ಬೆಂಗಳೂರಿಗರ ಸಹಾಯಕ್ಕೆ ನಿಂತ ಸೋನು ಸೂದ್​; ಈ ಸಂಖ್ಯೆಗೆ ಸಂಪರ್ಕಿಸಿದರೆ ಮನೆಬಾಗಿಲಿಗೆ ಬರುತ್ತೆ ಆಕ್ಸಿಜನ್​ ಸಿಲಿಂಡರ್

ಕೊವಿಡ್​ ರೋಗಿ ಮನೆಯಲ್ಲೇ ಇದ್ದು, ಅವರಿಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಡುತ್ತಿದ್ದರೆ ಅವರು ಈ ಫೌಂಡೆಷನ್​ ಸಂಪರ್ಕ ಮಾಡಬಹುದು. ಈ ಮೂಲಕ ಮನೆ ಬಾಗಿಲಿಗೆ ಸಿಲಿಂಡರ್​ ಪಡೆದುಕೊಳ್ಳಬಹುದು.

ಬೆಂಗಳೂರಿಗರ ಸಹಾಯಕ್ಕೆ ನಿಂತ ಸೋನು ಸೂದ್​; ಈ ಸಂಖ್ಯೆಗೆ ಸಂಪರ್ಕಿಸಿದರೆ ಮನೆಬಾಗಿಲಿಗೆ ಬರುತ್ತೆ ಆಕ್ಸಿಜನ್​ ಸಿಲಿಂಡರ್
ಸೋನು ಸೂದ್​
Follow us
ರಾಜೇಶ್ ದುಗ್ಗುಮನೆ
|

Updated on: May 14, 2021 | 2:40 PM

ಕೊರೊನಾ ವೈರಸ್ ಹರಡುವಿಕೆ ನಿತ್ಯ ಹೆಚ್ಚುತ್ತಲೇ ಇದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡ ಏರಿಕೆ ಆಗಿದೆ. ಪರಿಣಾಮ ಅನೇಕ ಕೊರೊನಾ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಕ್ಸಿಜನ್​, ಬೆಡ್​ ವ್ಯವಸ್ಥೆ ಆಗುತ್ತಿಲ್ಲ. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಆಕ್ಸಿಜನ್​ ಪೂರೈಕೆ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ಕಾರ್ಯದಲ್ಲಿ ಸೋನು ಸೂದ್​ ಮುಂಚೂಣಿಯಲ್ಲಿದ್ದಾರೆ. ಅವರು ದೇಶಾದ್ಯಂತ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಈಗ ವಿಶೇಷವಾಗಿ ಬೆಂಗಳೂರು ಜನತೆಯ ಸಹಾಯಕ್ಕೆ ಸೋನು ಸೂದ್​ ನಿಂತಿದ್ದಾರೆ.

ಬೆಂಗಳೂರಿನ ಸಾಕಷ್ಟು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇದೆ. ಅನೇಕರಿಗೆ ಬೆಡ್​ಗಳು ಕೂಡ ಸಿಗುತ್ತಿಲ್ಲ. ಹೀಗಾಗಿ ಮನೆ ಬಾಗಿಲಿಗೆ ವೈದ್ಯಕೀಯ ಆಮ್ಲಜನಕ ಸಿಲಿಂಡರ್​ಗಳನ್ನು ಪೂರೈಕೆ ಮಾಡಲು ಸೋನು ಸೂದ್​ ನಿರ್ಧರಿಸಿದ್ದಾರೆ. ಸೋನು ಸೂದ್ ಫೌಂಡೇಷನ್​, ಹೋಥೂರ್​ ಫೌಂಡೆಷನ್ ಹಾಗೂ ಸ್ವಾಗ್​ ಬೈಕ್ಸ್​ ಒಟ್ಟಾಗಿ ಸೇರಿ ಈ ಕಾರ್ಯಕ್ಕೆ ಮುಂದಾಗಿದೆ.

ಕೊವಿಡ್​ ರೋಗಿ ಮನೆಯಲ್ಲೇ ಇದ್ದು, ಅವರಿಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಡುತ್ತಿದ್ದರೆ ಅವರು ಈ ಫೌಂಡೆಷನ್​ ಸಂಪರ್ಕ ಮಾಡಬಹುದು. ಈ ಮೂಲಕ ಮನೆ ಬಾಗಿಲಿಗೆ ಸಿಲಿಂಡರ್​ ಪಡೆದುಕೊಳ್ಳಬಹುದು. ಯಾರಿಗೆ ತೊಂದರೆ ಇದೆಯೋ ಅವರು 706999961 ಸಂಖ್ಯೆಗೆ ವಾಟ್ಸ್ಯಾಪ್​ ಮಾಡಬೇಕು. ಬೆಂಗಳೂರಿನ ಯಾವ ಲೊಕೇಷನ್​ ಎನ್ನುವ ಬಗ್ಗೆ ಮಾಹಿತಿ ನೀಡಬೇಕು. ಅವರು, ನಂತರ ನಿಮ್ಮ ಸಂಪರ್ಕಕ್ಕೆ ಬರುತ್ತಾರೆ. ಈ ಮೂಲಕ ಕಷ್ಟದಲ್ಲಿರುವವರ ಸಹಾಯಕ್ಕೆ ಸೋನು ಸೂದ್​ ಮುಂದಾಗಿದ್ದಾರೆ.

ನಟ ಸೋನು ಸೂದ್​ ಅವರು ಅನೇಕರ ಪಾಲಿಗೆ ರಿಯಲ್​ ಹೀರೋ ಆಗಿದ್ದಾರೆ. ಕಷ್ಟ ಎಂದು ಹೇಳಿದ ಎಲ್ಲರಿಗೂ ಅವರು ಸಹಾಯ ಮಾಡುತ್ತಿದ್ದಾರೆ. ಸದ್ಯದ ಕೊರೊನಾ ಸಂಕಷ್ಟದಲ್ಲಿ ಹಗಲಿರುಳು ಅವರು ಶ್ರಮಿಸುತ್ತಿದ್ದಾರೆ. ಅದರಲ್ಲೂ ಆಸ್ಪತ್ರೆಯ ಬೆಡ್​ ಸಿಗದೇ ಒದ್ದಾಡುತ್ತಿರುವ, ಆಕ್ಸಿಜನ್​ ಸಿಲಿಂಡರ್​ ಕೊರತೆ ಅನುಭವಿಸುತ್ತಿರುವ ಕೊವಿಡ್​ ಸೋಂಕಿತರಿಗಾಗಿ ಸೋನು ಸೂದ್​ ಹಲವು ಬಗೆಯಲ್ಲಿ ನೆರವು ನೀಡುತ್ತಿದ್ದಾರೆ. ಕೊರೊನಾದಿಂದ ಅತಿ ಹೆಚ್ಚು ಕಷ್ಟ ಅನುಭವಿಸುತ್ತಿರುವ ನಾಲ್ಕು ರಾಜ್ಯಗಳಲ್ಲಿ ಆಕ್ಸಿಜನ್​ ಪ್ಲಾಂಟ್​ಗಳನ್ನು ಸ್ಥಾಪಿಸಲು ಸೋನು ಸೂದ್​ ತೀರ್ಮಾನಿಸಿದ್ದರು. ಅದಕ್ಕಾಗಿ ಅವರು ಆಕ್ಸಿಜನ್​ ಪ್ಲಾಂಟ್​ಗಳನ್ನು ಫ್ರಾನ್ಸ್​ನಿಂದ ಆಮದು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.

ಇದನ್ನೂ ಓದಿ: ಆಕ್ಸಿಜನ್ ಪ್ಲಾಂಟ್ ತರುತ್ತಿದ್ದಾರೆ ನಟ ಸೋನು ಸೂದ್

Sonu Sood: ಕೊರೊನಾ ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ರಿಯಲ್​ ಹೀರೋ ಸೋನು ಸೂದ್​

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ