ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್ ಜಿಲ್ಲೆಯಲ್ಲಿ 22 ವರ್ಷದ ಮುಸ್ಲಿಂ (Muslim) ಯುವಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಅರ್ಜಿ ಸಲ್ಲಿಸಿದ್ದಾನೆ. ಆದರೆ ಈತ ತ್ರಿವಳಿ ತಲಾಖ್ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮತ್ತು ‘ಲವ್ ಜಿಹಾದ್’ (love jihad) ಆರೋಪಗಳಿಂದ ದೂರವಿರಲು ಮತಾಂತರದ ಮಾರ್ಗವನ್ನು ಆರಿಸಿಕೊಂಡಿದ್ದಾನೆ ಎಂದು ಆತನ ಪತ್ನಿ ಆರೋಪಿಸಿದ್ದಾಳೆ. ಜಿಲ್ಲಾ ಮ್ಯಾಜಿಸ್ಟ್ರೇಟ್ (DM) ಗೆ ಸಲ್ಲಿಸಿದ ಅರ್ಜಿಯಲ್ಲಿ, ಅಮೀರ್ ಅಲಿ ಎಂಬಾತ ಈ ವಿಷಯದ ಬಗ್ಗೆ ತಮ್ಮ ಸಮುದಾಯದ ಸದಸ್ಯರಿಂದ ದಾಳಿ ಸಾಧ್ಯತೆ ಇದ್ದು, ಭದ್ರತೆಗಾಗಿ ಕೋರಿದ್ದಾರೆ.
ಕಾನೂನಿನ ಪ್ರಕಾರ ವಯಸ್ಕನಾಗಿರುವ ವ್ಯಕ್ತಿ ತಮ್ಮ ಧರ್ಮವನ್ನು ಬದಲಾಯಿಸಲು ಸಿದ್ಧರಿದ್ದರೆ ಅಧಿಕಾರಿಯಿಂದ ಯಾವುದೇ ಅನುಮತಿಯ ಅಗತ್ಯವಿಲ್ಲ. ಆದರೆ ಈ ಪ್ರಕರಣದಲ್ಲಿ ಅವರ ಪತ್ನಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ತನ್ನ ಪತಿ ಈಗಿರುವ ಕಾನೂನುಗಳೊಂದಿಗೆ ನಾಟಕವಾಡುತ್ತಿದ್ದಾನೆ ಎಂದು ಪತ್ನಿ ದೂರಿದ್ದಾರೆ. ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸತ್ಯಾಸತ್ಯತೆ ತಿಳಿಯಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಎಡಿಎಂ) ಮತ್ತು ಹಿರಿಯ ಪೊಲೀಸ್ ಅಧೀಕ್ಷಕರಲ್ಲಿ ನಾನು ಕೇಳಿದ್ದೇನೆ ಎಂದು ಡಿಎಂ ಶೈಲೇಂದ್ರ ಕುಮಾರ್ ಸಿಂಗ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಅಮೀರ್ ಅಲಿ ಗಾಜಿಯಾಬಾದ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಮೊಘಲ್‌ಪುರ ಪೊಲೀಸ್ ವ್ಯಾಪ್ತಿಗೆ ಒಳಪಡುವ ಪ್ರಿನ್ಸ್ ರಸ್ತೆಯ ನಿವಾಸಿ ಎಂದು ಮೊರಾದಾಬಾದ್ ಪೊಲೀಸರು ತಿಳಿಸಿದ್ದಾರೆ. ಅವರು ಮತಾಂತರಕ್ಕೆ ಅನುಮತಿ ಕೋರಿ ಉನ್ನತ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಆದರೆ ಈ ಸಂಬಂಧ ನಮಗೆ ಯಾವುದೇ ಆದೇಶ ಬಂದಿಲ್ಲ. ಭದ್ರತೆಗಾಗಿ ಅವರ ನಿವಾಸದ ಹೊರಗೆ ಪೊಲೀಸ್ ಪೇದೆಯನ್ನು ಇರಿಸಲಾಗಿದೆ ಎಂದು ಮುಘಲ್ಪುರ ಪೊಲೀಸ್ ಠಾಣೆಯ ಪ್ರಭಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಅಲಿ ಅವರ ಪತ್ನಿ ಗುಲ್ಫಾನ್ಸಾಗೆ 19 ವರ್ಷ ವಯಸ್ಸು. ಈ ದಾಂಪತ್ಯದಲ್ಲಿ ನಾಲ್ಕು ತಿಂಗಳ ಮಗಳಿದ್ದಾಳೆ. ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಗುಲ್ಫಾನ್ಸಾ ತನ್ನ ಪತಿ 2014 ರಿಂದ ಹಿಂದೂ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.
ನಾನು ಫೆಬ್ರವರಿ 2022 ರಲ್ಲಿ ವಿವಾಹವಾದೆ. ಆರು ತಿಂಗಳ ನಂತರ ಅವರ ಸಂಬಂಧದ ಬಗ್ಗೆ ನನಗೆ ಗೊತ್ತಾಯಿತು. ನಾನು ಅದನ್ನು ವಿರೋಧಿಸಿದೆ. ಅವನು ಅವಳಿಂದ ದೂರವಿರುವುದಾಗಿ ನನಗೆ ಭರವಸೆ ನೀಡಿದ್ದ. ಆತನ ಗೆಳತಿ ತಮ್ಮ ಸಂಬಂಧವನ್ನು ‘ಲವ್ ಜಿಹಾದ್’ ಪ್ರಕರಣವನ್ನಾಗಿ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಅವರು ನನಗೆ ವಿಚ್ಛೇದನ ನೀಡಿದರೆ ನನ್ನ ಕುಟುಂಬದವರು ಅವರ ವಿರುದ್ಧ ತ್ರಿವಳಿ ತಲಾಖ್ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸುತ್ತಾರೆ. ಮತಾಂತರಕ್ಕೆ ಅನುಮತಿ ಪಡೆಯುವ ಮೂಲಕ ಅವರು ಯಾಕೆ ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ಆಕೆ ಹೇಳಿದ್ದಾಳೆ. ತ್ರಿವಳಿ ತಲಾಖ್, ಷರಿಯಾ ಕಾನೂನಿನಡಿಯಲ್ಲಿ ವಿಚ್ಛೇದನ ಪ್ರಕ್ರಿಯೆಯಲ್ಲಿ ಪತಿ ಮೂರು ಬಾರಿ ‘ತಲಾಖ್’ ಎಂದು ಹೇಳುವ ಮೂಲಕ ತನ್ನ ಹೆಂಡತಿಗೆ ವಿಚ್ಛೇದನವನ್ನು ನೀಡಬಹುದು. ಭಾರತದಲ್ಲಿ ಇದು ಕಾನೂನುಬಾಹಿರವಾಗಿದ್ದು,ಕ್ರಿಮಿನಲ್ ಅಪರಾಧವಾಗಿದೆ.
ಇದನ್ನೂ ಓದಿ: PUBG Love: ಭಾರತ-ಪಾಕಿಸ್ತಾನ ಪಬ್ಜಿ ಲವ್ ಸ್ಟೋರಿ, ಭಾರತ ಈಗ ನನ್ನ ದೇಶ ಎಂದ ಪಾಕ್ ಮಹಿಳೆ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಪತ್ರವನ್ನು ಕಳುಹಿಸಿರುವುದಾಗಿ ಗುಲ್ಫಾನ್ಸಾ ಹೇಳಿದ್ದಾರೆ. ನಾನು ನಿಮ್ಮ ಮಗಳು ಮತ್ತು ಈ ವಿಷಯದಲ್ಲಿ ನಿಮ್ಮ ಮಗಳನ್ನು ರಕ್ಷಿಸಲು ನೀವು ನನ್ನ ರಕ್ಷಣೆಗೆ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಅಮೀರ್ ತನ್ನ ಫೋನ್ ಸ್ವಿಚ್ ಆಫ್ ಮಾಡಿ ಪ್ರಿನ್ಸ್ ರಸ್ತೆಯಲ್ಲಿರುವ ಆತನ ಮನೆಗೆ ಹೊರಗಿನಿಂದ ಬೀಗ ಹಾಕಿ ಎಲ್ಲಿಗೋ ಹೋಗಿದ್ದಾನೆ. ಆದ್ದರಿಂದ ನಾನು ನನ್ನ ತವರು ಮನೆಯಲ್ಲಿದ್ದೆ ಎಂದು ಆಕೆ ಹೇಳಿದ್ದಾಳೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ