ಎಸ್‌ಯುವಿ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ವ್ಯಕ್ತಿಯನ್ನು 3 ಕಿ.ಮೀ ಎಳೆದೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕಾರೊಂದು ಪತ್ನಿ, ಪತ್ನಿ ಹಾಗೂ ಮಗುವನ್ನು ಕರೆದೊಯ್ಯುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಷ್ಟೇ ಅಲ್ಲದೆ ವ್ಯಕ್ತಿಯನ್ನು 3ಕಿ.ಮೀನಷ್ಟು ದೂರ ಎಳೆದೊಯ್ದಿದೆ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಪತ್ನಿ ಹಾಗೂ ಮಗುವಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರೇಂದ್ರ ಕುಮಾರ್ ಅವರು ಪತ್ನಿ ಮತ್ತು ಐದು ವರ್ಷದ ಮಗನೊಂದಿಗೆ ರಾಯ್ ಬರೇಲಿಯಿಂದ ದಾಲ್ಮೌ ಪಟ್ಟಣಕ್ಕೆ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪತ್ನಿ ಮತ್ತು ಮಗ ಬೈಕ್‌ನಿಂದ ಹಾರಿ ಬಿದ್ದಿದ್ದಾರೆ, ಆದರೆ ವ್ಯಕ್ತಿ ಬೈಕ್ನಲ್ಲೇ ಸಿಲುಕಿಕೊಂಡಿದ್ದರು, ಅಪಘಾತದ ಪರಿಣಾಮ ಎಸ್‌ಯುವಿ ಮುಂಭಾಗದ ಭಾಗಗಳು ನುಜ್ಜುಗುಜ್ಜಾಗಿವೆ, ವೀರೇಂದ್ರ ಬಲ ಫೆಂಡರ್ ಮತ್ತು ಚಕ್ರದ ನಡುವೆ ಸಿಲುಕಿಕೊಂಡಿದ್ದರು.
ಅಪಘಾತದ ನಂತರ ಚಾಲಕ ನಿಲ್ಲಿಸದೆ ವೀರೇಂದ್ರನನ್ನು ಕಾರಿನೊಂದಿಗೆ ಸುಮಾರು 3 ಕಿ.ಮೀ ಎಳೆದೊಯ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊನೆಗೆ ಆತ ನಿಲ್ಲಿಸಿದಾಗ ದಾರಿಹೋಕರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮತ್ತಷ್ಟು ಓದಿ: ಭುವನೇಶ್ವರ: ಬೈಕ್‌ಗೆ ಡಿಕ್ಕಿ ಹೊಡೆದು ಒಂದು ಕಿ.ಮೀವರೆಗೆ ಎಳೆದೊಯ್ದ ಕಾರು, ಎದೆ ಝಲ್ಲೆನಿಸುವ ವಿಡಿಯೋ
ವೀರೇಂದ್ರ, ಅವರ ಪತ್ನಿ ರೂಪಾಲ್ ಮತ್ತು ಪುತ್ರ ಅನುರಾಗ್ ಅವರನ್ನು ರಾಯ್ ಬರೇಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವೀರೇಂದ್ರ ಮೃತಪಟ್ಟಿದ್ದು, ಅವರ ಪತ್ನಿ ಮತ್ತು ಮಗು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ಲಾಲ್‌ಗಂಜ್ ಠಾಣಾಧಿಕಾರಿ ಶಿವಶಂಕರ್ ಸಿಂಗ್ ಮಾತನಾಡಿ, ಚಾಲಕನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಮತ್ತೊಂದು ಘಟನೆ
ಬೈಕ್‌ಗೆ ಡಿಕ್ಕಿ ಹೊಡೆದು ಒಂದು ಕಿ.ಮೀವರೆಗೆ ಎಳೆದೊಯ್ದ ಕಾರು
ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದು ಒಂದು ಕಿ.ಮೀ ಎಳೆದೊಯ್ದಿರುವ ಘಟನೆ ಭುವನೇಶ್ವರದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನವರಿ 31ರ ರಾತ್ರಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು ಒಂದು ಕಿಲೋಮೀಟರ್ ದೂರ ಬೈಕ್ ಅನ್ನು ಎಳೆದುಕೊಂಡು ಹೋಗುತ್ತಿದ್ದಾಗ ಕಾರಿನ ಕೆಳಗಡೆ ಬೆಂಕಿ ಕಿಡಿಗಳು ಹೊರಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆ ಘಟನೆ ನೋಡಿದರೆ ಬೈಕ್ ಸವಾರ ಬದುಕುಳಿದಂತೆ ಕಾಣುತ್ತಿಲ್ಲ, ಬೈಕ್ ಸವಾರನ ಮೇಲೆ ಹಳೆಯ ವೈಷಮ್ಯ ಏನಾದರೂ ಇತ್ತೇ, ಅಥವಾ ಕಾರು ಚಾಲಕ ಮದ್ಯದ ನಶೆಯಲ್ಲಿದ್ದನೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಕಾರು ಬೈಕ್‌ಗೆ ಡಿಕ್ಕಿಯಾದಾಗ ನಿಲ್ಲಿಸುವುದು ಬಿಟ್ಟು ಕಿಲೋಮೀಟರ್ಗಳಷ್ಟು ದೂರ ಏಕೆ ಎಳೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣಗಳು ಹೆಚ್ಚಾಗುತ್ತಿವೆ. ದೆಹಲಿಯಲ್ಲಿ ಕಳೆದ ವರ್ಷ ನ್ಯೂ ಇಯರ್ ಸಂದರ್ಭದಲ್ಲಿ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದು ಯುವತಿಯೊನ್ನು ಕಿಲೋಮೀಟರ್ಗಳವರೆಗೆ ಎಳೆದೊಯ್ದ ಘಟನೆಯೂ ನಡೆದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ