ಕೋವಿಶೀಲ್ಡ್ ಲಸಿಕೆ ಸಾಕಾಷ್ಟಿದೆ, ಆದರೆ ಕೋವ್ಯಾಕ್ಸೀನ್ ನಮ್ಮ ಬಳಿ ಇಲ್ಲ: ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ
18 ವರ್ಷ ಮೇಲ್ಪಟ್ಟ ಮತ್ತು 44 ವರ್ಷದೊಳಗಿನವರಿಗೆ ಪ್ರತಿದಿನ 150 ಡೋಸ್ ನೀಡಲಾಗುತ್ತಿದೆ. ಇವತ್ತಿನಿಂದ ಈ 150 ಡೋಸ್ ಅನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡುತ್ತೇವೆ ಎಂದು ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ ಹೇಳಿದ್ದಾರೆ.
ಬೆಂಗಳೂರು: 15 ಆಕ್ಸೀಜನ್ ಬೆಡ್ ಸಿದ್ಧ ಪಡಿಸಲು ಕೆ.ಸಿ ಜನರಲ್ ಆಸ್ಪತ್ರೆ ಸಿಬ್ಬಂದಿ ಕಸರತ್ತು ನಡೆಸಿದ ಘಟನೆ ಬೆಂಗಳೂರಿನ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ. ತಾಂತ್ರಿಕ ಕಾರಣದಿಂದ ಆಕ್ಸೀಜನ್ ಸಪ್ಲೈ ಇಲ್ಲದ 15 ಬೆಡ್ಗಳನ್ನು ಖಾಲಿ ಇರಿಸಿ ದುರಸ್ತಿ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ ಇಂದು ಸಾಯಂಕಾಲ ಅಥವಾ ನಾಳೆ ಒಳಗೆ 15 ಆಕ್ಸೀಜನ್ ಬೆಡ್ ಸಿದ್ಧವಾಗಲಿದೆ. 85 ಬೆಡ್ಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಧ್ಯರಾತ್ರಿಯಲ್ಲೂ ಆಕ್ಸೀಜನ್ ಸ್ಟೋರೇಜ್ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ವ್ಯಾಕ್ಸಿನೇಷನ್ ವಿಳಂಬ ವಿಚಾರವಾಗಿ ಮಾತನಾಡಿದ ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ ಎರಡನೇ ಡೋಸ್ ತೆಗೆದುಕೊಳ್ಳುವವರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡುತ್ತಿದ್ದೇವೆ. ಕೋವಿಶೀಲ್ಡ್ ಲಸಿಕೆ ಸಾಕಾಷ್ಟಿದೆ. ನಮಗೆ ಬೇಕಾದಷ್ಟು ಪಟ್ಟಿ ಮಾಡಿ ಬಿಬಿಎಂಪಿ ಯಿಂದ ತರಿಸಿಕೊಳ್ಳುಯತ್ತಿದ್ದೇವೆ. ಎಂದು ತಿಳಿಸಿದ್ದಾರೆ.
ದಿನಕ್ಕೆ 750 ಜನರಿಗೆ ವ್ಯಾಕ್ಸಿನೇಷನ್ ಮಾಡುತ್ತಿದ್ದೇವೆ. ಕೋವ್ಯಾಕ್ಸೀನ್ ನಮ್ಮ ಬಳಿ ಇಲ್ಲ, ಸರಕಾರ ಕೊಟ್ಟ ಮಾರ್ಗಸೂಚಿಯಂತೆಯೇ ಎಲ್ಲವೂ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ ಮತ್ತು 44 ವರ್ಷದೊಳಗಿನವರಿಗೆ ಪ್ರತಿದಿನ 150 ಡೋಸ್ ನೀಡಲಾಗುತ್ತಿದೆ. ಇವತ್ತಿನಿಂದ ಈ 150 ಡೋಸ್ ಅನ್ನು 45 ವರ್ಷ ಮೇಲ್ಪಟ್ಟವರಿಗೆ ನೀಡುತ್ತೇವೆ ಎಂದು ಕೆ ಸಿ ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶಯ್ಯ ಹೇಳಿದ್ದಾರೆ.
ಇದನ್ನೂ ಓದಿ:
ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾ ಸೋಂಕಿತರ ಪರದಾಟ; ಬೆಡ್ ಇಲ್ಲದೆ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣ ಎಲ್ಲೂ ಬೆಡ್ ಸಿಗದೆ ಮುಖ್ಯಮಂತ್ರಿ ನಿವಾಸದ ಬಳಿಗೆ ಆಗಮಿಸಿದ ಕೊರೊನಾ ಸೋಂಕಿತ; ಘಟನೆ ಬಳಿಕ ಕುಮಾರಕೃಪಾ ರಸ್ತೆ ಬಂದ್