ಉತ್ತರ ಪ್ರದೇಶ: ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಲಾರಿ, 10 ಮಂದಿ ಸಾವು

|

Updated on: Oct 04, 2024 | 9:31 AM

ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. 13 ಕ್ಕೂ ಹೆಚ್ಚು ಕಾರ್ಮಿಕರನ್ನು ಹೊತ್ತ ಟ್ರಾಕ್ಟರ್ ಟ್ರಾಲಿಯು ಮಿರ್ಜಾಪುರ-ವಾರಣಾಸಿ ಗಡಿಯಲ್ಲಿ ಕಚವಾನ್ ಮತ್ತು ಮಿರ್ಜಾಮುರಾದ್ ನಡುವೆ ಪ್ರಯಾಣಿಸುತ್ತಿದ್ದಾಗ ಘಟನೆಯು 1 ಗಂಟೆ ವೇಳೆಗೆ ಸಂಭವಿಸಿದೆ.

ಉತ್ತರ ಪ್ರದೇಶ: ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದ ಲಾರಿ, 10 ಮಂದಿ ಸಾವು
ಲಾರಿ
Image Credit source: India TV
Follow us on

ಟ್ರ್ಯಾಕ್ಟರ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. 13 ಕ್ಕೂ ಹೆಚ್ಚು ಕಾರ್ಮಿಕರನ್ನು ಹೊತ್ತ ಟ್ರಾಕ್ಟರ್ ಟ್ರಾಲಿಯು ಮಿರ್ಜಾಪುರ-ವಾರಣಾಸಿ ಗಡಿಯಲ್ಲಿ ಕಚವಾನ್ ಮತ್ತು ಮಿರ್ಜಾಮುರಾದ್ ನಡುವೆ ಪ್ರಯಾಣಿಸುತ್ತಿದ್ದಾಗ ಘಟನೆಯು 1 ಗಂಟೆ ವೇಳೆಗೆ ಸಂಭವಿಸಿದೆ.

13 ಜನರಲ್ಲಿ, 10 ಜನರು ಸಾವನ್ನಪ್ಪಿದರು, ಮತ್ತು ಗಾಯಗೊಂಡ 3 ಜನರನ್ನು ಚಿಕಿತ್ಸೆಗಾಗಿ ತಕ್ಷಣವೇ BHU ಗೆ ಕಳುಹಿಸಲಾಗಿದೆ. ಎಲ್ಲಾ 13 ಮಂದಿ ಭದೋಹಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿದರು ಮತ್ತು ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಅಪಘಾತದ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ, ಅಧಿಕಾರಿಗಳು ಅಪಘಾತಕ್ಕೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ. ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಘಟನಾ ಸ್ಥಳಕ್ಕೆ ಧಾವಿಸಿದರು. ಕಚವಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಎರಡು ಪ್ರತ್ಯೇಕ ಅಪಘಾತ, 9 ಮಂದಿ ಸಾವು
ಅದಿಲಾಬಾದ್ ಮತ್ತು ನಲ್ಗೊಂಡ ಜಿಲ್ಲೆಗಳ ರಸ್ತೆಗಳು ರಕ್ತಸಿಕ್ತವಾಗಿವೆ, ಸೋಮವಾರ ಮಧ್ಯರಾತ್ರಿ ಎರಡು ಪ್ರತ್ಯೇಕ ಅಪಘಾತಗಳಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಆದಿಲಾಬಾದ್ ಜಿಲ್ಲೆಯ ಗುಡಿಹತ್ನೂರು ಮಂಡಲದ ಮೇಕಲಗಂಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: ಭೀಕರ ಅಪಘಾತ; ಎರಡುವರೆ ಕಿಲೋ‌ಮೀಟರ್ ಬೈಕ್ ಸವಾರನನ್ನ ಎಳೆದೊಯ್ದ ಇನ್ನೋವಾ ಕಾರ್ ಚಾಲಕ; ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆದಿಲಾಬಾದ್ ಮೂಲದ ಮೊಯಿಜ್ (60), ಅಲಿ (8), ಖಾಜಾ ಮೊಯಿನುದ್ದೀನ್ (40) ಮತ್ತು ಮೊಹಮ್ಮದ್ ಉಸ್ಮಾನುದ್ದೀನ್ (10) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ರಿಮ್ಸ್‌ಗೆ ಕರೆದೊಯ್ಯಲಾಗಿದೆ. ಮತ್ತೋರ್ವ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಆದಿಲಾಬಾದ್ ಟೀಚರ್ಸ್ ಕಾಲೋನಿಗೆ ಸೇರಿದವರು ಎಂದು ಗುರುತಿಸಲಾಗಿದೆ. ಭೈಂಸಾದಿಂದ ಆದಿಲಾಬಾದ್‌ಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ