ ಮುಸ್ಲಿಂ ಮಹಿಳೆಗೆ ಆಕೆಯ ಗಂಡ ಚುನಾವಣೆಯಲ್ಲಿ ತಾನು ಸೂಚಿಸಿದ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಹೇಳಿದ್ದ. ಆದರೆ, ಆಕೆ ಬೇರೆಯವರಿಗೆ ಮತ ಹಾಕಿದ್ದರಿಂದ ಕೋಪಗೊಂಡ ಆತ ತನ್ನ ಹೆಂಡತಿಗೆ ಹೊಡೆದು, ಮನೆಯಿಂದ ಹೊರಹಾಕಿದ್ದಾನೆ.

ತಾನು ಹೇಳಿದವರಿಗೆ ಮತ ಹಾಕಲಿಲ್ಲವೆಂದು ಹೆಂಡತಿಗೆ ಹೊಡೆದು, ಮನೆಯಿಂದ ಹೊರಹಾಕಿದ ಗಂಡ!
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ
Updated By: ಸುಷ್ಮಾ ಚಕ್ರೆ

Updated on: Mar 21, 2022 | 6:12 PM

ಲಕ್ನೋ: ತನ್ನ ಹೆಂಡತಿ ತಾನು ಸೂಚಿಸಿದವರಿಗೆ ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಉತ್ತರ ಪ್ರದೇಶದ (Uttar Pradesh) ವ್ಯಕ್ತಿಯೊಬ್ಬರು ತನ್ನ ಹೆಂಡತಿಗೆ ಮನಬಂದಂತೆ ಥಳಿಸಿದ್ದಾರೆ. ಈ ಘಟನೆ ಕುರಿತು ಮಾಹಿತಿ ಪಡೆದ ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ ಇಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಪತ್ರ ಬರೆದಿದ್ದು, ಪತ್ನಿಯನ್ನು ಹೊಡೆದು ತನ್ನ ಮನೆಯಿಂದ ಹೊರಹಾಕಿದ ವ್ಯಕ್ತಿ ಮತ್ತು ಆತನ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಬರೇಲಿಯ ಮುಸ್ಲಿಂ ಮಹಿಳೆಗೆ ಆಕೆಯ ಗಂಡ ಚುನಾವಣೆಯಲ್ಲಿ ತಾನು ಸೂಚಿಸಿದ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಹೇಳಿದ್ದ. ಆದರೆ, ಆಕೆ ಬೇರೆಯವರಿಗೆ ಮತ ಹಾಕಿದ್ದರಿಂದ ಕೋಪಗೊಂಡ ಆತ ತನ್ನ ಹೆಂಡತಿಗೆ ಹೊಡೆದು, ಮನೆಯಿಂದ ಹೊರಹಾಕಿದ್ದಾನೆ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದನ್ನು ಗಮನಿಸಿ, ರಾಷ್ಟ್ರೀಯ ಮಹಿಳಾ ಆಯೋಗ ಆ ಮಹಿಳೆಯ ಸಹಾಯಕ್ಕೆ ಬಂದಿದೆ. ಮಹಿಳೆಯ ಪತಿ ಆಕೆಗೆ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕಿ, ಹೊಡೆದು, ಮನೆಯಿಂದ ಹೊರಗೆ ಹಾಕಿದ್ದಾನೆ ಎನ್ನಲಾಗಿದೆ.

ಎನ್‌ಸಿಡಬ್ಲ್ಯು ಈ ವಿಷಯವನ್ನು ಪೊಲೀಸರ ಗಮನಕ್ಕೆ ತಂದಿದ್ದು, ಈ ಆರೋಪಗಳು ನಿಜವೆಂದು ಸಾಬೀತಾದರೆ ಕಾನೂನಿನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಕೋರಿದೆ. ಈ ವಿಷಯದಲ್ಲಿ ತೆಗೆದುಕೊಂಡ ಕ್ರಮವನ್ನು 7 ದಿನಗಳಲ್ಲಿ ಆಯೋಗಕ್ಕೆ ತಿಳಿಸಬೇಕು ಎಂದು NCW ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪತ್ರದ ಪ್ರತಿಯನ್ನು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಬರೇಲಿ ಅವರಿಗೂ ಕಳುಹಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಹೀನಾಯ ಸೋಲು ಹಿನ್ನೆಲೆ; ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಪರಿಶೀಲನಾ ಸಭೆ

ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳ ಸರ್ಕಾರ ರಚನೆಯ ಕುರಿತು ತಮ್ಮ ನಿವಾಸದಲ್ಲಿ ಸಭೆ ಕರೆದ ಪ್ರಧಾನಿ ಮೋದಿ