ಉತ್ತರ ಪ್ರದೇಶದ ಚಿತ್ರಕೂಟ ಜೈಲಿನಲ್ಲಿ ರಕ್ತಪಾತ; ಮೂವರು ಕುಖ್ಯಾತ ಪಾತಕಿಗಳು ಗುಂಡಿಗೆ ಆಹುತಿ
ಹತ್ಯೆಗೀಡಾದ ಪಾತಕಿ ಮುಕೀಂ ಕಾಲಾ ಪಶ್ಚಿಮ ಉತ್ತರ ಪ್ರದೇಶದಲ್ಲಿ ತನ್ನ ಪಾತಕ ಕೋಟೆ ಕಟ್ಟಿಕೊಂಡಿದ್ದ. ಇನ್ನು ಮಿರಾಜುದ್ದೀನ್ ಎಂಬುವವನು ಜೈಲುಪಾಲಾಗಿರುವ ವಿವಾದಿತ ಶಾಸಕ ಮುಕ್ತಾರ್ ಅನ್ಸಾರಿಯ ಆಪ್ತ ಎನ್ನಲಾಗಿದೆ. ಮೃತಪಟ್ಟ ಮೂವರೂ ಅತ್ಯಧಿಕ ಭದ್ರತೆಯ ಜೈಲು ಕೋಣೆಯಲ್ಲಿ ಇದ್ದರು.
ಪವಿತ್ರ ಗಂಗಾ ನದಿ ಹರಿಯುವ, ಕಾಶಿಯನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ರಕ್ತಸಿಕ್ತ ಅಧ್ಯಾಯ ತೆರೆದುಕೊಂಡಿದೆ. ಅಲಹಾಬಾದ್ ವಲಯದ ಚಿತ್ರಕೂಟ ಜೈಲಿನಲ್ಲಿ ರಕ್ತಪಾತ ನಡೆದಿದ್ದು, ಮೂವರು ಗ್ಯಾಂಗ್ಸ್ಟರ್ಗಳು ಗುಂಡಿಗೆ ಆಹುತಿಯಾಗಿದ್ದಾರೆ. ಜೈಲು ಅಧಿಕಾರಿಗಳ ಪ್ರಕಾರ ಇಂದು ಶುಕ್ರವಾರ ಬೆಳಗ್ಗೆ 10 ಗಂಟೆಯಲ್ಲಿ ಅನ್ಷುಲ್ ದೀಕ್ಷಿತ್ ಎಂಬ ಪಾತಕಿ ಮುಕೀಂ ಕಾಲಾ (61) ಮತ್ತು ಮಿರಾಜುದ್ದೀನ್ ಎಂಬ ಇಬ್ಬರು ಪಾತಕಿಗಳನ್ನು ನಾಡ ಪಿಸ್ತೂಲಿನಿಂದ ಗುಂಡಿಟ್ಟು ಸಾಯಿಸಿದ್ದಾನೆ. ಆ ನಂತರ ಮತ್ತಷ್ಟು ಬಿಗಿಭದ್ರತೆಯ ಬ್ಯಾರೆಕ್ನಲ್ಲಿ ಐದು ಕೈದಿಗಳನ್ನು ತನ್ನ ಬಂಧಿಯಾಗಿಸಿಕೊಂಡು, ಅವರ ಹತ್ಯೆಗೆ ಬೆದರಿಕೆಯೊಡ್ಡಿದ್ದ. ಆ ವೇಳೆ ಜೈಲು ಅಧಿಕಾರಿಗಳು ದೀಕ್ಷಿತ್ನನ್ನು ಗುಂಡಿಟ್ಟು ಸಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಭಾರೀ ಭದ್ರತೆಯ ಜೈಲಿನಲ್ಲಿ ಕೈದಿಯೊಬ್ಬ ಹೀಗೆ ತನ್ನ ಆಟಾಟೋಪ ಹೇಗೆ ಮೆರೆದ, ಭದ್ರತಾ ಲೋಪ ಹೇಗಾಯಿತು ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಹತ್ಯೆಗೀಡಾದ ಪಾತಕಿ ಮುಕೀಂ ಕಾಲಾ ಪಶ್ಚಿಮ ಉತ್ತರ ಪ್ರದೇಶದಲ್ಲಿ ತನ್ನ ಪಾತಕ ಕೋಟೆ ಕಟ್ಟಿಕೊಂಡಿದ್ದ. ಇನ್ನು ಮಿರಾಜುದ್ದೀನ್ ಎಂಬುವವನು ಜೈಲುಪಾಲಾಗಿರುವ ವಿವಾದಿತ ಶಾಸಕ ಮುಕ್ತಾರ್ ಅನ್ಸಾರಿಯ ಆಪ್ತ ಎನ್ನಲಾಗಿದೆ. ಮೃತಪಟ್ಟ ಮೂವರೂ ಅತ್ಯಧಿಕ ಭದ್ರತೆಯ ಜೈಲು ಕೋಣೆಯಲ್ಲಿ ಇದ್ದರು. ಇದೀಗ ಜೈಲು ಪೊಲೀಸರು ಜೈಲಿನಲ್ಲಿ ಇರಬಹುದಾದ ಶಸ್ತ್ರಾಸ್ತ್ರಗಳಿಗಾಗಿ ಶೋಧ ನಡೆಸಿದ್ದಾರೆ. 5 ದಿನಗಳ ಹಿಂದೆಯಷ್ಟೇ ಪಾತಕಿ ಮುಕೀಂ ಕಾಲಾನನ್ನು ಸಹರಾನಾಪುರ ಜೈಲಿನಿಂದ ಚಿತ್ರಕೂಟ ಜೈಲಿಗೆ ಬಂದಿದ್ದ.
ಮಿರಾಜುದ್ದೀನ್ನನ್ನು ವಾರಾಣಾಸಿ ಜೈಲಿಂದ ಮಾರ್ಚ್ 20ರಂದು ಶಿಫ್ಟ್ ಮಾಡಲಾಗಿತ್ತು. ಪಾತಕಿಗಿಬ್ಬರ ವಿರುದ್ಧ ಕೊಲೆ, ಸುಲಿಗೆ, ನಕಲು ಮುಂತಾದ ಪ್ರಕರಣಗಳು ದಾಖಲಾಗಿದ್ದವು. ಇನ್ನು ಸೀತಾಪುರದ ಅನ್ಷುಲ್ ದೀಕ್ಷಿತ್ನನ್ನು ಡಬಲ್ ಮರ್ಡರ್ ಕೇಸ್ನಲ್ಲಿ 2014ರಲ್ಲಿ ಬಂಧಿತನಾಗಿದ್ದ. 2019ರ ಡಿಸೆಂಬರ್ ನಿಂದ ಚಿತ್ರಕೂಟ ಜೈಲಿನಲ್ಲಿದ್ದ.
(Major security breach inside UP Chitrakoot jail, 3 gangsters Anshul Dixit, Anshul Dixit and Mirajudeen shot dead)