AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾಕ್ಸಿನ್ ಬಗ್ಗೆ ಮೊದಲು ನೆಗೆಟಿವ್ ಮಾತಾಡಿದ್ರು; ಜನರ ಆ ತಪ್ಪು ತಿಳಿವಳಿಕೆಯೂ ಪ್ರೊಡಕ್ಷನ್ ಮೇಲೆ ಪರಿಣಾಮ ಬೀರಿತು: ಪ್ರಹ್ಲಾದ್ ಜೋಶಿ

ಮೊದಲ ಬಂದ ವೇವ್ ರೀತಿಯಲ್ಲೇ ಎರಡನೇ ವೇವ್ ಇರುತ್ತೆ ಅಂತ ಹೇಳಲಾಗುತ್ತಿತ್ತು. ಆದ್ರೆ ಇಷ್ಟು ಪ್ರಮಾಣದಲ್ಲಿ ಬರುತ್ತೆ ಅಂತಾ ಹೇಳಿರಲಿಲ್ಲ. ಇಷ್ಟು ಪ್ರಮಾಣದಲ್ಲಿ ಆಕ್ಸಿಜೆನ್ ಕೊರತೆಯಾಗುತ್ತೆ ಅಂತ ಯಾರೂ ಹೇಳಿರಲಿಲ್ಲ. ಫೆಬ್ರವರಿಯಲ್ಲಿ ಆರಂಭವಾದಾಗ ಈ ರೀತಿ ಆಕ್ಸಿಜನ್ ಬೇಕಾಗುತ್ತೆ ಅಂತಾನೂ ಗೊತ್ತಿರಲಿಲ್ಲ- ಜೋಶಿ

ವ್ಯಾಕ್ಸಿನ್ ಬಗ್ಗೆ ಮೊದಲು ನೆಗೆಟಿವ್  ಮಾತಾಡಿದ್ರು; ಜನರ ಆ ತಪ್ಪು ತಿಳಿವಳಿಕೆಯೂ ಪ್ರೊಡಕ್ಷನ್ ಮೇಲೆ ಪರಿಣಾಮ ಬೀರಿತು: ಪ್ರಹ್ಲಾದ್ ಜೋಶಿ
ಪ್ರಲ್ಹಾದ್ ಜೋಶಿ
ಸಾಧು ಶ್ರೀನಾಥ್​
|

Updated on:May 14, 2021 | 2:12 PM

Share

ಹುಬ್ಬಳ್ಳಿ: ರಾಜ್ಯ ಸೇರಿದಂತೆ ದೇಶಾದ್ಯಂತ ಕೊರೊನಾ ವ್ಯಾಕ್ಸಿನ್​ ಕೊರತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶೇಷ ವ್ಯಾಖ್ಯಾನ ನೀಡಿದ್ದಾರೆ. ಆರಂಭದಲ್ಲಿ ಭಾರತದಲ್ಲಿ ಸರಾಗವಾಗಿ ಕೊರೊನಾ ವ್ಯಾಕ್ಸಿನ್ ತಯಾರಾಗುತ್ತಿತ್ತು. ಆಗ ಎಷ್ಟೋ ಜನ ವ್ಯಾಕ್ಸಿನ್ ಬಗ್ಗೆ ಏನೇನೋ ಮಾತನಾಡಿದರು. ಹೆಚ್ಚಾಗಿ ನೆಗೆಟಿವ್ ಅಗಿಯೇ ಮಾತನಾಡಿದರು. ಅದರ ಪರಿಣಾಮವಾಗಿ ಕಂಪನಿಗಳು ಪ್ರೊಡಕ್ಷನ್ ಕಡಿಮೆ ಮಾಡಿದವು. ಹಾಗಾಗಿ ತಪ್ಪು ತಿಳಿವಳಿಕೆಯೂ ಪ್ರೊಡಕ್ಷನ್ ಮೇಲೆ ಪರಿಣಾಮ ಬೀರಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ವಿವರಣೆ ನೀಡಿದ್ದಾರೆ.

ಜುಲೈ ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್: ಕೋರ್ಟ್ ಹೇಳುವ ಮೊದಲೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಯುದ್ಧೋಪಾದಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಜುಲೈ ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಸಿಗುತ್ತೆ. ಇಲ್ಲಿಯವರೆಗೆ ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯಲ್ಲಿ ಪ್ರಯತ್ನ ಮಾಡಿದ್ದೇವೆ. ಆಕ್ಸಿಜೆನ್ ಕೊರತೆಯಾಗದಂತೆ ಪ್ರಯತ್ನ ಮಾಡಿದ್ದೇವೆ. 80 ಆಕ್ಸಿಜೆನ್ ಕಾನ್ಸನ್ಟ್ರೇಟರ್ಸ್ ಪೈಕಿ 30 ಡೆಲೆವರಿ ಆಗಿವೆ. ಒಂದಕ್ಕೆ 53 ಸಾವಿರ ರೂ. ಬೆಲೆ ಇದೆ. 5 ಲೀಟರ್ ನಲ್ಲಿ ಇಬ್ಬರಿಗೆ ನಾವು ಚಿಕಿತ್ಸೆ ಕೊಡಬಹುದು. ಮೊದಲು 1% ಮಾತ್ರ ಮೆಡಿಕಲ್ ಗೆ ಬಳಕೆಯಾಗುತ್ತಿತ್ತು. ಆದರೆ ಈಗ ಶೇಕಡಾ 7ರಷ್ಟು ಬಳಕೆಯಾಗುತ್ತಿದೆ. 230 ಟ್ಯಾಂಕರ್ ಗಳನ್ನ ವಾಯು ಮಾರ್ಗದ ಮೂಲಕ ತರಿಸಲಾಗಿದೆ. ಕೊರೊನಾ ಸಮಯದಲ್ಲಿ 40ಕ್ಕೂ ಹೆಚ್ಚು ದೇಶಗಳು ಸಹಾಯ ಮಾಡಿವೆ. ರಾಜ್ಯದ 28 ಆಸ್ಪತ್ರೆಗಳಲ್ಲಿ ಆಕ್ಸಿಜೆನ್ ಉತ್ಪಾದನೆಗೆ ಅನುಮೋದನೆ ಕೊಟ್ಟಿದ್ದೇವೆ ಎಂದು ಸಚಿವ ಪ್ರಹ್ಲಾದ್ ಜೋಶಿ ವಿವರಿಸಿದರು.

ಇಷ್ಟು ಪ್ರಮಾಣದಲ್ಲಿ ಆಕ್ಸಿಜೆನ್ ಕೊರತೆಯಾಗುತ್ತೆ ಅಂತ ಯಾರೂ ಹೇಳಿರಲಿಲ್ಲ ರೆಮ್‌ಡಿಸಿವಿಯರ್ 38 ಲಕ್ಷ ಉತ್ಪಾದನೆಯಾಗುತ್ತಿತ್ತು. ಇದೀಗ ಒಂದು ಕೋಟಿ ಉತ್ಪಾದನೆಗೆ ಏರಿಸಲಾಗಿದೆ. ಮೊದಲ ಬಂದ ವೇವ್ ರೀತಿಯಲ್ಲೇ ಎರಡನೇ ವೇವ್ ಇರುತ್ತೆ ಅಂತ ಹೇಳಲಾಗುತ್ತಿತ್ತು. ಆದ್ರೆ ಇಷ್ಟು ಪ್ರಮಾಣದಲ್ಲಿ ಬರುತ್ತೆ ಅಂತಾ ಹೇಳಿರಲಿಲ್ಲ. ಇಷ್ಟು ಪ್ರಮಾಣದಲ್ಲಿ ಆಕ್ಸಿಜೆನ್ ಕೊರತೆಯಾಗುತ್ತೆ ಅಂತ ಯಾರೂ ಹೇಳಿರಲಿಲ್ಲ. ಫೆಬ್ರವರಿಯಲ್ಲಿ ಆರಂಭವಾದಾಗ ಈ ರೀತಿ ಆಕ್ಸಿಜನ್ ಬೇಕಾಗುತ್ತೆ ಅಂತಾನೂ ಗೊತ್ತಿರಲಿಲ್ಲ ಎಂದು ಹುಬ್ಬಳ್ಳಿಯಲ್ಲಿ ಜೋಶಿ ಹೇಳಿದರು.

(people had negetive thoughts about corona vaccine so that affected its production says union minister pralhad joshi in hubli)

Published On - 2:09 pm, Fri, 14 May 21

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ