ಉತ್ತರ ಪ್ರದೇಶದ ಪಾಧಮ್ ಪಟ್ಟಣದಲ್ಲಿ ಅಗ್ನಿದುರಂತ: ಮಕ್ಕಳೂ ಸೇರಿ ಒಂದೇ ಕುಟುಂಬದ 6 ಜನ ಸಜೀವ ದಹನ

ಫಿರೋಜಾಬಾದ್ ಜಿಲ್ಲೆಯ ಜಸ್ರಾನಾದ ಪದಮ್ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿರುವ ಅಂಗಡಿ ಮತ್ತು ಅದರ ಮೇಲಿನ ಮನೆಯಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಪಾಧಮ್ ಪಟ್ಟಣದಲ್ಲಿ ಅಗ್ನಿದುರಂತ: ಮಕ್ಕಳೂ ಸೇರಿ ಒಂದೇ ಕುಟುಂಬದ 6 ಜನ ಸಜೀವ ದಹನ
ಪಾಧಮ್ ಪಟ್ಟಣದಲ್ಲಿ ಅಗ್ನಿದುರಂತ
Updated By: ಆಯೇಷಾ ಬಾನು

Updated on: Nov 30, 2022 | 7:21 AM

ಲಖನೌ: ಉತ್ತರ ಪ್ರದೇಶ ಫಿರೋಜಾಬಾದ್ ಜಿಲ್ಲೆ ಪಾಧಮ್ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಅಗ್ನಿ ದುರಂತ(Fire Accident)  ಸಂಭವಿಸಿದೆ. ಅಪಘಾತದಲ್ಲಿ ಒಂದೇ ಕುಟುಂಬದ 6 ಜನ ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳು, ಇಬ್ಬರು ಯುವಕರಿದ್ದಾರೆ. ಕಟ್ಟಡದಲ್ಲಿ ವಿದ್ಯುತ್​ ಶಾರ್ಟ್​ಸರ್ಕ್ಯೂಟ್​​ನಿಂದ ಅಗ್ನಿ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಫಿರೋಜಾಬಾದ್ ಎಸ್ಪಿ ಆಶಿಶ್ ತಿವಾರಿ, ಫಿರೋಜಾಬಾದ್ ಜಿಲ್ಲೆಯ ಜಸ್ರಾನಾದ ಪದಮ್ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿರುವ ಅಂಗಡಿ ಮತ್ತು ಅದರ ಮೇಲಿನ ಮನೆಯಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳೂ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಕಿ ತೀವ್ರವಾಗಿದ್ದು, 18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿವೆ ಎಂದರು.

ಇದನ್ನೂ ಓದಿ: ಉಂಡು ಹೋದ..ಚಿನ್ನದ ಒಡವೆ ಕೊಂಡು ಹೋದ: ಮದ್ವೆ ಆಗ್ತೀನಿ ಎಂದು ಬಂದವ ವಿಧವೆ ಬಾಳಲ್ಲಿ ಚೆಲ್ಲಾಟ

ಘಟನೆಯಲ್ಲಿ ಒಂದೇ ಕುಟುಂಬದ 9 ಮಂದಿಗೆ ಸುಟ್ಟ ಗಾಯಗಳಾಗಿದ್ದವು. ಆದ್ರೆ ಈ ಪೈಕಿ ಆರು ಮಂದಿ ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಕಿ ಕಾಣಿಸಿಕೊಂಡು ಮನೆಯ ಕೆಲ ಮಹಡಿಯಲ್ಲಿದ್ದ ಅಂಗಡಿ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಪೀಠೋಪಕರಣದ ಅಂಗಡಿಯಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಆಗ್ರಾ, ಮೈನ್‌ಪುರಿ, ಇಟಾ ಮತ್ತು ಫಿರೋಜಾಬಾದ್‌ನಿಂದ 18 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು. ಅಲ್ಲದೆ 12 ಠಾಣೆಗಳ ಪೊಲೀಸರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಸುಮಾರು ಎರಡೂವರೆ ಗಂಟೆಗಳ ನಂತರ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಗಿದೆ ಎಂದು ಎಸ್ಪಿ ಆಶಿಶ್ ತಿವಾರಿ ಮಾಹಿತಿ ನೀಡಿದರು.

ಮೃತರಿಗೆ ಸಂತಾಪ ಸೂಚಿಸಿದ ಸಿಎಂ ಯೋಗಿ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಫಿರೋಜಾಬಾದ್‌ನ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿ ಘಟನೆಗೆ ಸ್ಪಂದಿಸಿದ್ದು ಕುಟುಂಬಕ್ಕೆ ಎರಡು ಲಕ್ಷ ರೂಪಾಯಿಗಳ ಪರಿಹಾರವನ್ನು ತಕ್ಷಣವೇ ವಿತರಿಸಲು ಆದೇಶಿಸಿದ್ದಾರೆ. ಹಾಗೂ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

Published On - 7:17 am, Wed, 30 November 22