ತಮ್ಮವರಿಗೆ ಲಸಿಕೆ ನೀಡುವಂತೆ ಒತ್ತಾಯ; ಆರೋಗ್ಯ ಅಧಿಕಾರಿ ವಿರುದ್ಧ ದೂರು ದಾಖಲು
ಎಲ್ಲರೂ ಕೂಡ 45 ವರ್ಷಕ್ಕಿಂತ ಕೆಳಗಿನವರು ಆದ್ದರಿಂದ ಇದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಮೀರಿದಂತೆ ಆಗಿದೆ ಎಂದು ಕಡ್ಮ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮನೋಜ್ ಠಾಕುರ್ ಹೇಳಿದ್ದಾರೆ.
ರಾಂಚಿ: ಲಸಿಕೆ ನೀಡಲು ನಿಗದಿಸಲ್ಪಟ್ಟ ವಯೋಮಾನಕ್ಕಿಂತ ಕಡಿಮೆಯ ಅಂದರೆ, 45 ವರ್ಷದೊಳಗಿನ 35 ಮಂದಿಗೆ ಸರ್ಕಾರ ಸೂಚಿಸುವ ಮೊದಲೇ ಲಸಿಕೆ ನೀಡುವಂತೆ ಒತ್ತಾಯ ಮಾಡಿದ ಕಾರಣ ಜಾರ್ಖಂಡ್ನ ಜಮ್ಶೆಡ್ಪುರ್ ಆರೋಗ್ಯ ಮತ್ತು ವಿಪತ್ತು ನಿರ್ವಹಣಾ ಕಚೇರಿ ಉಸ್ತುವಾರಿ ಬನ್ನಾ ಗುಪ್ತಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ರಾಜ್ಯದಲ್ಲಿ 45 ವರ್ಷದ ಒಳಗಿನವರಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭವಾಗುವ ಮೂರು ದಿನ ಮೊದಲು ಅಂದರೆ, ಮೇ 11ರಂದು 35 ಜನರಿಗೆ ಲಸಿಕೆ ನೀಡುವಂತೆ ಕೊವಿಡ್ ವ್ಯಾಕ್ಸಿನೇಷನ್ ತಂಡಕ್ಕೆ ಒತ್ತಾಯಿಸಿದ್ದಾರೆ ಎಂಬ ಆರೋಪ ದಾಖಲಾಗಿದೆ.
ಕಡ್ಮ ನ್ಯೂ ಫಾರ್ಮ್ ಏರಿಯಾ ಕಮ್ಯುನಿಟಿ ಹಾಲ್ನಲ್ಲಿ ಮೇ 11ರಂದು ಸಂಜಯ್ ತಿವಾರಿ ಮತ್ತು 35 ಮಂದಿಗೆ ಲಸಿಕೆ ನೀಡುವಂತೆ ಒತ್ತಾಯಿಸಲಾಗಿದೆ. ಎಲ್ಲರೂ ಕೂಡ 45 ವರ್ಷಕ್ಕಿಂತ ಕೆಳಗಿನವರು ಆದ್ದರಿಂದ ಇದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಮೀರಿದಂತೆ ಆಗಿದೆ ಎಂದು ಕಡ್ಮ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮನೋಜ್ ಠಾಕುರ್ ಹೇಳಿದ್ದಾರೆ.
ಗುರುವಾರ ಸಂಜೆಯ ವೇಳೆಗೆ ಎಫ್ಐಆರ್ ದಾಖಲಾಗಿದೆ. ಇನ್ಸಿಡೆಂಟ್ ಕಮಾಂಡರ್ ಹಾಗೂ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಚಂದ್ರದೇವ್ ರಾವ್ ಪ್ರಸಾದ್ ಅವರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 188, 504 ಮತ್ತು 506, ಆಕ್ಟ್ 51 ಮತ್ತು 60, 61ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಲಸಿಕಾ ಕೇಂದ್ರದ ಮೂವರು ಮಹಿಳಾ ಸದಸ್ಯರ ದೂರನ್ನು ಪರಿಶೀಲಿಸಿ ಅದು ಸರಿ ಎಂದು ಕಂಡ ಬಳಿಕವೇ ಎಫ್ಐಆರ್ ದಾಖಲಿಸಲಾಗಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಪ್ರಸಾದ್ ಮತ್ತೊಂದು ದೂರನ್ನು ಕೂಡ ದಾಖಲಿಸಿದ್ದಾರೆ. ತಿವಾರಿ ಹಾಗೂ 25-30 ಮಂದಿ ಇತರರ ವಿರುದ್ಧ ದೈಹಿಕ ಹಲ್ಲೆ, ಕೆಟ್ಟ ರೀತಿಯ ವರ್ತನೆ ತೋರಿರುವುದಕ್ಕೆ ಹಾಗೂ ಬೆದರಿಕೆಯ ಬಗ್ಗೆ ದೂರು ನೀಡಿದ್ದಾರೆ. ಆದರೆ, ತಿವಾರಿ ಇದೆಲ್ಲವೂ ಆಧಾರ ರಹಿತ ಎಂದು ದೂರನ್ನು ಅಲ್ಲಗಳೆದಿದ್ದಾರೆ. ಲಸಿಕೆ ನೀಡಲು ನಾನು ಯಾರು? ಅಲ್ಲದೆ, 18-44 ವರ್ಷದ ವಯಸ್ಸಿನವರು ಸ್ಲಾಟ್ ಬುಕ್ ಮಾಡದೆ ಲಸಿಕೆ ಪಡೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಕೋವಿಶೀಲ್ಡ್ ಲಸಿಕೆ ಸಾಕಾಷ್ಟಿದೆ, ಆದರೆ ಕೋವ್ಯಾಕ್ಸೀನ್ ನಮ್ಮ ಬಳಿ ಇಲ್ಲ: ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ
Published On - 6:16 pm, Fri, 14 May 21