ಲಕ್ನೋ: ಉತ್ತರ ಪ್ರದೇಶದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್ ಕಶ್ಯಪ್ ಅವರು ಕೊರೊನಾ ಸೋಂಕಿನಿಂದ ವಿಧಿವಶರಾಗಿದ್ದಾರೆ. ವಿಜಯ್ ಕಶ್ಯಪ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ದೇಹ ಸ್ಪಂದಿಸದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ವಿಜಯ್ ಕಶ್ಯಪ್ ಅವರ ಸಾವಿನ ಸುದ್ದಿ ಕೇಳಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ‘ಬಿಜೆಪಿ ಮುಖಂಡ ಮತ್ತು ಉತ್ತರ ಪ್ರದೇಶ ಸಚಿವ ವಿಜಯ್ ಕಶ್ಯಪ್ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ಸಾರ್ವಜನಿಕರಿಗಾಗಿ ತಮ್ಮ ಜೀವನವನ್ನು ಅವರು ಮುಡಿಪಾಗಿಟ್ಟಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ. ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಧ ಮೋಹನ್ ಸಿಂಗ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
Sad to hear about the passing away of BJP leader and Uttar Pradesh minister Vijay Kashyap. He was a leader associated with the land and was always devoted to the public. My condolences to his family: Prime Minister Narendra Modi pic.twitter.com/RfR8dBWULL
— ANI (@ANI) May 18, 2021
ಉತ್ತರ ಪ್ರದೇಶದ ಮುಖ್ಯಂತ್ರಿ ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ವಿಜಯ್ ಕಶ್ಯಪ್ ಅವರು ಕಂದಾಯ ಹಾಗೂ ಆಹಾರ ಪೂರೈಕೆ ಸಚಿವರಾಗಿದ್ದರು. ಉತ್ತರ ಪ್ರದೇಶದಲ್ಲಿ ಈ ವರ್ಷದ ಆರಂಭದಿಂದ 5 ಶಾಸಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ವಿಜಯ್ ಕಶ್ಯಪ್ ಅವರಿಗಿಂತ ಮುಂಚೆ ಮುನ್ನ ದಾಲ್ ಬಹದ್ದೂರ್ ಕೌರಿ, ಕೇಸರ್ ಸಿಂಗ್, ರಮೇಶ್ ದಿವಾಕರ್, ಸುರೇಶ್ ಕುಮಾರ್ ಶ್ರೀವಾಸ್ತವ್ ಅವರು ಕೊರೊನಾ ಸೋಂಕಿನಿಂದ ವಿಧಿವಶರಾಗಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದ ಚಿತ್ರಕೂಟ ಜೈಲಿನಲ್ಲಿ ರಕ್ತಪಾತ; ಮೂವರು ಕುಖ್ಯಾತ ಪಾತಕಿಗಳು ಗುಂಡಿಗೆ ಆಹುತಿ
Published On - 11:30 am, Wed, 19 May 21