ಕೇಸ್ ಹಾಕಿದ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ ರೈತ; ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಒಂದು ದಿನದ ಬಳಿಕ ಎಮಿಷನ್ ಟೆಸ್ಟ್ ಇಲ್ಲ ಅಂತಾ 1 ಸಾವಿರ ದಂಡ ಹಾಕಿದ್ದು, ಕೊರೊನಾ ಟೈಂನಲ್ಲಿ ಇದು ಬೇಕಿತ್ತ ಎಂದು ಪಿಎಸ್ಐ ವಿರುದ್ಧ ಆಕ್ರೋಶ ಹೊರ ಹಾಕಿದ ರೈತ ಪ್ರಶಾಂತ್ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಸೂರು: ಜಮೀನಿಗೆ ತೆರಳುತ್ತಿರುವ ರೈತನ ಬೈಕ್ ತಡೆದು ಎಮಿಷನ್ ಟೆಸ್ಟ್ ಇಲ್ಲ ಎಂದು ಕೇಸ್ ಹಾಕಿದ ಘಟನೆ ಮೈಸೂರಿನ ಹುಲ್ಲಳ್ಳಿ ಸಮೀಪದ ಹರದನಹಳ್ಳಿ ಕಣ್ಣೇನೂರಿನಲ್ಲಿ ನಡೆದಿದೆ. ಈ ನಿಟ್ಟಿನಲ್ಲಿ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಬೇಸರ ವ್ಯಕ್ತಪಡಿಸಿದ ರೈತ ಪ್ರಶಾಂತ್ ವಿಡಿಯೋ ಮಾಡಿ ತನಗಾದ ಅನ್ಯಾಯ ವ್ಯಕ್ತಪಡಿಸಿದ್ದಾರೆ. ಜಮೀನಿನ ಲೀಸ್ ಡಾಕ್ಯುಮೆಂಟ್ ತೋರಿಸಿದರೂ ಬೈಕ್ ವಶಕ್ಕೆ ಪಡೆದ ಪೊಲೀಸರು, ಬೆಳಿಗ್ಗೆ 6 ರಿಂದ ಹತ್ತು ಗಂಟೆ ಒಳಗೆ ಓಡಾಟ ಮಾಡು ಎಂದು ಕಿರುಕುಳ ನೀಡಿರುವುದಾಗಿ ರೈತ ಪ್ರಶಾಂತ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ವಾಸವಾಗಿದ್ದ ರೈತ ಪ್ರಶಾಂತ್ ಕಣ್ಣೇನೂರಿನಲ್ಲಿ ಜಮೀನು ಲೀಸ್ ಪಡೆದಿದ್ದಾರೆ. ಜಯಪುರ ಮಾರ್ಗವಾಗಿ ಜಮೀನಿಗೆ ತೆರಳುವ ವೇಳೆ ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದಾರೆ. ಎಲ್ಲಾ ಡಾಕ್ಯುಮೆಂಟ್ ಇದ್ದರು ಕೂಡ ಕೇಳದೆ ಖ್ಯಾತೆ ತೆಗೆದಿದ್ದಾರೆ. ಈ ಜಮೀನಿನಲ್ಲಿ ಬಾಳೆ ಬೆಳೆ ಹಾಳಾಗುತ್ತಿದೆ. ಬಿಡಿ ಸ್ವಾಮಿ ಎಂದರೂ ಬಿಡದೆ ಜಯಪುರ ಸಬ್ಇನ್ಸ್ಪೆಕ್ಟರ್ ಗಾಡಿ ವಶಕ್ಕೆ ಪಡೆದಿದ್ದಾರೆ ಎಂದು ರೈತ ಪ್ರಶಾಂತ್ ಅಳಲು ತೋಡಿಕೊಂಡಿದ್ದಾರೆ.
ಒಂದು ದಿನದ ಬಳಿಕ ಎಮಿಷನ್ ಟೆಸ್ಟ್ ಇಲ್ಲ ಅಂತಾ 1 ಸಾವಿರ ದಂಡ ಹಾಕಿದ್ದು, ಕೊರೊನಾ ಟೈಂನಲ್ಲಿ ಇದು ಬೇಕಿತ್ತ ಎಂದು ಪಿಎಸ್ಐ ವಿರುದ್ಧ ಆಕ್ರೋಶ ಹೊರ ಹಾಕಿದ ರೈತ ಪ್ರಶಾಂತ್ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:
ಲಾಕ್ಡೌನ್ ಉಲ್ಲಂಘಿಸಿದರೆ ಬಿಡಲ್ಲ, ವಾಹನ ಸೀಜ್ ಜೊತೆ ಅರೆಸ್ಟ್ ಮಾಡ್ತಿವಿ | ಬೆಂಗಳೂರು ಪೊಲೀಸ್ ಆಯುಕ್ತ
ವಾಗ್ವಾದಕ್ಕಿಳಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್, ಫುಡ್ ಡೆಲಿವರಿ ಬಾಯ್ಸ್ಗೆ ಖಡಕ್ ವಾರ್ನಿಂಗ್
Published On - 1:46 pm, Fri, 14 May 21